ಬೆಳಗಾವಿ : ಕಾಲು ಜಾರಿ ಬಳ್ಳಾರಿ ನಾಲಾದಲ್ಲಿ ಶನಿವಾರ ಸಂಜೆ ಕೊಚ್ಚಿ ಹೋದ ಯುವಕನ ಶವ ಭಾನುವಾರ ಸಂಜೆ ಪತ್ತೆಯಾಗಿದೆ.
ಗೋಕಾಕ್ ತಾಲ್ಲೂಕಿನ ಡುಮ್ಮ ಉರುಬಿನಟ್ಟಿ ಗ್ರಾಮದಲ್ಲಿ ಘಟನೆ ನಡೆದಿತ್ತು.
ಜಲಾವೃತಗೊಂಡ ಗದ್ದೆಯಲ್ಲಿ ಮುಳುಗಡೆಯಾದ ಪಂಪ್ ಸೆಟ್ ನೋಡಲು ಹೋಗಿದ್ದ ನಾಗರಾಜ್ ಹುಬ್ಬಳ್ಳಿ ( 18) ಎಂಬ ಯುವಕ ಕಾಲು ಜಾರಿ ಬಳ್ಳಾರಿ ನಾಲಾದಲ್ಲಿ ಕೊಚ್ಚಿ ಹೋಗಿದ್ದನು.
ವಿಷಯ ತಿಳಿದ ಬಳಿಕ ಎಸ್ಡಿಆರ್ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ಮೀನುಗಾರರ ಸಹಾಯದಿಂದ ಶವ ಶೋಧ ಕಾರ್ಯಾಚರಣೆ ತೊಡಗಿದ್ದರು. ಇಂದು ಸಂಜೆ ಶವ ಪತ್ತೆಯಾಗಿದೆ. ಅಂಕಲಗಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.
CKNEWSKANNADA / BRASTACHARDARSHAN CK NEWS KANNADA