ಮೂಡಲಗಿ – ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಅನುಕೂಲವಾಗಲು ಡಯಾಲಿಸಿಸ್ ಕೇಂದ್ರದ ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಮಂಗಳವಾರದಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭಿಸಲಾದ ಎರಡು ಹಾಸಿಗೆಯ ಸಾಮರ್ಥ್ಯದ ಹೊಸ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. ಪ್ರತಿ ತಾಲ್ಲೂಕಿಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದಲ್ಲಿ …
Read More »Monthly Archives: ಮೇ 2025
*ದೇಶವನ್ನು ಭಯೋತ್ಪಾದಕರಿಂದ ರಕ್ಷಣೆ ಮಾಡುತ್ತಿರುವ ನಮ್ಮ ಸೈನಿಕರಿಗೊಂದು ಸಲಾಂ ಎಂದ ಬಾಲಚಂದ್ರ ಜಾರಕಿಹೊಳಿ
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮೂಡಲಗಿಯಲ್ಲಿ ಯಶಸ್ವಿಯಾದ ನೂರು ಮೀಟರ್ ಉದ್ದದ ತಿರಂಗಾ ಯಾತ್ರೆ ಸೈನಿಕರಿಗೆ ಆತ್ಮ ಸ್ಥೈರ್ಯ ತುಂಬಿದ ಮೂಡಲಗಿ ತಾಲೂಕಿನ ದೇಶ ಪ್ರೇಮಿಗಳು ಮೂಡಲಗಿ – ದೇಶದ ಹೆಮ್ಮೆಯ ಸೈನಿಕರಿಗೆ ಶಕ್ತಿ ತುಂಬುವ, ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಂಗಳವಾರದಂದು ತಿರಂಗಾ ಯಾತ್ರೆಯು ಯಶಸ್ವಿಯಾಗಿ ನಡೆಯಿತು. ಇಲ್ಲಿನ ಶಿವಬೋಧರಂಗ ಕಾಲೇಜಿನಿಂದ ಆರಂಭಗೊಂಡ ತಿರಂಗಾ ಯಾತ್ರೆಯು ಕಲ್ಮೇಶ್ವರ ವೃತ್ತದವರೆಗೆ …
Read More »ಗೋಕಾಕ:ʼನ್ಯಾಯದಾನ ಮಾಡಿದ ತೃಪ್ತಿ ಇದೆʼ: ನ್ಯಾಯಾಧೀಶರು ರಾಜೀವ ಗೊಳಸಾರ
ಗೋಕಾಕ : ಮೂರು ವರ್ಷಗಳ ಅವಧಿಗೆ ಇಲ್ಲಿ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿ ನ್ಯಾಯದಾನ ಮಾಡಿದ ತೃಪ್ತಿ ನನಗಿದೆ ಎಂದು ಪ್ರಧಾನ ಜೆ.ಎಂ.ಎಫ್.ಸಿ. ಮತ್ತು ಸಿವಿಲ್ ನ್ಯಾಯಾಧಿಶರಾದ ರಾಜೀವ ಗೊಳಸಾರ ಹೇಳಿದರು. ಸೋಮವಾರ ಇಲ್ಲಿನ ವಕೀಲರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ನೀಡಿದ ತುಂಬು ಹೃದಯದ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಸೇವಾ ಅವಧಿಯಲ್ಲಿ ಸಂಘದ ಸದಸ್ಯರು ನೀಡಿದ ಸಹಕಾರದಿಂದ ಇಲ್ಲಿನ ಸಾಕಷ್ಟು ಪ್ರಕರಣಗಳನ್ನು ಕಾನೂನಾತ್ಮಕವಾಗಿ ಮತ್ತು ರಾಜಿ …
