ಬೆಳಗಾವಿ: ತಾಲೂಕಿನ ಕಲಕಾಂಬ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶ್ರೀಶೈಲ ದೇವೇಂದ್ರ ನಾಗಠಾಣ ಲಂಚ ಸ್ವೀಕರಿಸುವಾಗ ಭೃಷ್ಟಾಚಾರ ನಿಗೃಹ ದಳ (ಎಸಿಬಿ)ದ ಬಲೆಗೆ 5 ಸಾವಿರ ರೂಪಾಯಿ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ಸ್ಥಳೀಯ ರೋಹಣ ಚಂದ್ರಕಾಂತ್ ಪಾಟೀಲ ಎಂಬುವವರು ಪಿಡಿಓ ವಿರುದ್ಧ ದೂರು ಸಲ್ಲಿಸಿದರು. ಫಿರ್ಯಾದಿಯ ತಂದೆ ಮತ್ತು ದೊಡ್ಡಪ್ಪನ ಹೆಸರಿನಲ್ಲಿ ಜಂಟಿಯಾಗಿರುವ ಮನೆಗಳ( ಜಂಟಿಯಾಗಿರುವ ಮನೆಗಳಾದ ಆಸ್ತಿ ನಂ.೧೨೪ ಸಿ ಮತ್ತು ಅಸ್ತಿ ನಂ. ೩೬೩ ನೆದ್ದವುಗಳನ್ನು ) ಆಸ್ತಿಗಳನ್ನು ವಿಭಜನೆ ಮಾಡಿ ನಂತರ ಫಿರ್ಯಾದಿಯ ತಂದೆಯ ಪಾಲಿನ ಮನೆಯನ್ನು(ಮನೆ ನಂ.೧೨೪ ಸಿ )ಪಂಚಾಯತಿಯಲ್ಲಿ ದಾಖಲು ಮಾಡಿ ಉತಾರ ನೀಡಲು ಪಿಡಿಓ 5,000 ರೂಪಾಯಿ ಬೇಡಿಕೆ ಇಟ್ಟಿದ್ದನು.
ಶ್ರೀ.ಬಿ.ಎಸ್.ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಪಿರ್ಯಾದಿಯವರು ಈ ಬಗ್ಗೆ ನೀಡಿದ ದೂರನ್ನು ಶ್ರೀ.ಶರಣಪ್ಪ, ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ಠಾಣೆ, ಬೆಳಗಾವಿ ರವರು ದಾಖಲಿಸಿಕೊಂಡಿರುತ್ತಾರೆ. ಶ್ರೀ.ಎ.ಎಸ್‌ಗೂದಿಗೊಪ್ಪ, ಪೊಲೀಸ್ ಇನ್ಸ್ಪೆಕ್ಟರ್, ಹಾಗೂ ಶ್ರೀ. ಹೆಚ್.ಸುನೀಲ್‌ಕುಮಾರ, ಪೊಲೀಸ್ ಇನ್ಸ್ಪೆಕ್ಟರ್, ಎಸಿಬಿ ಪೊಲೀಸ್ ಠಾಣೆ, ಬೆಳಗಾವಿ ಹಾಗೂ ಸಿಬ್ಬಂದಿಯವರು ಕಾರ್ಯಚರಣೆಯಲ್ಲಿ ತೊಡಗಿದ್ದು, ಆಪಾದಿತ ಸರ್ಕಾರಿ ನೌಕರನಾದ ಶ್ರೀ. ಶ್ರೀಶೈಲ. ದೇವೆಂದ್ರ. ನಾಗಠಾಣ, ಪಂಚಾಯತ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ), ಕಲಕಾಂಬ ಗ್ರಾಮ ಪಂಚಾಯತ, ತಾ:ಜಿ: ಬೆಳಗಾವಿ ಇವರು ರೂ.5,000/- ಲಂಚದ ಹಣವನ್ನು ಸ್ವೀಕರಿಸುತ್ತಿರುವ ವೇಳೆಯಲ್ಲಿ ಸಿಕ್ಕಿದ್ದು, ಸದರಿಯವರನ್ನು ವಶಕ್ಕೆ ಪಡೆದು ತನಿಖೆಯನ್ನು ಕೈಗೊಂಡಿರುತ್ತದೆ ಹಾಗೂ ಆಪಾದಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
***