ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಅವರ ಪತ್ನಿ ಜಾಹ್ನವಿ ಪ್ರತಿಕ್ರಿಯಿಸಿದ್ದಾರೆ. ಸಂತೋಷ್ರ ಈ ನಿರ್ಧಾರಕ್ಕೆ ಅವರ ರಾಜಕೀಯ ವೃತ್ತಿಜೀವನದಲ್ಲಾಗ್ತಿರೋ ಬದಲಾವಣೆಗಳೇ ಕಾರಣ ಎಂದಿದ್ದಾರೆ.
ನಿನ್ನೆ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಾಹ್ನವಿ, ಅವರು ಬೆಳಗ್ಗೆಯಿಂದ ಸ್ವಲ್ಪ ಬೇಜಾರಲ್ಲಿದ್ರು. ಸಂಜೆ ಹೊರಗಡೆ ಹೋಗಿ 7 ಗಂಟೆಗೆ ಮನೆಗೆ ಬಂದ್ರು. ಊಟಕ್ಕೆ ಏನ್ಮಾಡಲಿ ಅಂತ ಕೇಳಲಿಕ್ಕೆ ಹೋದಾಗ ಪ್ರಜ್ಞೆ ತಪ್ಪಿದ್ರು. ಕೂಡಲೇ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದ್ವಿ ಎಂದರು.
ಅವರ ಪೊಲಿಟಿಕಲ್ ಕರಿಯರ್ ಸ್ವಲ್ಪ ಇಂಬ್ಯಾಲೆನ್ಸ್ ಆಗಿತ್ತು.ಅದನ್ನು ಮನಸ್ಸಿಗೆ ತೆಗೆದುಕೊಂಡಿದ್ರು. ಕೌಟುಂಬಿಕವಾಗಿ ನಾವು ತುಂಬಾನೇ ಚೆನ್ನಾಗಿದ್ದೆವು. ಸಂಜೆ 7:30ಕ್ಕೆ ವಿಚಾರ ನಮ್ಮ ಗಮನಕ್ಕೆ ಬಂತು. ವೈದ್ಯರ ಬಳಿ ಮಾತಾಡಿದ್ದೀವಿ, ಬೆಳಗ್ಗೆ ವೇಳೆಗೆ ಹುಷಾರಾಗ್ತಾರೆ ಅಂದಿದ್ದಾರೆ ಅಂತ ಅವರು ತಿಳಿಸಿದ್ರು.