ಹೊಸ ಕ್ಯಾಲೆಂಡರ್ ವರ್ಷದ ಪ್ರಾರಂಭಿಕ ದಿನವಾದ ಇಂದು, ಅಸ್ಸಾಂ ರಾಜ್ಯದ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿಪೀಠ *ಶ್ರೀ ಕಾಮಾಕ್ಯ ದೇವಾಲಯ* ಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ*,
*ಕಾಮಾಕ್ಯ ದೇವಾಲಯ* ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡಂತೆ ವಿವಿಧ ರೂಪಗಳಲ್ಲಿ ಕಂಗೊಳಿಸುವ *ಜಗನ್ಮಾತೆ ತಾಯಿ* ಗೆ ಪೂಜೆ ಸಲ್ಲಿಸಿದ ಸಚಿವ *ರಮೇಶ್ ಜಾರಕಿಹೊಳಿ*, ಮಾರಕ ಕೊರೋನಾ ಸೋಂಕು ಬೇಗ ನಾಶವಾಗಲಿ, ಸಮಾಜ ಸೋಂಕುಮುಕ್ತವಾಗಲಿ ಎಂದು ಬೇಡಿಕೊಂಡರು.