ಬೆಳಗಾವಿ: ದೇಶದ ಸಮಸ್ತ ನಾಗರೀಕರಿಗೆ ನಾಳೆ ದೇಶ್ಯಾದ್ಯಂತ ಆಚರಿಸಲಿರುವ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕೋರಿದ್ದಾರೆ.
ನಮ್ಮ ದೇಶದ ಜನರು ಸ್ವಾತಂತ್ರ್ಯವಾಗಿ ಸಮಾನತೆಯಿಂದ ಮತ್ತು ಸಹ ಬಾಳ್ವೆಯಿಂದ ಬದುಕಬೇಕು ಎಂದು ಬಯಸಿದ್ದ ಹಿರಿಯರು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಅವರ ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಲು ಪ್ರಯತ್ನ ಮಾಡೋಣ ಎಂದ ಸತೀಶ ಜಾರಕಿಹೊಳಿ ಅವರು ಮಹಾನ ನಾಯಕರು ಕಂಡ ಕನಸನ್ನು ನಾವು ನನಸಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ನಾಳಿನ ಸ್ವಾತಂತ್ರ್ಯ ದಿನಾಚರಣೆಯೂ ನಮ್ಮೆಲ್ಲರ ಬಾಳಿನಲ್ಲಿ ಬದಲಾವಣೆಯ ಗಾಳಿಗೆ ನಾಂದಿ ಹಾಡಲಿ ಎಂದು ಮತ್ತೊಮ್ಮೆ ಶುಭ ಹಾರೈಸಿದರು.