ಬೆಳಗಾವಿ: ಮೇ.09 ರಂದು ನಡೆಯಲಿರುವ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲಿರುವ ಕನ್ನಡ ಪರ ಹೋರಾಟಗಾರ ಬಸವರಾಜ ಖಾನಪ್ಪನ್ನವರ ಅವರು ಏ 5 ಸೋಮವಾರದಂದು 1:00 ಘಂಟಗೆ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಸೋಮವಾರ ಮಧ್ಯಾಹ್ನ 1:00ಕ್ಕೆ ಘಂಟೆಗೆ ಬೆಳಗಾವಿ ತಾಲೂಕು ಕಛೇರಿಯಲ್ಲಿ ಕ.ಸಾ.ಪ. ಜಿಲ್ಲಾ ಉಪ ಚುನಾವಣಾಧಿಕಾರಿಗಳಾದ ರಾಘವೇಂದ್ರ ಪೂಜಾರಿ ಅವರಿಗೆ ಬಸವರಾಜ ಖಾನಪ್ಪನ್ನವರ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಮಠಾಧೀಶರು, ಹಿರಿಯ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಅವರ ಹಿತೈಷಿಗಳು ಹಾಜರಿರಲ್ಲಿದ್ದಾರೆ.
ರಾಜ್ಯ ಸರಕಾರ ಕೊರೋನಾ ಮಾರ್ಗಸೂಚಿಯನ್ನು ಪ್ರಕಟಿಸಿರುವುದರಿಂದ ಕಾರ್ಯಕರ್ತರು ಸಹಕರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬಾರದು ಎಂದು ಬಸವರಾಜ ಖಾನಪ್ಪನ್ನವರ ವಿನಂತಿಸಿಕೊಂಡಿದ್ದಾರೆ.
ಕಳೆದ 15 ವರ್ಷಗಳಿಂದ ಕನ್ನಡ ನಾಡು ,ನುಡಿ ,ನೆಲ ,ಜಲ ಭಾಷೆಯ ವಿಷಯಕ್ಕೆ ಸಂಬಂಧ ಪಟ್ಟಂತೆ ಕರ್ನಾಟಕ ರಕ್ಷಣಾ ವೇದಿಯ ಮುಖಾಂತರ ಹಲವಾರು ಕ್ರಿಯಾತ್ಮಕ ಕಾರ್ಯಗಳನ್ನು ಮಾಡುವುದರ ಜೊತೆಗೆ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸಲು ಹಗಲಿರುಳು ಶ್ರಮವಹಿಸಿ ಕಾರ್ಯಯೋನ್ಮುಖವಾಗಿದ್ದು, ಬರುವ ಮೇ 9 ರಂದು ನಡೆಯುವ ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆಯಲ್ಲಿ ಒಬ್ಬ ಕನ್ನಡಪರ ಹೋರಾಟಗಾರನಾಗಿ ಚುನಾವಣೆಗೆ ಸ್ವರ್ಧಿಸುತ್ತಿದ್ದು, ಸೋಮವಾರದಂದು ಬೆಳಗಾವಿಯ ತಹಶೀಲ್ದಾರ ಕಛೇರಿಯಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದು ಬಸವರಾಜ ಖಾನಪ್ಪನ್ನವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.