Read More »*ಅಂಗವಿಕಲರಿಗೆ ಮೋಟಾರ್ ಸೈಕಲ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*
*ಗೋಕಾಕ* – ಅಂಗವಿಕಲರಿಗೆ ಸರಕಾರವು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂಥ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಅರಭಾವಿ ಶಾಸಕ ಮತ್ತು ಬೇಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಗುರುವಾರದಂದು ನಗರದ ತಮ್ಮ ಗೃಹ ಕಚೇರಿಯ ಆವರಣದಲ್ಲಿ ಅಂಗವಿಕಲ ಫಲಾನುಭವಿಗಳಿಗೆ ದ್ವಿಚಕ್ರ ವಾಹನ (ಹೀರೋ ಸ್ಕೂಟಿ) ಗಳನ್ನು ವಿತರಿಸಿ ಅವರು ಮಾತನಾಡಿದರು. ಅಂಗವಿಕಲರು ಸಹ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸ್ವಾವಲಂಬಿ ಬದುಕು ಸಾಗಿಸಬೇಕು. ಅದಕ್ಕಾಗಿ ಸರಕಾರವು …
Read More »ಗೋಕಾಕದಲ್ಲಿ ಹಾಡು ಹಗಲೇ ನಿಂತಿದ್ದ ಕಾರಿನಲ್ಲಿದ್ದ ಹಣ ಕದ್ದ ಕಳ್ಳರು…!
ಗೋಕಾಕ : ನಗರದ ಪ್ರಮುಖ ಮಾರ್ಕೆಟ್ ರಸ್ತೆಯಲ್ಲಿ ನಿಂತಿದ್ದ ಕಾರಿನಲ್ಲಿದ ಹಣವನ್ನು ಕಾರಿನ ಕಿಟಕಿ ಒಡೆದು ಹಣವನ್ನು ದೋಚಿಕೊಂಡು ಹೋಗಿದ್ದಾರೆ. ವೈಯಕ್ತಿಕ ಕೆಲಸಕ್ಕೆ ಮಾರ್ಕೆಟ್ ಗೆ ಹೋಗಿದ್ದ ಬಾಲಚಂದ್ರ ಬನವಿ ಅವರ ಕಾರು ನಿಲ್ಲಿಸಿ, ಹೋಗಿದ್ದು ಬರುವುದರಲ್ಲಿ ಕಾರಿನಲ್ಲಿದ್ದ 50 ಸಾವಿರ ರೂಪಾಯಿ ಹಣವನ್ನು ಕಿಟಕಿ ಒಡೆದು ಹಣ ದೊಚ್ಚಿಕೊಂಡು ಪರಾರಿಯಾಗಿದ್ದಾರೆ. ಇಂದು ಸುಮಾರು ಮಧ್ಯಾಹ್ನ 12:೦೦ ಗಂಟೆ ಸುಮಾರಿಗೆ ಹಣ ಕಳ್ಳತನ ವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ …
Read More »ನಮ್ಮ ಗೋಕಾವಿ ನೆಲದ ಮಹಾಲಕ್ಷ್ಮೀ ಅಮ್ಮನವರು ಕೊಲ್ಲೂರು ಮೂಕಾಂಬಿಕಾ ದೇವಿಯ ಅವತಾರದಲ್ಲಿ ಮೂರ್ತಿಯು ತಲೆ ಎತ್ತಿ ನಿಂತಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ್ – ೭೦೦ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಗೋಕಾವಿ ನೆಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನವು