Breaking News

Monthly Archives: ಅಕ್ಟೋಬರ್ 2022

ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಅವರ ವರ್ಚಸ್ಸಿದೆ. ಪಕ್ಷ ಅವರಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ: ಅರುಣ್ ಸಿಂಗ್.

ಬೆಳಗಾವಿ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪಾತ್ರ ಹಿರಿದಾಗಿದೆ.ಪಕ್ಷ ಅವರಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ ನೀಡಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರಿಗೆ ಪಕ್ಷದಲ್ಲಿ ಮಹತ್ತರ ಜವಾಬ್ದಾರಿ ನೀಡಲಾಗುತ್ತದೆ ಎಂದರು‌. …

Read More »

ಕನ್ನಡ ರಕ್ಷಣಾ ವೇದಿಕೆಯ ಪಾಮಲದಿನ್ನಿ ಗ್ರಾಮದ ಘಟಕದ ಉದ್ಘಾಟನೆ!

ಗೋಕಾಕ : ಪಾಮಲದಿನ್ನಿ ಗ್ರಾಮದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಗ್ರಾಮ ಘಟಕವನ್ನು ಶ್ರೀ ತಾಯಿ ಭುವನೇಶ್ವರಿ ಪೂಜೆ ಮಾಡುವುದರೊಂದಿಗೆ ಉದ್ಘಾಟನೆ ಮಾಡಿದರು. ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಚೌಕಶಿ ಅವರು ಮಾತನಾಡಿ ನಾಡು ನುಡಿ ನೆಲ ಜಲ ಭಾಷೆ ರಕ್ಷಣೆಗಾಗಿ ನಮ್ಮ ಸಂಘಟನೆ ಕಂಕಣ ಬದ್ಧವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ಪಂಜಾನಟ್ಟಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಾಶಿ ಗೋಕಾಕ್ ತಾಲೂಕ ಉಸ್ತುವಾರಿ ಅಧ್ಯಕ್ಷರಾದ ತಮ್ಮಣ್ಣ …

Read More »

ನಾಳೆಯಿಂದ ಟಿ20 ವಿಶ್ವಕಪ್ ಆರಂಭ, ಗೋಕಾಕದಲ್ಲಿ ಮತ್ತೆ ಬೆಟ್ಟಿಂಗ್‌ ಆರಂಭವಾಗುತ್ತಾ? ಯುವಕರಿಗೆ ಸಾಲದ ಶೂಲ.. ಹೆತ್ತವರಿಗೆ ತಳಮಳ..!

ಗೋಕಾಕ: ಬೆಟ್ಟಿಂಗ್‌ನಲ್ಲಿ ಯಾವ ಟೀಮ್‌ನಲ್ಲಿ ಯಾರು ಹೆಚ್ಚು ರನ್‌ ಬಾರಿಸುತ್ತಾರೆ, ಯಾರು ಹೆಚ್ಚು ವಿಕೆಟ್‌ ಪಡೆಯುತ್ತಾರೆ, ಯಾವ ಟೀಮ್‌ ಕೊನೆ ಹಂತಕ್ಕೆ ಬರಲಿದೆ, ಸೇರಿದಂತೆ ಪ್ರತಿ ಬಾಲ್‌, ರನ್‌ ಮೇಲೆಯೂ ಬಾಜಿ ಕಟ್ಟುವುದಕ್ಕೆ ಭಾರಿ ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ. ಕ್ರಿಕೆಟ್‌ ಪಂದ್ಯಗಳು ಆರಂಭವಾಗುತ್ತಿದ್ದಂತೆಯೇ ಬೆಟ್ಟಿಂಗ್‌ ದಂಧೆ ಚುರುಕುಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಇನ್ನೇನು ಆರಂಭವಾಗುತ್ತಿದ್ದು, ಇದರ ಜತೆಜತೆಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬೆಟ್ಟಿಂಗ್‌ ಕೂಡಾ ಜೋರಾಗುವ …

Read More »

*ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯ*

ಸಾಲಹಳ್ಳಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಬೀರಪ್ಪ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ …

Read More »

