ಬೆಂಗಳೂರು: ಗೋ ಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡುವಲ್ಲಿ ರಾಜ್ಯ ಸರ್ಕಾರ ಕೊನೆಗೂ ಯಶಸ್ವಿಯಾಗಿದೆ.
ವಿಧಾನ ಮಂಡಲ ಅಧಿವೇಶನದಲ್ಲಿ ಬುಧವಾರ ಪ್ರತಿಪಕ್ಷದ ಧರಣಿ ನಡುವೆಯೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸಿದರು. ಇದಕ್ಕೂ ಮುನ್ನಾ ವಿಧಾನಸೌಧ ಆವರಣದಲ್ಲಿ ಗೋ ಪೂಜೆ ಮಾಡಲಾಯಿತು.
ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ತಂಡ ವಿರೋಧಿಸಿತ್ತಾದರೂ ಗದ್ದಲದ ನಡುವೆಯೂ ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಪಾಸ್ ಮಾಡುವಲ್ಲಿ ರಾಜ್ಯ ಸರ್ಕಾರ ಗೆಲುವಿನ ನಗೆ ಬೀರಿತು. ಸದನದ ಬಾವಿಯಲ್ಲಿ ಧರಣಿಗೆ ಕುಳಿತ ವಿಪಕ್ಷ ಶಾಸಕರು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ವಿಧೇಯಕಕ್ಕೆ ಬಿಎಸಿ ಸಭೆಯಲ್ಲಿ ಒಪ್ಪಿಗೆ ಪಡೆದಿಲ್ಲ.
ಸುಘ್ರೀವಾಜ್ಞೆ ಆಗಿರುವ ಬಿಲ್ಗಳನ್ನ ಮಾತ್ರ ಮಂಡಿಸಲು ಮಾತುಕತೆ ಆಗಿತ್ತು. ಈಗ ಬೇರೆ ರಾಗ ಎತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ, ಸದನ ಬಹಿಷ್ಕರಿಸಿದರು.