ಗೋಕಾಕ: ಕೆಎಮ್ಎಫ್ ನಿರ್ದೇಶಕರಾದ ಅಮರನಾಥ ರ ಜಾರಕಿಹೊಳಿಯವರ ಹುಟ್ಟು ಹಬ್ಬದ ನಿಮಿತ್ಯವಾಗಿ ಇಂದು ನಗರದಲ್ಲಿ ಅಭಿಮಾನಿಗಳು ಅತ್ಯಂತ ಸರಳವಾಗಿ ಅವರ ಹುಟ್ಟು ಹಬ್ಬವನ್ನು ಆಚರಿಸಿದರು.
ಅಮರನಾಥ ಜಾರಕಿಹೊಳಿ ಅವರು ತಾಲೂಕಿನ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಒಂದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಮಕ್ಕಳಿಗೆ ಅನುಕೂಲವಾಗುವಂತೆ ಎಲ್ಲ ರೀತಿಯ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ.
ಅದೇ ಅಮರನಾಥ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ಗುರುಪ್ರಸಾದ್ ಪಾವಡೆ ಹಾಗೂ ಅನೇಕ ಅಭಿಮಾನಿಗಳು ಇಂದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಂಪಲ ಮಜ್ಜಿಗೆ, ಉಪಹಾರ ವಿತರಿಸುವ ಮೂಲಕ ಸರಳತೆ ಆಚರಿಸಿದರು.
ತದನಂತರ ಶಿವಾ ಫೌಂಡೇಶನ್ ಗೆ ತೆರಳಿ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿ, ಮಕ್ಕಳಿಗೆ ಉಪಹಾರ ನೀಡಿ, ನಂತರ ಗೋಶಾಲೆಗೆ ತೆರಳಿ ಗೋವುಗಳಿಗೆ ಮೇವು ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದ್ಯಸರಾದ ಟಿ ಆರ್ ಕಾಗಲ, ಮಡೆಪ್ಪಾ ತೋಳಿನವರ,ಕ್ಷೇತ್ರ ಶಿಕ್ಷಣಾಧಿಕಾರಿ ಜಿ,ಬಿ ಬಳಗಾರ, ಮುಖಂಡರಾದ ಲಕ್ಷ್ಮಿಕಾಂತ ಎತ್ತಿನಮನಿ, ಸುರೇಶ ಸನದಿ, ಕೆಂಪಣ್ಣಾ ಮೈಲನ್ನವರ, ಹಣುಮಂತ ದುರ್ಗನವರ,ಶಶಿದರ ದೇಮಶೆಟ್ಟಿ ,ರಾಜೇಂದ್ರ ಗೌಡಪ್ಪಗೋಳ,ಲಕ್ಷ್ಮಣ ಖಡಕಭಾಂವಿ, ಮಾರುತಿ ಜಿಂಗಿ, ಸಚಿನ ಕಮಟೇಕರ, ವಿಶಾಲ ಪಟಗುಂದಿ ಮಯೂರ ಹೆಗ್ಗನ್ನವರ,ಪುನೀತ ಮಳ್ಳಿಗೇರಿ,ಮುತ್ತು ಜಮಖಂಡಿ, ರವಿ ಕಡಕೊಳ ಶಿಶು ಹಿರೇಮಠ ರಾಮಸಿದ್ದ ಕೋಣಿ ಹಾಗೂ ಅಭಿಮಾನಿಗಳು ಹಿರಿಯ ಮುಖಂಡರು, ಯುವಕರು ಉಪಸ್ಥಿತರಿದ್ದರು