ಬೈಲಹೊಂಗಲ ತಾಲೂಕಿನ ಮುರಕೀಬಾವಿ ಗ್ರಾಮದಲ್ಲಿ ಸೋಮವಾರ ದಂದು ನಡೆದ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಸಂಘಟನೆಗೆ ಚಾಲನೆ ನೀಡಿ ಉದ್ಘಾಟಿಸಲಾಯಿತು. ನಂತರ ಮಾತನಾಡಿದ ಅವರು, ಸಂಘ ಕಟ್ಟುವುದು ಸುಲಭ, ಆದ್ರೆ ಅವುಗಳನ್ನು ಸರಿಯಾದ ದಾರಿಯಲ್ಲಿ ನಡೆಸುವುದು ಕಷ್ಟಕರವಾಗಿದೆ. ಇತ್ತೀಚಿಗೆ ಸಾಕಷ್ಟು ಸಂಘಟನೆಗಳು ಹುಟ್ಟಿಕೊಂಡಿವೆ. ನಿರ್ದಿಷ್ಟ ಗುರಿ ಇಲ್ಲ ನಶಿಸಿ ಹೋಗುತ್ತಿವೆ ಎಂದರು.
ನಮ್ಮಲ್ಲಿ ಒಗ್ಗಟ್ಟಿದ್ದರೆ ಎಂತಹ ಸಮಸ್ಯೆ ಬಗೆಹರಿಸಲು ಸಂಘ- ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ. ಸಂಘಟನೆಗಳು ದೂರ ದೃಷ್ಠಿ, ನಿರ್ಧಿಷ್ಟ ಗುರಿಯನ್ನು ಹೊಂದಿದ್ದರೆ ತುಂಬ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಹಲವು ಸಂಘ-ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸಿವೆ. ನಮ್ಮ ಒಡೆತನದ ಸತೀಶ ಜಾರಕಿಹೊಳಿ ಪೌಂಡೇಶನ ಕೂಡ ಕೋವಿಡ್ ಸಂದರ್ಭದಲ್ಲಿ ಉಚಿತ ಆಕ್ಸಿಜನ್ ಸೇರಿದಂತೆ ಅಗತ್ಯವಸ್ತುಗಳು ಪೂರೈಸುವ ಮೂಲಕ ಹಲವರ ಪ್ರಾಣ ಉಳಿಸುವ ಕೆಲಸ ಮಾಡುತ್ತಿದೆ ಎಂದು ಸ್ಮರಿಸಿದರು.
ಶಾಸಕರಾದ ಶ್ರೀ ಮಹಾಂತೇಶ ಕೌಜಲಗಿ ಬೈಲಹೊಂಗಲ,ಶ್ರೀ ಮಹಾಂತೇಶ ದೋಡ್ಡಗೌಡ್ಡರು ಕೀತೂರ ಶಾಸಕರು, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್ ಟಿ ಅಧ್ಯಕ್ಷರಾದ ಶ್ರೀ ಬಾಳೇಶ ದಾಸನಟ್ಟಿ ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ವಿಜಯ ತಳವಾರ, ,ವಾಲ್ಮೀಕಿ ಯುವ ವೇದಿಕೆ ಅಧ್ಯಕ್ಷರು ಮುರಕೀಬಾವಿ ಶ್ರೀ ಬಾಳೇಶ್ ಪೂಜಾರಿ.ಸಂಜಯ ನಾಯಿಕ ವಾಲ್ಮೀಕಿ ಹೊರಟಗಾರರು ಬೆಳಗಾವಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ನಿಂಗಪ್ಪಾ ಅರ್ಕೇರಿ ನೇಸರಗಿ ಮತ್ತು ಲಾವನ್ಯ ಶಿಲೇದಾರ ಜಿ.ಪಂ.ಸದಸ್ಯರು ನಾಗನೂರ ಹಾಗೂ ತಾಲ್ಲೂಕ ಪಂಚಾಯಿತಿ ಸದಸ್ಯರು . ಮತ್ತು ಮುರಕೀಬಾವಿ ಗ್ರಾಮಸ್ಥರು ಸೇರಿದಂತೆ ಎಲ್ಲಾ ಸಂಘಟನೆಗಳ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಮುಂತಾದವರು ಪಾಲ್ಗೊಂಡಿದ್ದರು
Check Also
ಎರಡು ಗ್ಯಾಂಗ್ 9 ಜನ ಡಕಾಯಿತರನ್ನು ಬಂಧಿಸಿ; ಚಿನ್ನಾಭರಣ,ನಗದು ಹಣ, ವಾಹನಗಳ ವಶಕ್ಕೆ ಪಡೆದ ಗೋಕಾಕ ಪೋಲಿಸ್!
ಗೋಕಾಕ : ಗೋಕಾಕ ಶಹರ, ಅಂಕಲಗಿ ಮತ್ತು ಗೋಕಾಕ ಗ್ರಾಮೀಣ ಹಳ್ಳಿಗಳಲ್ಲಿ ದರೋಡೆ, ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು …