ಗೋಕಾಕ : ನಗರದ ವಾರ್ಡ್ ನಂಬರ 16ರಲ್ಲಿ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಶನಿವಾರ ಸಂಜೆ ಅಬ್ಬರದ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು.
ಪ್ರಚಾರ ವೇಳೆ ಮಾತನಾಡಿದ ಅವರು, ನನ್ನ ತಂದೆಯವರು ಕಳೆದ ಮೂವತ್ತು ವರ್ಷಗಳಿಂದ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಜನರಿಗೆ ನೀರು, ರಸ್ತೆ, ವಿದ್ಯುತ್ ಮೂಲ ಸೌಕರ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಬೆಳಗಾವಿ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದಾರೆ. ನಿಮ್ಮ ಆಶೀರ್ವಾದ ಮುಖ್ಯವಾಗಿದೆ. ಆದ ಕಾರಣ ನೀವು ಮತ ನೀಡಿ ಸಂಸತ್ ಗೆ ಆಯ್ಕೆ ಮಾಡಿ, ಕಳೆಸಬೇಕು ಎಂದು ಮನವಿ ಮಾಡಿದರು.
ಸತೀಶ್ ಜಾರಕಿಹೊಳಿಯವರು ಜನರ ಸೇವೆ ಮಾಡಲು ಶಪಥ ಮಾಡಿದ್ದು, ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು. ಅವರಿಗೆ ಮತ ನೀಡಿ, ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಕೈ ಮುಗಿದು ಬೇಡಿಕೊಂಡರು.
ಈ ಸಂದರ್ಭದಲ್ಲಿ ಮಹಾಲಿಂಗ ಮಂಗಿ, ವಿವೇಕ ಜತ್ತಿ ಸೇರಿದಂತೆ ಇತರರು ಇದ್ದರು.