Breaking News

ಸಾರಿಗೆ ನೌಕರರ ಮುಷ್ಕರ ಸುಖಾಂತ್ಯ!


ಬೆಂಗಳೂರು : ಕೊನೆಗೂ ರಾಜ್ಯ ಸರ್ಕಾರ ಸಾರಿಗೆ ನೌಕರರ ಹೋರಾಟಕ್ಕೆ ಮಣಿದಿದೆ. ಮುಷ್ಕರ ನಿರತ ಸಾರಿಗೆ ನೌಕರರು ರಾಜ್ಯ ಸರ್ಕಾರದ ಮುಂದಿಟ್ಟಿದ್ದಂತ 10 ಬೇಡಿಕೆಗಳಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂಬುದಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಹೊರತಾಗಿ 9 ಬೇಡಿಕೆಗಳಿಗೆ ಅಸ್ತು ಎಂದಿದೆ. ಇಂತಹ ಪತ್ರವನ್ನು BMTC ಅಧ್ಯಕ್ಷ ನಂದೀಶ್ ರೆಡ್ಡಿಯೇ ಫ್ರೀಡಂ ಪಾರ್ಕ್ ಗೆ ಆಗಮಿಸಿ, ಮುಷ್ಕರ ನಿರತ ನೌಕರರಿಗೆ 10 ಬೇಡಿಕೆಗಳಲ್ಲಿ 9 ಬೇಡಿಕೆ ಈಡೇರಿಸಿದಂತ ಬೇಡಿಕೆ ಪತ್ರ ನೀಡಿದ್ದರಿಂದಾಗಿ, ಸಾರಿಗೆ ನೌಕರರ ಮುಷ್ಕರ ಸುಖಾಂತ್ಯಗೊಂಡಿದೆ.

ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಿರತರಾಗಿರುವಂತ ಸಾರಿಗೆ ನೌಕರರ ಸ್ಥಳಕ್ಕೆ, BMTC ಅಧ್ಯಕ್ಷ ಸರ್ಕಾರ ಪರವಾಗಿ ನಂದೀಶ್ ರೆಡ್ಡಿ ಸರ್ಕಾರ ಬೇಡಿಕೆ ಈಡೇರಿಕೆ ಪತ್ರದೊಂದಿಗೆ ಆಗಮಿಸಿದರು.

ಇದಕ್ಕೆ ಕಾರಣ, ಸರ್ಕಾರ ತಮ್ಮ ಬೇಡಿಕೆ ಈಡೇರಿಸಿದ ಬಗ್ಗೆ ಬೇಡಿಕೆ ಪತ್ರ ನೀಡೋವರೆಗೆ ಮುಷ್ಕರ ಹಿಂತೆಗೆದುಕೊಳ್ಳೋದಿಲ್ಲ ಎಂಬ ಬಿಗಿ ಪಟ್ಟು ಆಗಿತ್ತು. ಹೀಗಾಗಿ BMTC ಅಧ್ಯಕ್ಷ ನಂದೀಶ್ ರೆಡ್ಡಿ ಬೇಡಿಕೆ ಈಡೇರಿಸಿದಂತ ಪತ್ರದೊಂದಿಗೆ ಪ್ರತಿಭಟನಾ ನಿರತ ಸಾರಿಗೆ ನೌಕರರ ಸ್ಥಳಕ್ಕೆ ಆಗಮಿಸಿ, ಪ್ರದರ್ಶಿಸಿದರು.

ಇನ್ನೂ ಮುಂದುವರೆದು ರಾಜ್ಯ ಸರ್ಕಾರ ನೀವು ಇಟ್ಟಿದ್ದಂತ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತ ಬೇಡಿಕೆ ಹೊರತಾಗಿ ಇನ್ನೆಲ್ಲಾ ಬೇಡಿಕೆ ಈಡೇರಿಸಿರುವುದಾಗಿ ತಿಳಿಸಿದರು. ನೌಕರರಿಗೂ ಆರೋಗ್ಯ ಸಂಜೀವಿನಿ ವಿಮಾ ಯೋಜನೆ, ಕೊರೋನಾದಿಂದ ಮೃತಪಟ್ಟ ಕುಟುಂಬಕ್ಕೆ 30 ಲಕ್ಷ ವಿಮಾ ಪರಿಹಾರ, ಅಂತರ್ ನಿಗಮ ವರ್ಗಾವಣೆಗಾಗಿ ಹೊಸ ನೀತಿ, ತರಬೇತಿ ಅವಧಿ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ, ಸಾರಿಗೆ ನಿಗಮದಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ, ಸಿಬ್ಬಂದಿ ಕರ್ತವ್ಯ ನಿರ್ವಹಣೆ ವೇಳೆ ಭತ್ಯೆ, ನೌಕರರ ಕಿರುಕುಳ ತಪ್ಪಿಸಲು ಸೂಕ್ತ ವ್ಯವಸ್ಥೆಯಂತ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಸಚಿವ ಉಮೇಶ್‌ ಕತ್ತಿ ಹೃದಯಾಘಾತ, ಆಸ್ಪತ್ರೆಗೆ ದಾಖಲು!

ಬೆಂಗಳೂರು: ಸಚಿವ ಉಮೇಶ್‌ ಕತ್ತಿ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇಲ್ಲಿನ ಡಾಲರ್ಸ್‌ ಕಾಲೋನಿ ನಿವಾಸದಲ್ಲಿದ್ದಾಗ ಅವರಿಗೆ ರಾತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