ಬೆಂಗಳೂರು: ರಾಕಿಂಗ್ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಮನೆಯಲ್ಲಿ ಇಂದು ಹಬ್ಬದ ಸಂಭ್ರಮ. ತಮ್ಮ ಪುಟ್ಟ ಕಂದಮ್ಮನ ಹೆಸರನ್ನು ಶೀಘ್ರವೇ ತಿಳಿಸುವುದಾಗಿ ರಾಧಿಕಾ ತಿಳಿಸಿದ್ದು ಅದಕ್ಕೆ ಇಂದು ಕಾಲ ಕೂಡಿಬಂದಿದೆ.
ಯಶ್ ಮತ್ತು ರಾಧಿಕಾರ ಮುದ್ದು ಮಗುವಿಗೆ ಯಶ್ನ ಮೊದಲ ಅಕ್ಷರವನ್ನು ಬಳಸಿಕೊಂಡು ಯಥರ್ವ್ ಎಂದು ನಾಮಕರಣ ಮಾಡಿದ್ದಾರೆ. ತಮ್ಮ ಮಗನ ಹುಟ್ಟುಹಬ್ಬದ ಸಂಭ್ರಮದ ಕ್ಷಣಗಳನ್ನು ಯಶ್ ಹಾಗೂ ರಾಧಿಕಾ ತಮ್ಮ ಇನ್ಸಾಟಾಗ್ರಾಂಗಳಲ್ಲಿ ಹಂಚಿಕೊಂಡಿದ್ದಾರೆ.
ಯಥರ್ವನ ನಾಮಕರಣದ ಫೋಟೋಗಳನ್ನು ಹಾಕಿ ನಮ್ಮನ್ನು ಸಂಪೂರ್ಣಗೊಳಿಸಿದವನು, ರಾರಾಜಿಸುತ ಬದುಕು ಮಗನೇ… ಎಂಬ ಕ್ಯಾಪ್ಟನ್ ಕೊಟ್ಟು ಮಗನನ್ನು ಹಾರೈಸಿರುವ ಯಶ್, ಅಭಿಮಾನಿಗಳು ಪುತ್ರನನ್ನು ಹರಸಿ ಹಾರೈಸಿ ಎಂದು ಬರೆದಿದ್ದಾರೆ.