“ಭಾರತ ಜೋಡೋ ಪಾದಯಾತ್ರೆಯಲ್ಲಿ ಗೋಕಾಕ ಕಾಂಗ್ರೆಸ್ ಕಾರ್ಯಕರ್ತರು ಭಾಗಿ*

ಚಿತ್ರದುರ್ಗ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ ಯಾತ್ರೆ’ಯು ಶುಕ್ರವಾರ ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಿಂದ ಆರಂಭವಾಯಿತು. ಈ ಪಾದಯಾತ್ರೆಯಲ್ಲಿ ಗೋಕಾಕ ತಾಲೂಕಿನ ಕಾಂಗ್ರೆಸ್‌ ಮುಖಂಡರು ಹೆಜ್ಜೆ ಹಾಕಿ, ‘ಭಾರತ್‌ ಜೋಡೊ ಯಾತ್ರೆ ಹೋದಲೆಲ್ಲ ಪ್ರೀತಿಯ ಮಹಾಪೂರವೇ ಹರಿದು ಬರುತ್ತಿದೆ. ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ರಾಹುಲ್‌ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದರಿಂದ ನಮಗೂ ಖುಷಿ ತಂದಿದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್‌ 30ರಂದು ಕರ್ನಾಟಕ ಪ್ರವೇಶಿಸಿರುವ ಯಾತ್ರೆಯು ಅಕ್ಟೋಬರ್‌ …

Read More »

ಉಪ್ಪಾರ ಸಮಾಜದ ಮೀಸಲಾತಿ ಹೋರಾಟಕ್ಕೆ ಶಾಸಕ ರಮೇಶ ಜಾರಕಿಹೊಳಿ ಬೆಂಬಲ.!

ಗೋಕಾಕ: ಹಿಂದುಳಿದ ಉಪ್ಪಾರ ಸಮಾಜ ನಡೆಸುತ್ತಿರುವ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಶಾಸಕ ರಮೇಶ ಜಾರಕಿಹೊಳಿ ಉಪ್ಪಾರ ಸಮಾಜದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಗುರುವಾರದಂದು ಸಂಜೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಉಪ್ಪಾರ ಸಮಾಜದ ಹೋರಾಟ ಇಂದು ನಿನ್ನೆಯದಲ್ಲ ಕಳೆದ ಐದು ದಶಕಗಳಿಂದ ಅವರು ತಮ್ಮ ಹಕ್ಕನ್ನು ಪಡೆಯಲು ಹೋರಾಟ ನಡೆಸುತ್ತ ಬಂದಿದ್ದು ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹೇಳಿದ್ದಾರೆ. ಉಪ್ಪಾರ …

Read More »

*ಫಾರೆವರ್ ಸ್ಟಾರ್ “ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್” ದಲ್ಲಿ ಸಿಪಿಐ ಶ್ರೀಶೈಲ ಬ್ಯಾಕೂಡ ಅವರ ಸಾಧನೆ ಸೇರ್ಪಡೆ*

ಗೋಕಾಕ : ಫಾರೆವರ್ ಸ್ಟಾರ್ “ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್” ದಲ್ಲಿ ಘಟಪ್ರಭಾ ಸಿಪಿಐ ಶ್ರೀಶೈಲ ಬ್ಯಾಕೂಡ ಅವರ ಸಾಧನೆ ಸೇರ್ಪಡೆಯಾಗಿದೆ. ಹಾಫ್ ಐರನ್ ಡಿಸ್ಟನ್ಸ್ ಟ್ರಿಯ್ಥ್ಲಾನ್ ಸ್ಪರ್ಧೆಯಲ್ಲಿ ಘಟಪ್ರಭಾ ಪೊಲೀಸ್ ಠಾಣೆಯ ಸಿ.ಪಿ.ಐ ಶ್ರೀಶೈಲ್ ಬ್ಯಾಕೋಡ ಅವರು 2022ರ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಪದಕವನ್ನು ಗಳಿಸಿದ್ದಾರೆ. 52 ನಿಮಿಷ 48 ಸೆಕೆಂಡ್ ದಲ್ಲಿ 1.9 ಕಿ.ಮೀ ಸ್ವಿಮ್ಮಿಂಗ್, ಮತ್ತು 2 ಗಂಟೆ 57 ನಿಮಿಷದಲ್ಲಿ 90 ಕಿ.ಮೀ ಸೈಕ್ಲಿಂಗ್ …

