ಬೆಂಗಳೂರು: ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದ ನಿಯೋಗ ಸಮುದಾಯದ ಮತ್ತು ಜ್ವಲಂತ ವಿಷಯಗಳ ಕುರಿತು ಚರ್ಚೆ ನಡೆಸಿದರು.
ನಗರದ ಸಚಿವರ ಮನೆಯಲ್ಲಿ ನಡೆದ ಈ ಸಭೆಯಲ್ಲಿ ಹೊಸದುರ್ಗದ ಉಪ್ಪಾರ ಗುರುಪೀಠದ ಪುರುಷೋತ್ತಮಾನಂದ ಮಹಾಸ್ವಾಮಿಗಳು, ಕುಂಚಿಟಿಗರ ಮಠದ ಶಾಂತವೀರ ಮಹಾಸ್ವಾಮಿಗಳು,ಮಡಿವಾಳ ಮಾಚಿದೇವ ಮಹಾಸ್ವಾಮಿಗಳು, ಕಾಗಿನೆಲೆ ಗುರುಪೀಠದ ಈಶ್ವರಾನಂದ ಮಹಾಸ್ವಾಮಿಗಳು, ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಮತ್ತು ಹರಳಯ್ಯ ಮಠದ ಮಹಾಸ್ವಾಮಿಗಳು ಮತ್ತು ಜನಪ್ರತಿನಿಧಿಗಳಾದ ಚಳ್ಳಕೆರೆಯ ಶಾಸಕರಾದ ರಘುಮೂರ್ತಿ ಮತ್ತು ಚಿತ್ರದುರ್ಗದ ಲೋಕಸಭಾ ಸದಸ್ಯರಾದ ಚಂದ್ರಪ್ಪಾ ಅವರು ಇದ್ದರು.