
ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಭಾರತ ದೇಶ ಸರ್ವ ಸಮುದಾಯದ ಪ್ರಜೆಗಳಿಗೂ ಸಮಾನ ಅವಕಾಶ ನೀಡಿದೆ. ಎಲ್ಲಕ್ಕಿಂತ ಶ್ರೇಷ್ಠ ನಮ್ಮ ರಾಷ್ಟ್ರ ಧರ್ಮವಾಗಿದೆ ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು 72ನೇ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ತಿಳಿಸಿದ್ದಾರೆ. ನಮ್ಮ ದೇಶದ ತಿರಂಗಾಧ್ವಜ, ನಮ್ಮ ಹೆಮ್ಮೆಯ ಸೈನಿಕರ ಉಸಿರಿನಿಂದಲೇ ಹಾರಾಡುತ್ತಿದೆ. ಹಗಲು ರಾತ್ರಿ ಎನ್ನದೇ ನಮ್ಮ ದೇಶದ ಗಡಿ ಕಾಯುತ್ತಿರುವ ವೀರ ಯೋಧರಿಗೆ ನಾವು ನಮಿಸಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಗಣರಾಜ್ಯೋತ್ಸವದ ದಿನ ನಾವು ಸದಾ ನಮ್ಮ ಸಂವಿಧಾನ ಮತ್ತು ಗಡಿಯಲ್ಲಿರುವ ಯೋಧರನ್ನು ಗೌರವಿಸೋಣ ಎಂದು ಸಚಿವರು ತಮ್ಮ ಶುಭಾಶಯಗಳನ್ನು ಕೋರಿದ್ದಾರೆ.
CKNEWSKANNADA / BRASTACHARDARSHAN CK NEWS KANNADA