ಮೂಡಲಗಿ : ಅಂತು ಇಂತು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಹಿಂದೂಳಿದ ವರ್ಗ(ಅ) ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆಗೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ಪ್ರಕಟವಾಗಿದೆ.
ರಾಜ್ಯದಲ್ಲಿ ಪುರಸಭೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಪುರಸಭೆಗೆ ಆಯ್ಕೆಯಾದ 23 ಸ್ಥಾನಗಳಲ್ಲಿ ಆಡಳಿತರೊಢ ಬಿಜೆಪಿ ಪಕ್ಷವು ನಾಲ್ಕು ಪಕ್ಷೇತರ ಬೆಂಬಲದಿoದ 15 ಸ್ಥಾನಗಳಲ್ಲಿದೆ. ವಿರೋಧಿ ಜೆಡಿಎಸ್ ಪಕ್ಷದಲ್ಲಿ 8 ಸ್ಥಾನಗಳಿವೆ. ಉಪಾಧ್ಯಕ್ಷ ಸ್ಥಾನವು ಎಸ್.ಸಿ ಮಹಿಳೆಗೆ ಮೀಸಲಿದ್ದು, ಬಿಜೆಪಿ ಗುಂಪಿನಲ್ಲಿ ಭೀಮವ್ವ ಪೊಜೇರಿ ಏಕೈಕ ಮಹಿಳೆಯಾಗಿದ್ದಾಳೆ. ಇವರು ಅವಿರೋಧವಾಗಿ ಆಯ್ಕೆಯಾಗುವ ಎಲ್ಲ ಸಾಧ್ಯತೆಯೂ ಇದೆ.
ಇನ್ನೂ ಅಧ್ಯಕ್ಷ ಸ್ಥಾನವನ್ನು ಹಿಂದೂಳಿದ ವರ್ಗ(ಅ) ಸಾಮಾನ್ಯ ಅಭ್ಯರ್ಥಿಗೆ ಮೀಸಲಿದ್ದು, ಆಡಳಿತರೊಢ ಬಿಜೆಪಿ ಪಕ್ಷದಲ್ಲಿ ಆಕಾಕ್ಷಿಗಳಾದ ಹಣಮಂತ ಗುಡ್ಲಮನಿ, ಖುರಶಾದ ನದಾಫ್, ಮರೇಂಬಿ ಹೂಗಾರ, ಶಾಂತವ್ವಾ ಝಂಡೆಕುರಬರ, ಯಲ್ಲವ್ವ ಹಳ್ಳೂರ ಪಕ್ಷೇತರದಿಂದ ಹುಸೇನಸಾಬ ಶೇಖ, ಅಬ್ದುಲಗಫಾರ, ಡಾಂಗೆ ಇವರ ನಡುವೆ ಒಳಗಿಂದ ಒಳಗೆ ಪೈಪೋಟಿ ಏರ್ಪಟ್ಟಿದೆ. ಈ ಮೀಸಲಾತಿಯಿಂದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟ ಕೆಲವು ಮುಖಂಡರಿಗೆ ನಿರಾಸೆ ಉಂಟಾಗಿದೆ.