Breaking News

*ಜಲಜೀವನ ಮಿಷನ್ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ*


ಮೂಡಲಗಿ : ತಮ್ಮ-ತಮ್ಮಲ್ಲಿಯ ವೈಯಕ್ತಿ ಮನಸ್ತಾಪಗಳನ್ನು ಮರೆತು ಗ್ರಾಮದ ಅಭಿವೃದ್ಧಿಗೆ ಒಂದಾಗಿ  ಶ್ರಮಿಸುವಂತೆ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ಧರ್ಮಟ್ಟಿ-ಪಟಗುಂದಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ 2.36 ಕೋಟಿ ರೂ. ವೆಚ್ಚದಲ್ಲಿ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದಾಗಿ ದುಡಿದರೆ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.

ಧರ್ಮಟ್ಟಿ-ಪಟಗುಂದಿ ಗ್ರಾಮದ ಮನೆ-ಮನೆಗೆ ಗಂಗೆ ಎಂಬ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಲಾಗಿದ್ದು, ಧರ್ಮಟ್ಟಿ ಗ್ರಾಮದ 1015 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಪಟಗುಂದಿ ಗ್ರಾಮದ 182 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ಪಟಗುಂದಿ ಹಾಗೂ ಧರ್ಮಟ್ಟಿ ಗ್ರಾಮಗಳಲ್ಲಿ ತಲಾ ಒಂದು ಲಕ್ಷ ಲೀಟರ್ ಸಾಮಥ್ರ್ಯದ ಎರಡು ಟ್ಯಾಂಕ್‍ಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಪೈಪಲೈನ್ ಕಾಮಗಾರಿಯೂ ಸಹ ನಡೆಯಲಿದೆ ಎಂದು ಹೇಳಿದರು.

ಜಲಜೀವನ ಮಿಷನ್ ಕಾಮಗಾರಿಯಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಲಿದೆ. ಮನೆ-ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಪಟಗುಂದಿ ಮತ್ತು ಧರ್ಮಟ್ಟಿ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಬೇಡಿ ಎಂದು ಗ್ರಾಮಸ್ಥರಿಗೆ ಸಲಹೆ ಮಾಡಿದರು.

ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಸದಸ್ಯರುಗಳು ಅಭಿವೃದ್ಧಿ ಕೆಲಸಗಳಿಗೆ ನೆರವಾಗಬೇಕು. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಗ್ರಾಮದ ಮಟ್ಟದಲ್ಲಿಯೇ ಪರಿಹರಿಸುವ ಕೆಲಸ ಮಾಡಬೇಕೆಂದು ಅವರು ಹೇಳಿದರು.

ಮುಖಂಡರಾದ ಹನಮಂತ ತೇರದಾಳ, ರಾವಸಾಬ ಪಾಟೀಲ, ಗಿರಿಗೌಡ ಪಾಟೀಲ, ಬಿ.ಬಿ. ಪೂಜೇರಿ, ಪರಶುರಾಮ ಸನದಿ, ಅಪ್ಪಯ್ಯ ಪೂಜೇರಿ, ಹನಮಂತ ನಾಯಿಕ, ಚನಗೌಡ ಪಾಟೀಲ, ಬಸವರಾಜ ಕಸ್ತೂರಿ, ಲಕ್ಷ್ಮಣ ತೆಳಗಡೆ, ನಾಗಪ್ಪ ಸನದಿ, ಜಡೆಪ್ಪ ಮಂಗಿ, ಪಾರೇಶ ಹುಕ್ಕೇರಿ, ಅಜೀತ ಹೊಸಮನಿ, ಪರಸಪ್ಪ ಉಪ್ಪಾರ, ಮಾನಿಕ ಬೋಳಿ, ಮಾರುತಿ ಸರ್ವಿ, ಪರಮಾನಂದ ತುಬಾಕಿ, ಬಸು ತುಂಬೂಚಿ, ಲಗಮಣ್ಣಾ ಕುಟ್ರಿ, ಉದ್ದಪ್ಪ ಹಳ್ಳೂರ, ಲಕ್ಕಪ್ಪ ತೆಳಗಡೆ, ಮಹಾದೇವ ಬಡ್ಡಿ, ಗಂಗಪ್ಪ ಹಂಜಿ, ಅಶೋಕ ಸರ್ವಿ, ಕಾಸೀಂಸಾಬ ಫಿರಜಾದೆ, ಮಹಾವೀರ ಬೋಳಿ, ಗೋಕಾಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಐ.ಎಂ. ದಫೆದಾರ, ಕಿರಿಯ ಅಭಿಯಂತರ ನೀಲಮ್ಮಾ ಲಮಾಣಿ ಸೇರಿದಂತೆ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