ನದಿ ಇಂಗಳಗಾಂವ: ಈ ನಾಡಿನಲ್ಲಿ ಸಾವಿರಾರು ಮಠಗಳು ಇವೆ ಅದರಲ್ಲಿ ಶಿವಯೋಗಿಗಳು ನೆನಪಿಸುವುದು ಅದು ಶ್ರೀ ಮುರಘೇಂದ್ರ ಶಿವಯೋಗಿಗಳ ಶಕ್ತಿ ಅಪಾರವಾದದ್ದುಎಂದು ಅಥಣಿಯ ಗಚ್ಚಿನಮಠ ಶಿವಬಸವ ಸ್ವಾಮಿಗಳು ಹೇಳಿದರು.
ಅವರು ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿಯ ನಡೆಯುತ್ತಿರುವ ಶರಣ ಸಂಸ್ಕ್ರತಿ ಉತ್ಸವ 6 ನೇ ದಿನದ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ನೂರಾರು ಹಳ್ಳಿಗಳ ಶಿವಯೋಗಿ ಶ್ರೀಗಳಿಂದ ಮುರಘೇಂದ್ರ ಸ್ವಾಮಿಗಳ ಶತಮಾನೋತ್ಸವ ಅಂಗವಾಗಿ ಜೀವನ ಬಗ್ಗೆ ಪ್ರವಚಣ ಆಯೋಜಿಸಲಾಗುತ್ತದೆ. ಈ ಜಗ್ಗತ್ತಿನಲ್ಲಿ ಮಹಾರಾಜರು ಮಣ್ಣು,ಹೊಣ್ಣನ್ನು ಆಳಿದರೆ ಮಹಾತ್ಮರು ಮನಸ್ಸು ಆಳುತ್ತಾರೆ ಅಂತಹ ಮಹಾತ್ಮ ಶ್ರೀ ಮುರಘೇಂದ್ರ ಶಿವಯೋಗಿಗಳು. ನಾವುಗಳು ಹೇಗೆ ನಡೆದುಕೊಳ್ಳುತ್ತವೆ ಹಾಗೆಯೇ ನಾವು ಪಡೆದುಕೊಳ್ಳುತ್ತೆವೆ. ಶಿವಯೋಗಿಗಳ ಸೇವೆ ಮಾಡುವ ಮೂಲಕ ಮನಸ್ಸಿಗೆ ತೃಪ್ಪಿಯನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.