Read More »

*ಉಪ್ಪಾರ ಸಮುದಾಯದ ಹೋರಾಟಕ್ಕೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲ*

*ಸಧ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪಂಚಮಸಾಲಿ, ಉಪ್ಪಾರಗಳ ಮೀಸಲಾತಿ ಹಾಗೂ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಮನವಿ ಮಾಡಿಕೊಳ್ಳುವೆ*   *ಗೋಕಾಕ* : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ನಡೆಸುತ್ತಿರುವ ಉಪ್ಪಾರ ಸಮುದಾಯದ ಹೋರಾಟಕ್ಕೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಗುರುವಾರದಂದು ಹೇಳಿಕೆ ನೀಡಿರುವ ಅವರು, ಉಪ್ಪಾರ ಸಮುದಾಯದ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯ …

Read More »

ಉಪ್ಪಾರ ಸಮಾಜವನ್ನು ಎಸ್‍ಟಿಗೆ ಸೇರಿಸುವಂತೆ ಒತ್ತಾಯಿಸಿ ಇದೆ ದಿ.13 ರಂದು ಪ್ರತಿಭಟನೆ!

ಗೋಕಾಕ : ಉಪ್ಪಾರ ಸಮಾಜವನ್ನು ಎಸ್‍ಟಿಗೆ ಸೇರಿಸುವಂತೆ ಒತ್ತಾಯಿಸಿ ಇದೆ ದಿ.13 ರಂದು ಪ್ರತಿಭಟನೆ ಮುಖಾಂತರ ರಾಜ್ಯ ಸರಕಾರವನ್ನು ಎಚ್ಚರಿಸಲು ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಗೋಕಾಕ ತಾಲೂಕ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ ಹೇಳಿದರು. ಅವರು, ನಗರದ ಉಪ್ಪಾರ ಗಲ್ಲಿಯ ಉಪ್ಪಾರ (ಲೇಪಾಕ್ಷಿ) ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯನ್ನು ಉದ್ಧೇಶಿಸಿ ಮಾತನಾಡಿ, ಉಪ್ಪಾರ ಸಮಾಜ ಆರ್ಥಿಕವಾಗಿ, ಶೈಕ್ಷಿಣಕಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು ರಾಜ್ಯ ಸರಕಾರ …

Read More »

ಶೀಘ್ರವೇ ಬೆಳಗಾಂ ಶುಗರ್ಸ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ : ಚೇರಮನ್ , ಸಿಎಫ್ಓ ಪ್ರದೀಪಕುಮಾರ ಇಂಡಿ

ಬೆಳಗಾವಿ: ಬೆಳಗಾಂ ಶುಗರ್ಸ ಪ್ರೈ. ಲಿ. ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ಎಲ್ಲ ರೈತಭಾಂದವರಿಗೆ ಅನಂತ ಕೃತಜ್ಞತೆಗಳು, ತಮ್ಮ ಸಹಾಯ ಮತ್ತು ಸಹಕಾರದಿಂದಾಗಿ ಸತತ ಯಶಸ್ಸನ್ನು ಸಾಧಿಸುತ್ತಿದೆ ಪ್ರಸಕ್ತ 2022-23 ರ ಹಂಗಾಮನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಬೆಳಗಾಂ ಶುಗರ್ಸ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ತಿಳಿಸಿದರು.   ಪ್ರಸ್ತುತ ಹಂಗಾಮಿನಲ್ಲಿ ಕಾರ್ಖಾನೆಯ ಸುತ್ತ-ಮುತ್ತಲಿನ ಸುಮಾರು 80 ಕಿ.ಮಿ ಅಂತರದಲ್ಲಿರುವ ಕಬ್ಬು ಪ್ರದೇಶದಲ್ಲಿರುವ ಗುಣಮಟ್ಟದ ತಳಿಯ ಕಬ್ಬನ್ನು ಪಡೆಯಲಾಗುವುದು . …

Read More »