ಗೋಕಾಕ: ನಾಡಿನ ಹೆಸರಾಂತ ವಿಮರ್ಶಕರು, ಸಂಶೋಧಕರು, ವಿದ್ವಾಂಸರು ಡಾ ಸಿ ಕೆ ನಾವಲಗಿ ಅವರು ಗೋಕಾಕ ತಾಲೂಕಿನ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶ್ರೀಯುತರು ನೂರಕ್ಕೂ ಹೆಚ್ಚು ಸಂಶೋಧನ ಹಾಗೂ ವಿಮರ್ಶೆ ಗ್ರಂಥ. ರಾಜ್ಯ ಹಾಗೂ ರಾಷ್ಟ್ರೀಯ ಸೇಮಿನಾರಗಳಲ್ಲಿ ಉಪನ್ಯಾಸ ನೀಡಿದ್ದಾರೆ. ನಿವೃತ್ತ ಕನ್ನಡ ಅಧ್ಯಾಪಕರು ಹಾಗೂ ಬೆಳಗಾವಿ ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ನಂದಾ ದೀಪವಾಗಿರು ಡಾ. ಸಿ ಕೆ ನಾವಲಗಿ ಅವರ ಆಯ್ಕೆಗೆ ನಾಡಿನ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
Check Also
*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …