ಗೋಕಾಕ : ಭಾರತೀಯ ಜನತಾ ಪಕ್ಷವು ಸಮರ್ಥ ಕಾರ್ಯಕರ್ತರೊಂದಿಗೆ ಸಮರ್ಥ ನಾಯಕರನ್ನು ಒಳಗೊಂಡ ಪಕ್ಷವಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಕು. ಭಾರತಿ ಮಗದುಮ್ಮ ಹೇಳಿದರು
ಮಂಗಳವಾರದಂದು ನಗರದ ಸಿದ್ದಿ ವಿನಾಯಕ ಮಂದಿರದ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡ ಗೋಕಾಕ ನಗರ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕರ್ತರು ಪಕ್ಷವು ಹಮ್ಮಿಕೊಳ್ಳುವ ಪ್ರತಿ ಕಾರ್ಯಾಗಾರಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಜ್ಞಾನವನ್ನು ಹೊಂದಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಲು ಸಜ್ಜಾಗಬೇಕು ಅಂದಾಗ ಮಾತ್ರ ನಾವು ಪಕ್ಷವನ್ನು ಗೆಲ್ಲಿಸಲು ಸಾಧ್ಯ ಆ ದಿಸೆಯಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕೆಂದು ಹೇಳಿದರು.
ಬಿಜೆಪಿ ಪಕ್ಷದಲ್ಲಿ ದೂರದೃಷ್ಟಿ ನಾಯಕರು ಇದ್ದಾರೆ. ಚುನಾವಣೆ ಬಂದಾಗ ಮಾಡುವ ಕೆಲಸಗಳು ಶಾಶ್ವತವಲ್ಲ ನೂರಾರು ಕಾಲ ಬಾಳಿಕೆ ಬರುವ ಕಾರ್ಯಗಳು ಮತ್ತು ಯೋಜನೆಗಳನ್ನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮಾಡುತ್ತಿದ್ದಾರೆ ಆ ಎಲ್ಲ ಕಾರ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಭಾರತಿ ಮಗದುಮ್ಮ ಹೇಳಿದರು
ವೇದಿಕೆಯಲ್ಲಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ , ನಗರಸಭೆ ಉಪಾಧ್ಯಕ್ಷ ಬಸವರಾಜ ಅರೆನ್ನವರ ಇದ್ದರು
ಶಶಿಧರ್ ದೇಮಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ , ವಂದಿಸಿದರು