ಗೋಕಾಕ ನಗರದಲ್ಲಿ ಹಿರಿಯ ಸದಸ್ಯರಾದ ಕೋತ್ವಾಲ ಗೌಡರು ಹಾಗೂ ಗಿರೀಶ್ ಖೋತ ಅಕಾಲಿಕ ನಿಧನ ಹೊಂದಿದ ಕಾರಣ ನಗರ ವಾರ್ಡ ನಂ 13 ಮತ್ತು ವಾರ್ಡ ನಂ 26 ರಲ್ಲಿ ಉಪಚುನಾವಣೆ ಬಂದಿದೆ.
ಹೌದು ವಾರ್ಡ ನಂ 13 ಕ್ಕೆ “ಸಾಮಾನ್ಯ” ಹಾಗೂ ವಾರ್ಡ ನಂ 26 ಕ್ಕೆ ಹಿಂದುಳಿದ ವರ್ಗಗಳ “ಅ” ಮೀಸಲಾತಿ ಪ್ರಕಟವಾಗಿದ್ದು. ನಾಮಪತ್ರಗಳನ್ನು ಸಲ್ಲಿಸುವ ಕೊನೆಯ ದಿನಾಂಕ 17-03-2021. ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ 18-03-2021. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ 20-03-2021. ಮತದಾನ ನಡೆಸಬೇಕಾದ ದಿನಾಂಕ 29-03-2021 ಮರು ಮತದಾನ, ಅವಶ್ಯಕ ಇದ್ದರೆ ಮತದಾನ ದಿನಾಂಕ 30-03-2021.
ಮತದಾನ ಎಣಿಕೆ ದಿನಾಂಕ 31-03-2021. ಚುನಾವಣೆ ಆಯೋಗ ಪ್ರಕಟಣೆಯಾಗಿದೆ.
ಈಗಾಗಲೇ ವಾರ್ಡ ನಂ 13 ರಲ್ಲಿ ಉಪಚುನಾವಣೆಯ ಕಾವು ಜೋರಾಗಿದ್ದು, ಅನೇಕ ಅಭ್ಯರ್ಥಿಯಾಗಲು ನಾ ಮುಂದು ನಿ ಮುಂದು ಅಂತ ನಗರದ ಹಿರಿಯರನ್ನು ಭೇಟಿ ಮಾಡಿ
ನಾಮಪತ್ರ ಸಲ್ಲಿಸುತ್ತಿದ್ದಾರೆ. ನಾಳೆ ಕೊನೆಯ ದಿನಾಂಕ ಆಗಿದ್ದರಿಂದ ಇಂದು ಹೆಚ್ಚಿನ ಜನರು ನಾಮಪತ್ರ ಸಲ್ಲಿಸಿದ್ದಾರೆ.
ಅದೇ ರೀತಿಯಾಗಿ ಇಂದು ಗೋಕಾಕ ಮಾವ ಅಳಿಯನ ಜಟಾ ಪಟಿ ಶುರುವಾಗಿದೆ. ಹೌದು ನಗರದ ವಾರ್ಡ ನಂ 13 ರಲ್ಲಿ ಅನೇಕ ಜನ ನಾಮಪತ್ರ ಸಲ್ಲಿಸಿದ್ದು ಆದರೇ ಅಚ್ಚರಿ ಏನೆಂದರೆ ಒಂದೇ ವಾರ್ಡಿನಲ್ಲಿ ಮಾವ ಅಳಿಯ ಸ್ಪರ್ಧೆ ಮಾಡುತ್ತಿದ್ದಾರೆ.
ಅಳಿಯ ವಿಷ್ಣು ಗೌಡ ಪಾಟೀಲ್ ಹಾಗೂ ಮಾವ ಮಂಜುನಾಥ್ ಅವರಾಧಿ ಇಂದು ಒಂದೇ ದಿನ ನಾಮಪತ್ರ ಸಲ್ಲಿಸಿದ್ದಾರೆ.
ವಾರ್ಡ ನಂ 13 ರಲ್ಲಿ ಉಪ ಚುನಾವಣೆ ತಯಾರಿ ಜೋರಾಗಿದ್ದು ಯಾರು ಗುಲಾಲ ಹಾರಿಸುತ್ತಾರೆ ಅಂತ ಕಾದು ನೋಡಬೇಕು.
ಇಂದು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮುಖಂಡರಾದ ವಿರಣ್ಣಾ ಹುದ್ದಾರ, ಲಕ್ಷ್ಮಣ ಖಡಕಭಾಂವಿ, ಸಾಯಿನಾಥ ಮಾಲದಿನ್ನಿ, ವಿಶ್ವನಾತ ಜಾನಕಿ, ಪ್ರದೀಪ್ ಗೌಡ ಪಾಟೀಲ್, ಕಿರಣ ಗಂಗರಡ್ಡಿ, ನಾಗಪ್ಪಾ ಮಾರಡ್ಡಿ, ವಿದೇಶ ಷಾ, ಅನೇಕ ಯುವಕರ ಉಪಸ್ಥಿತರಿದ್ದರು.