ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ರಾಕ್‌ಲೈನ್ ಸುಧಾಕರ್ ಬನ್ನೇರುಘಟ್ಟ ರಸ್ತೆಯಲ್ಲಿಲ ‘ಶುಗರ್ ಲೆಸ್’ ಸಿನಿಮಾ ಚಿತ್ರೀಕರಣ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.
ಕೋವಿಡ್19ನಿಂದ ಖ್ಯಾತ ಹಾಸ್ಯ ನಟ ವೇಣುಗೋಪಾಲ್ ನಿಧನ
ಪುಷ್ಕರ್ ಮಲಿಕಾರ್ಜುನಯ್ಯ ನಿರ್ಮಾಣದ ‘ಶುಗರ್‌ಲೆಸ್’ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸುಧಾಕರ್ ಮೇಕಪ್ ಹಾಕಿಕೊಳ್ಳುತ್ತಿದ್ದಾಗ, ಕುಸಿದು ಬಿದ್ದಿದ್ದಾರೆ, ಸುಮಾರು 10 ಗಂಟೆಗೆ ನಿಧನರಾಗಿದ್ದಾರೆ. ಬೆಂಗಳೂರು ಕಮಲನಗರ ನಿವಾಸಿಯಾಗಿದ್ದ ಸುಧಾಕರ್ ಎರಡು ತಿಂಗಳುಗಳ ಹಿಂದೆ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದರು.
ಸ್ಯಾಂಡಲ್‌ವುಡ್ ಸ್ಟಾರ್ ನಟರ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದ ಸುಧಾಕರ್ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ‘ಪಂಚರಂಗಿ’, ‘ಅಧ್ಯಕ್ಷ’, ‘ಅಜಿತ್’, ‘ನಾ ಕೋಳಿಕೇರಂಗ ಅಲ್ಲದೇ ಅನೇಕ ಚಿತ್ರಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರರಂಗ ಕಳೆದುಕೊಂಡಿರುವ ಈ ಅದ್ಭುತ ಕಲಾವಿದನ ಆತ್ಮಕ್ಕೆ ಶಾಂತಿ ಸಿಗಲಿ.