ಬೆಳಗಾವಿ : ಹೊನಗಾ ಗ್ರಾಮ ಪಂಚಾಯಿತಿಗೆ 6ನೇ ವಾರ್ಡ್ ಗೆ ಅವಿರೋಧ ಆಯ್ಕೆಯಾದ ಮಲ್ಲವ್ವ ಗಂಗಪ್ಪ ವರಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿ ಗ್ರಾಮ ಪಂಚಾಯಿತಿಗೆ ಐದನೇ ಬಾರಿಗೆ ಆಯ್ಕೆ ಆಗಿದ್ದಾರೆ. ಅವಿರೋಧ ಆಯ್ಕೆಗೆ ಕಾರಣರಾದ ಶಾಸಕರಿಗೆ ಹೂವ ಗುಚ್ಛ ನೀಡಿ, ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಂಗಪ್ಪ ವರಗ, ಲಗಮಣ್ಣ ಹುಂದ್ರಿ, ಪುಂಡಲಿಕ ಪಾಟೀಲ, ಅನೀಲ ಆನಂದಾಚೆ, ಸುರೇಶ ನಾಯ್ಕ ಸೇರಿದಂತೆ ಇತರರು ಇದ್ದರು
CKNEWSKANNADA / BRASTACHARDARSHAN CK NEWS KANNADA