ಗೋಕಾಕ: ಗೋಕಾಕ ಮತಕ್ಷೇತ್ರದ ಉಪ್ಪಾರಟ್ಟಿ ಹಾಗೂ ಮಾಲದಿನ್ನಿ ಗ್ರಾಮದಲ್ಲಿ ೧ ಕೋಟಿ ೬೦ ಲಕ್ಷ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ನೇತ್ರತ್ವದಲ್ಲಿ ಶನಿವಾರದಂದು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ನೀರಾವರಿ ಇಲಾಖೆಯಿಂದ ಎಸ್‌ಇಪಿಟಿಎಸ್‌ಪಿ ಯೋಜನೆಯಡಿಯಲ್ಲಿ ೮೫ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ, ೧೫ ಲಕ್ಷ ರೂಪಾಯಿ ವೆಚ್ಚದ ಸಮುದಾಯ ಭವನ. ೨೦ ಲಕ್ಷ ರೂಪಾಯಿ ವೆಚ್ಚದ ಪೇರ‍್ಸ್ ಅಳವಡಿಸುವ ಕಾಮಗಾರಿ, ೨೦ ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಹಾಗೂ ಅಜ್ಜನಕಟ್ಟಿ ಗ್ರಾಮದಲ್ಲಿ ೨೦ಲಕ್ಷ ರೂಪಾಯಿ ವೆಚ್ಚದ ಸಮುದಾಯ ಭವನ ಸೇರಿ ೧ ಕೋಟಿ ೬೦ ಲಕ್ಷ ರೂಪಾಯಿ ವೆಚ್ಚದ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಉಪ್ಪಾರಟ್ಟಿ ಗ್ರಾಮದ ಗ್ರಾಮಸ್ಥರು ಆತ್ಮೀಯವಾಗಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಮಡ್ಡೆಪ್ಪ ತೋಳಿನವರ, ಟಿ ಆರ್ ಕಾಗಲ, ಗ್ರಾಪಂ ಸದಸ್ಯರಾದ ಹನಮಂತ ದುರ್ಗನ್ನವರ, ಮಹಾದೇವ ಚುನನ್ನವರ, ಸಿದ್ದಪ್ಪ ಆಡಿನ, ರಾಮಸಿದ್ಧ ಮಜ್ಜಗಿ, ರಂಗಪ್ಪ ನಂದಿ, ಕರೇಪ್ಪ ಕೊಳವಿ, ಸಿದ್ದಪ್ಪ ಬೂದಿಗೊಪ್ಪ, ಯಮನಪ್ಪ ಬನಾಜ, ತಿಪ್ಪಣ್ಣ ಕಡಕೋಳ, ಬಾಳಯ್ಯ ಅಜ್ಜನವರ, ಲಕ್ಕಪ್ಪ ಮೆಳವಂಕಿ, ದಶರಥ ಖಿಚಡಿ, ಹನಮಂತ ಖಿಚಡಿ, ಮುಖಂಡರುಗಳಾದ ಯಲ್ಲಪ್ಪ ಬೂದಿಗೊಪ್ಪ, ಲಕ್ಷö್ಮಣ ಆಡಿನ, ಸಿದ್ದಪ್ಪ ಖಿಚಡಿ, ನಾರಾಯಣ ಮೂಡಲಗಿ, ಗುರುನಾಥ ಭಾಗೋಜಿ, ರಾಮಪ್ಪ ಕಡಕೋಳ, ಮಹಾದೇವ ಭಂಡಿ, ಹನಮಂತ ಕಡಕೋಳ, ರಾಮಪ್ಪ ಭಾಗೋಜಿ, ಸಿದ್ದಪ್ಪ ಕೊಳವಿ, ಸಂತೋಷ ಚಿಗದನ್ನವರ, ಸಂತೋಷ ಕಂಕಣವಾಡಿ, ಕಲ್ಲಪ್ಪ ಖಿಚಡಿ, ಅಡಿವೆಪ್ಪ ಚಿಗದನ್ನವರ, ಸೇರಿದಂತೆ ಗ್ರಾಮಸ್ಥರು ಇದ್ದರು.
Check Also
*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …