ಗೋಕಾಕ : ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಡಿ.5 ರಂದು ಹಲವು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸಂಘಟನೆಯಿಂದ ಬಂದ್ ಗೆ ಬೆಂಬಲವಿಲ್ಲ ಎಂದು ಕರವೇ ಗಜಸೇನೆ ಉತ್ತರ ಕರ್ನಾಟಕ ಯುವ ಘಟಕ ಅಧ್ಯಕ್ಷರಾದ ಪವನ ಮಾಹಾಲಿಂಗಪುರ ಅವರು ತಿಳಿಸಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು ಡಿಸೆಂಬರ್ 5 ರಂದು ಮಾಡುತ್ತಿರುವ ಕರ್ನಾಟಕ ಬಂದ್ ಗೆ ಬೆಂಬಲವಿಲ್ಲ,ಆದರೆ ಪ್ರಾದಿಕಾರದ ವಿರುದ್ಧ ವಿಭಿನ್ನ ರೀತಿಯ ಹೋರಾಟ ಮಾಡುವುದರ ಮುಖಾಂತರ ಸರಕಾರ ಗಮನ ಸೆಳೆಯುವ ಕಾಯ೯ ಮಾಡಲಾಗುವುದು ಎಂದು ಹೇಳಿದರು.
ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಕನ್ನಡ ಭಾಷಿಕರಿಗೆ ನೋವಾಗಿದ್ದು, ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿರುವಾಗ ಶಾಸಕ ಯತ್ನಾಳ ನಕಲಿ ಹೋರಾಟಗಾರರು ಹಾಗೂ ರೋಲ್ಕಾಲ್ ಸಂಘಟನೆಗಳು ಎಂದು ನೀಡಿರುವ ಹೇಳಿಕೆ ಖಂಡನೀಯ ಎಂದು ಹೇಳಿದರು.
ಯತ್ನಾಳ ಒಬ್ಬ ಕನ್ನಡಿಗರ ಜನಪ್ರತಿನಿಧಿಯಾಗಿ ನಡೆದುಕೊಳ್ಳಬೇಕಾಗಿತ್ತು. ಆದರೆ, ಕನ್ನಡಿಗರಿಗೆ ಈ ರೀತಿ ಅವಹೇಳನ ಮಾಡಿದ್ದು ಸರಿಯಲ್ಲ. ಈ ಕೂಡಲೇ ಶಾಸಕರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
CKNEWSKANNADA / BRASTACHARDARSHAN CK NEWS KANNADA