ಯಮಕನಮರಡಿ: ‘ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ ಎಂದು ಯುವ ದುರೀಣ ರಾಹುಲ್ ಜಾರಕಿಹೊಳಿ ಹೇಳಿದರು.
ಸುತಗಟ್ಟಿ ಗ್ರಾಮದಲ್ಲಿ ಗೆಳೆಯರ ಬಳಗ ವತಿಯಿಂದ ಶನಿವಾರ ಆಯೋಜಿಸಿದ್ದ ಹಾಫ್ ಪೀಚ್ ಕ್ರಿಕೆಟ್ ಟೂರ್ನಾಮೆಂಟ್ ಗೆ ಶಾಸಕ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಚಾಲನೆ ನೀಡಿ, ಮಾತನಾಡಿದರು.
‘ ಕ್ರೀಡೆಯೂ ಜೀವನದ ಒಂದು ಭಾಗವಾಗಿದೆ. ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಅವುಗಳನ್ನು ಜೀವನದಲ್ಲಿ ಸಮಾನವಾಗಿ ಸ್ವೀರಿಸಿ, ಮುನ್ನಡೆಯಬೇಕು. ಅಂದಾಗ ಮಾತ್ರ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿದ’ ಎಂದರು.
ಗೆಳೆಯರ ಬಳಗ ಹಾಗೂ ಸುತಗಟ್ಟಿ ಗ್ರಾಮಸ್ಥರು ರಾಹುಲ್ ಜಾರಕಿಹೊಳಿ ಅವರಿಗೆ ಸತ್ಕರಿಸಿದರು. ಈ ಸಂದರ್ಭದಲ್ಲಿ ಕಾಕತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣ ಗುಳ್ಳಿ, ಆಸೀಪ್ ಮುಲ್ಲಾ, ಸುಂಕಪ್ಪ ಪಕಾಲಿ, ಬಸವರಾಜ ಡುಮ್ಮನಾಯಕ, ಮಾರುತಿ ಚೌಗಲಾ, ಜಂಗ್ಲಿಸಾಬ್ ನಾಯಕ, ಮಾರುತಿ ಗುಟಗುದ್ದಿ, ಸುರೇಶ ನಾಯಕ, ಕಿರಣ ರಜಪೂತ ಸೇರಿದಂತೆ ಇತರರು ಇದ್ದರು.
CKNEWSKANNADA / BRASTACHARDARSHAN CK NEWS KANNADA