Breaking News

Daily Archives: ನವೆಂಬರ್ 22, 2022

ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಸರ್ವ ಸಮಾಜಕ್ಕೆ ಸದ್ಬಳಕೆಯಾಗಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ನವಲಗುಂದ: ನವಲಗುಂದ ಪಟ್ಟಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣವಾಗಿ ಇಂದು ಉದ್ಘಾಟನೆಯಾಗುತ್ತಿದ್ದು ಸಂತಸ ಮೂಡಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 15 ವರ್ಷದ ಹಿಂದೆ ಈ ಸ್ಥಳ ವೀಕ್ಷಿಸಲು ಬಂದಿದೆ. …

Read More »

ಹಾಲು ಪೂರೈಸುವ ಫಲಾನುಭವಿಗಳಿಗೆ ಸಹಾಯ ಧನ ಚೆಕ್‌ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ

ಗೋಕಾಕ: ಕರ್ನಾಟಕ ಹಾಲು ಒಕ್ಕುಟ ಮಹಾಮಂಡಳಿಯಿಂದ ಹಾಲು ಪೂರೈಸುವ ಉತ್ಪಾದಕ ಫಲಾನುಭವಿಗಳಿಗೆ ಸಹಾಯ ಧನ ಚೆಕ್‌ ಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಮಂಗಳವಾರದಂದು ತಮ್ಮ ಗೃಹ ಕಚೇರಿಯಲ್ಲಿ ವಿತರಿಸಿದರು. 4 ಹಾಲು ಸಂಗ್ರಹಿಸುವ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಒಟ್ಟು 19ಲಕ್ಷ ರೂ ಮೊತ್ತದ ಸಹಾಯ ಚೇಕ್, 6ಜನ ಫಲಾನುಭವಿಗಳಿಗೆ ಒಟ್ಟು 4ಲಕ್ಷ ಮೊತ್ತದ ರಾಸು ವಿಮೆ ಚೇಕ ಹಾಗೂ 13ಜನ ಫಲಾನುಭವಿಗಳಿಗೆ ಒಟ್ಟು 19ಲಕ್ಷ ಮೊತ್ತದ ರೈತ ಕಲ್ಯಾಣ …

Read More »

6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಎಸ್ಎಸ್ ಬಿಸಿಎ ವಿಧ್ಯಾರ್ಥಿಗಳ ಸಾಧನೆ!

ಗೋಕಾಕ : ನಗರದ ಶ್ರೀ ಶೂನ್ಯ ಸಂಪಾದನ ಮಠದ ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಿಸಿಎ 6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹರೀಶ್ ವನ್ನಲ್ಲಿ (92.19%) ಪ್ರಥಮ, ಅಮೃತಾ ತಡಸಳಮಠ(86.31%) ದ್ವಿತೀಯ, ಹಾಗೂ ಮಾಯವ್ವಾ ನಂದಿ (85.50%) ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀಗಳು, ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದರು.

Read More »

ಪಠ್ಯದ ಜೊತೆಗೆ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿ ಜೀವನ ಯಶಸ್ವಿ : ಸಂಗಯ್ಯಾ ಬಾಗೋಜಿಮಠ

ವಿಧ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ*. ಗೋಕಾಕ : ನಗರದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ವಿಶೇಷವಾದ ವಿಧ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಾಗಾರವನ್ನು ದೈಹಿಕ ಶಿಕ್ಷಕರಾದ ಆರ್ ಬಿ ಮಾವಿನಗಿಡದ, ಪ್ರಭಾರಿ ಮುಖ್ಯೋಪಾಧ್ಯಾಯರಾದ ಬಿ ಎಚ್ ಪಾಟೀಲ ಉದ್ಘಾಟಿಸಿದರು. ಈ ಕಾರ್ಯಾಗಾರವನ್ನು ಕೌಶಲ್ಯ ಬೆಳವಣಿಗೆಯ ತರಬೇತಿದಾರರಾಗಿ ಇದೆ ಶಾಲೆಯ ಹಳೆಯ ವಿದ್ಯಾರ್ಥಿಯಾದ ಸಂಗಯ್ಯಾ ಬಾಗೋಜಿಮಠ ಅವರು ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ವಿಧ್ಯಾರ್ಥಿಗಳಿಗೆ …

Read More »