ತೆಲಂಗಾಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು 1.12 ಕೋಟಿ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಮೇಡಕ್ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್ ಗಡ್ಡಮ್ ನಾಗೇಶ್ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ನರ್ಸಾಪುರ ಮಂಡಲದ ಚೆಪ್ಪಲೂರ್ತಿ ಗ್ರಾಮದಲ್ಲಿ 112 ಎಕರೆ ಜಮೀನಿಗೆ ಸಂಬಂಧಿಸಿದಂತೆ ನೋ ಅಬ್ಜಕ್ಷನ್ ಸರ್ಟಿಫಿಕೇಟ್ ನೀಡಲು ಲಂಚಕ್ಕೆ ಬಲವಂತ ಮಾಡಿದ್ದರು. ಎಕರೆಗೆ 1 ಲಕ್ಷ ರೂಪಾಯಿಯಂತೆ 112 ಎಕರೆಗೆ 1.12 ಕೋಟಿ ರೂಪಾಯಿ ಲಂಚ ಕೇಳಿದ ಅಧಿಕಾರಿ 40 ಲಕ್ಷ ರೂಪಾಯಿ ನಗದು ಹಾಗೂ 72 ಲಕ್ಷ ರೂಪಾಯಿಯನ್ನು 5 ಎಕರೆ ಜಮೀನಿನ ರೂಪದಲ್ಲಿ ಪಡೆಯಲು ಬೇಡಿಕೆಯಿಟ್ಟಿದ್ದರು.
ರೈತರು ಅಧಿಕಾರಿಯೊಂದಿಗೆ ನಡೆಸಿದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಎಸಿಬಿಗೆ ದೂರು ನೀಡಿದ್ದು, ಎಸಿಬಿ ಕಾರ್ಯಾಚರಣೆ ನಡೆಸಿ 40 ಲಕ್ಷ ರೂಪಾಯಿ ನಗದು ಸೇರಿ ಲಂಚ ಸ್ವೀಕರಿಸುವಾಗ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದೆ.
ಅಡಿಷನಲ್ ಕಲೆಕ್ಟರ್ ಆಗಿದ್ದ ಗದ್ದಮ್ ನಾಗೇಶ್ ಅವರು ಎನ್ ಒಸಿ ನೀಡಬೇಕಾದರೆ ಎಕರೆಗೆ ರೂ. 1.12 ಕೋಟಿ ಲಂಚಕ್ಕೆ ಬೇಡಿ ಇಟ್ಟಿದ್ದಾರೆ. ಅದಕ್ಕಾಗಿ ಮೊದಲ ಕಂತಲ್ಲಿ ರೂ. 19.5 ಲಕ್ಷ ಹಾಗೂ ಎರಡನೇ ಕಂತಲ್ಲಿ ರೂ. 20.5 ನಗದು ಸ್ವೀಕರಿಸಿದ್ದರು. ಆ ನಂತರ ಹಣ ನೀಡಲು ಜಮೀನ್ದಾರ್ ಅವರಿಗೆ ಸಾಧ್ಯವಾಗದಾದಾಗ 5 ಎಕರೆ ಬರೆದುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಒಪ್ಪಿಕೊಂಡಿದ್ದ ಜಮೀನ್ದಾರ್ ನಾಗೇಶ್ ಅವರ ಸಂಬಂಧಿ ಕೊಲೊ ಜೀವನ್ ಗೌಡ ಅವರಿಗೆ ಬೇನಾಮಿಯಾಗಿ ಜಮೀನು ಬರೆದುಕೊಟ್ಟಿದ್ದಾರೆ. ಇದಕ್ಕೆ ಶ್ಯೂರಿಯಾಟಿಗಿ ಡೆಪ್ಯುಟಿ ಕಲೆಕ್ಟರ್ 8 ಖಾಲಿ ಜೆಕ್ ಗಳನ್ನು ನೀಡಿದ್ದಾರೆ. ಆ ನಂತರ ಜ್ಯೂನಿಯರ್ ಅಸಿಸ್ಟೆಂಟ್ ವಾಸಿಮ್ ಅಹ್ಮದ್ ಕೂಡ ಜಮೀನ್ದಾರ ಬಳಿ ರೂ. 5 ಲಕ್ಷ ಲಂಚ ಪಡೆದಿದ್ದಾನೆ. ಇದನ್ನೇ ಆಧಾರವಾಗಿಟ್ಟುಕಂಡು ಸಿಸಿಬಿ ಅಧಿಕಾರಿಗಳು ನಾಗೇಶ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ದಾಖಲೆ ರಹಿತ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಅರುಣಾ ರೆಡ್ಡಿ ಅವರ ಮನೆ ಮೇಲೆ ದಾಳಿ ಮಾಡಿ ಲೆಕ್ಕವಿಲ್ಲದ ರೂ. 28 ಲಕ್ಷ ನಗದು ಹಾಗೂ ಅರ್ಧ ಕೆ.ಜಿ. ಚಿನ್ನ ವಶಕ್ಕೆ ಪಡೆದಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ
ಮೇಡಕ್ ಪಟ್ಟಣ ಮತ್ತು ಇತರೆ ಸ್ಥಳಗಳಲ್ಲಿ ಅಧಿಕಾರಿಗೆ ಸಂಬಂಧಿಸಿದ ನಿವಾಸ, ಸ್ಥಳಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ ಎಂದು ಸಂಗಾರೆಡ್ಡಿ ಎಸಿಬಿ ಉಪ ಅಧೀಕ್ಷಕ ಸೂರ್ಯನಾರಾಯಣ ಹೇಳಿದ್ದಾರೆ.
CKNEWSKANNADA / BRASTACHARDARSHAN CK NEWS KANNADA