ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಶಾಸಕ ಸತೀಶ ಜಾರಕಿಹೋಳಿ ಆಪ್ತರಾದ ಕೀರಣ ರಜಪೂತ, ಬರಮಾ ದೂಪದಾಳೆ
ಮೇಲೆ ಗುಂಡಿನ ದಾಳಿ ಗ ನಡೆಸಿ ಫರಾರಿಯಾಗಿರುವ ಘಟನೆ ನಡೆದಿದೆ.ಈ ದಾಳಿಯು ಕಂಟ್ರಿ ಪಿಸ್ತೋಲದಿಂದ ನಡೆಸಲಾಗಿದೆ. ಕಳೆದ ಬುಧವಾರ ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿಯ ನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ,
ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.
ಅಲ್ಲದೆ ಗುಂಡಿನ ದಾಳಿ ಮಾಡಿರುವದು ಯಾವ ಕಾರಣಕ್ಕೆ, ಯಾರು ದಾಳಿ ಮಾಡಿದ್ದಾರೆ ಎನ್ನುವದು ಇನ್ನು ತಿಳಿದಿಲ್ಲ. ಆ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣ ವನ್ನು ಶೀಘ್ರವಾಗಿ ಭೇದಿಸುವದಾಗಿ ನಿಂಬರಗಿ ಅವರು ಹೇಳಿದ್ದಾರೆ. ಆದರೆ ಈ ದಾಳಿಯಲ್ಲಿ ಕಂಟ್ರಿ ಪಿಸ್ತೂಲ ಉಪಯೋಗಿಸಿರಬಹುದು ಎನ್ನುವ ಸಂಶಯವಿದೆ. ಈ ಬಗ್ಗೆ ಪತ್ತೆ ಮಾಡಲಾಗುವದು ಎಂದು ಲಕ್ಷ್ಮಣ ನಿಂಬರಗಿ ಅವರು ಹೇಳಿದ್ದಾರೆ
CKNEWSKANNADA / BRASTACHARDARSHAN CK NEWS KANNADA