ಗೋಕಾಕ: ಪಂಚಮಸಾಲಿ ಸಮುದಾಯಕ್ಕೆ ಕೂಡಲೇ 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಜನರು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರಗೆ ಮನವಿ ಸಲ್ಲಿಸಿದರು.
ಸಮುದಾಯದ ಸ್ಥಳೀಯ ಅಧ್ಯಕ್ಷ ಪ್ರಕಾಶ ಬಾಗೋಜಿ ಮಾತನಾಡಿ, “2ಎ ಮಿಸಲಾತಿ ನೀಡಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಮುಖ್ಯಮಂತ್ರಿಗಳು ಮಧ್ಯಾಹ್ನ ಒಂದು ಹೇಳಿಕೆ, ಸಂಜೆ ಒಂದು ಹೇಳಿಕೆ ನೀಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಯಡಿಯೂರಪ್ಪನವರಿಗೆ ಮೀಸಲಾತಿ ನೀಡಲು ಆಗದಿದ್ದರೇ ರಾಜೀನಾಮೆ ನೀಡಿ, ಪದವಿ ತ್ಯಜಿಸಲಿ. ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರು ಮುಖ್ಯಮಂತ್ರಿಯಾಗಿ ಮೀಸಲಾತಿ ಜಾರಿಗೊಳಿಸುತ್ತಾರೆ” ಎಂದು ಆಗ್ರಹಿಸಿದರು.
CKNEWSKANNADA / BRASTACHARDARSHAN CK NEWS KANNADA