ಯಮಕನಮರಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹತ್ತರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಂಗೀತಾ ಬಳ್ಳಾರಿ ಪಾತ್ರೋಟ ಹಾಗೂ ಉಪಾಧ್ಯಕ್ಷರಾಗಿಅಕ್ಷತಾ ಉಮೇಶ ಭೀಮಗೋಳ ಅವಿರೋಧವಾಗಿ ಆಯ್ಕೆಯಾದರು.
ಇದೇ ವೇಳೆ ನೂತನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಯುವ ಧುರೀಣ ರವಿ ಅಣ್ಣಾ ಜಿಂಡ್ರಾಳಿ, ಮಹಾದೇವ ಪಟೋಳಿ, ತಾಲೂಕ ಪಂಚಾಯಿತಿಯ ಅಧ್ಯಕ್ಷ ಡಿ.ಕೆ.ಬಸ್ಸಾಪೂರಿ, ರಾಮು ಚೌಗಲಾ, ಜೋಮನಿಂಗ ಪಟೋಳಿ, ಸಿದ್ದಪ್ಪಾ ಕುಂಟಸತ್ತಿ, ಬಸವರಾಜ ಅತ್ತಿಮರದ ಹನುಮಂತ ಗಾಡಿವಡ್ಡರ ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA