ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸಬೇಕು ಎಂದು ಆಗ್ರಹಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ದೂಪದಾಳ ಕಾರ್ಯಕರ್ತರು ಘಟಪ್ರಭಾ ಮೃತ್ಯುಂಜಯ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆಯುವ ಮೂಲಕ ಪ್ರತಿಭಟನೆ ನಡೆಸಿದರು.
ಘಟಪ್ರಭಾ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಘೋಷಣೆ ಕೂಗಿ ಸುಮಾರು ಹತ್ತು ನಿಮಿಷಗಳ ಕಾಲ ರಾಜ್ಯ ಹೆದ್ದಾರಿ ತಡೆದರು ಹಾಗೂ ಘಟಪ್ರಭಾ ಪಿಎಸ್ಆಯ್ ,ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ದೂಪದಾಳ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಮನವಿ ಸಲ್ಲಿಸಲಾಯಿತು ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುದು ಎಂದು ಎಚ್ಚರಿಸಲಾಯಿತು ಈ ಸಂಧರ್ಭದಲ್ಲಿ ತಾಲ್ಲೂಕು ಸಂಚಾಲಕ ರೆಹಮಾನ್ ಮೊಕಾಶಿ ಘಟಕ ಅದ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ ರವೀಂದ್ರ ನಾವಿ ಮುಬಾರಕ್ ಜಮಖಂಡಿ ಲಕ್ಮಣ ಗಾಡಿವಡ್ಡರ ಶಂಕರ್ ಗಾಡಿವಡ್ಡರ ಸದಾನಂದ ಗಾಡಿವಡ್ಡರ ರಮೇಶ್ ಗಾಡಿವಡ್ಡರ ಗಜಪ್ಪ ಗಾಡಿವಡ್ಡರ ಕೆಂಪಣ್ಣಾ ಗಾಡಿವಡ್ಡರ ರಾಜು ದೊಡಮನಿ ದಿಲೀಪ್ ಹಂಜಿ ಬಶೀರ ಜಮಾದಾರ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು
Check Also
ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಸುರೇಶ ಸನದಿ ಚಾಲನೆ
ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಎಲ್ಲ ಮನೆ ಗಳಿಗೆ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಕೆ …