ಮಂಡ್ಯ: ತಾಯಿ ಮಗುವಿಗೆ ಊಟ ಮಾಡಿಸಿ ಕೈ ತೊಳೆಯಲು ಹೋದ ವೇಳೆ ಮೂರು ವರ್ಷದ ಕಂದಮ್ಮ ಮಹಡಿಯ ಮೇಲಿಂದ ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯ ನಗರದ ರಾಜಕುಮಾರ್ ಬಡಾವಣೆಯ ನಿವಾಸಿ ಸತೀಶ್ ಹಾಗೂ ಶೃತಿ ದಂಪತಿಯ ಮಗಳು ಧನುಶ್ರೀ (3) ಮೃತ ದುರ್ದೈವಿ. ರಾಜಕುಮಾರ್ ಬಡಾವಣೆಯಲ್ಲಿ ಸತೀಶ್ ಅವರದ್ದು ಮಹಡಿಯ ಮನೆಯಾಗಿದೆ. ಎಂದಿನಂತೆ ಶೃತಿ ತಮ್ಮ ಮಗಳು ಧನುಶ್ರೀಯನ್ನು ಆಟವಾಡಿಸಿಕೊಂಡು ಮನೆಯ ಮುಂಭಾಗ ಊಟ ಮಾಡಿಸಿದ್ದಾರೆ. ನಂತರ ಮಗುವನ್ನು ಬಿಟ್ಟು ಒಳಗೆ ಕೈ ತೊಳೆಯಲು ಹೋಗಿದ್ದಾರೆ.
ಈ ವೇಳೆ ಮಹಡಿಯ ಮೇಲಿನ ಸಂದಿಯಲ್ಲಿ ಮಗು ಇಣುಕಿ ನೋಡಲು ಹೋಗಿದೆ. ಆಗ ಮಗು ಮುಗ್ಗರಿಸಿ ಕೆಳಗೆ ಬಿದ್ದಿದೆ. ಮೇಲಿಂದ ಬಿದ್ದ ರಭಸಕ್ಕೆ ಮಗುವಿನ ತಲೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ತಕ್ಷಣ ಪೋಷಕರು ಮಗುವನ್ನು ಕರೆದುಕೊಂಡು ಮೂರು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಮಗು ಸಾವನ್ನಪ್ಪಿದೆ.
ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
????????ದಯವಿಟ್ಟು ಮಕ್ಕಳನ್ನು ಮಹಡಿ ಮೇಲೆ ಬಿಟ್ಟಾಗ ಹುಷಾರಾಗಿ ನೋಡ್ಕೊಳ್ಳಿ ಇವತ್ತು ಈ ಪಾಪು ಆಕಸ್ಮಿಕವಾಗಿ ಕಾಲು ಜಾರಿ ಮಹಡಿ ಮೇಲಿಂದ ಬಿದ್ದು ಅಗಲಿದ್ದಾಳೆ , ಮತ್ಯಾರಿಗೂ ಇಂತಹ ನೋವ ಬಾರದಿರಲಿ ಭಗವಂತ … ಮತ್ತೆ ಹುಟ್ಟಿ ಬಾ ಕಂದಾ ನಿನಗಿದೋ ನನ್ನ ಭಾವಪೂರ್ಣ ಅರ್ಶುತರ್ಪಣ ????
CKNEWSKANNADA / BRASTACHARDARSHAN CK NEWS KANNADA