ನವಿಕೃತವಾಗಿ ನೂತನ ಕಟ್ಟಡವು ಲೋಕಾರ್ಪನೆಗೊಂಡಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು ಭಾನುವಾರ ರಾತ್ರಿ ನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರುಗಿದ ನಾಗತನುತರ್ಪಣ ಪೂಜಾ ಕಾರ್ಯಗಳನ್ನು ನೆರವೇರಿಸಿ ಮಾತನಾಡಿದ ಅವರು, ಏಪ್ರಿಲ್ ೩೦ ರಿಂದ ಆರಂಭಗೊಂಡಿರುವ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಹರ್ಷ …
Read More »*ಗೋಕಾಕ ಶಕ್ತಿ ದೇವತೆ ಮಹಾಲಕ್ಷ್ಮೀ ದೇವರ ಜಾತ್ರಾಮಹೋತ್ಸವಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ*
ಗೋಕಾಕ – ಗೋಕಾವಿ ನೆಲದ ಶಕ್ತಿ ದೇವತೆಯಾದ ಮಹಾಲಕ್ಷ್ಮೀ ದೇವರ ಜಾತ್ರೆಯ ಅಂಗವಾಗಿ ದೇವರ ಬಿಂಬ, ಶಿಖರ, ಕಲಶ, ರಥ, ಗಂಗಾ ಜಲ, ಮೃತ್ತಿಕಗಳ ವೈಭವದ ಮೆರವಣಿಗೆಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಿನ್ನೆ ಬುಧವಾರದಂದು ಚಾಲನೆ ನೀಡಿದರು. ನಗರದ ಗುರುವಾರ ಪೇಟೆಯಲ್ಲಿರುವ ಮಹಾಲಕ್ಷ್ಮೀ ಅಮ್ಮನವರ ದೇವಸ್ಥಾನದಿಂದ ಮಹಾಲಕ್ಷ್ಮೀ ದೇವಸ್ಥಾನದವರೆಗೆ ವಿವಿಧ ವಾದ್ಯ ವೃಂದಗಳೊಂದಿಗೆ ಅಪಾರ ಭಕ್ತ ಸಮೂಹದ ಮಧ್ಯ ಮಹಾಲಕ್ಷ್ಮೀ, ಗಣಪತಿ, ಆಂಜನೇಯ, ನಾಗದೇವ, ನವಾಗ್ರಹದೇವರ ಮೂರ್ತಿ …
Read More »ಶುಗರ್ ಪ್ಯಾಕ್ಟರಿ ಮಶಿನರಿ ಸಾಮಾನುಗಳ ಕಳ್ಳರನ್ನು ಬಂಧಿಸಿದ ಗೋಕಾಕ ಗ್ರಾಮೀಣ ಪೋಲಿಸರು.
ಗೋಕಾಕ : 14/04/2025 ರಂದು ಗೋಕಾಕ ತಾಲೂಕಿನ ಗೋಕಾಕ ಶುಗರ್ಸ್ ಲಿಮಿಟೆಡ್ ಕೊಳವಿ ಪ್ಯಾಕ್ಟರಿಯ ಸ್ಟೋರ್ ಗೋಡಾವನದ ಹಿಂದಿನ ಶೆಟರ್ ಬಾಗಿಲನ್ನು ನೆಗ್ಗಿಸಿ ಮುರಿದು ಒಳಗೆ ಹೋಗಿ ಸಾಮಾನುಗಳನ್ನು ಕಳ್ಳತನ ಮಾಡಿದ ಕಳ್ಳರನ್ನು ಗೋಕಾಕ ಗ್ರಾಮೀಣ ಪೋಲಿಸರು ಬಂಧಿಸಿದ್ದಾರೆ. ಕೊಳವಿ ಗ್ರಾಮ ಹದ್ದಿಯಲ್ಲಿಯ ಗೋಕಾಕ ಶುಗರ್ಸ್ ಲಿಮಿಟೆಡ್ ಕೊಳವಿ ಪ್ಯಾಕ್ಟರಿಯ ಗೋಡಾವನದಲ್ಲಿದ ಒಟ್ಟು 12,54,170 ರೂಪಾಯಿ ಕಿಮ್ಮತ್ತಿನ ಸಾಮಾನುಗಳು ಕಳ್ಳತನ ಮಾಡಿದ್ದು ಈ ಕುರಿತು ಗೋಕಾಕ ಗ್ರಾಮೀಣ ಪೋಲಿಸ ಠಾಣೆಯಲ್ಲಿ …
Read More »