Breaking News

Daily Archives: ಸೆಪ್ಟೆಂಬರ್ 27, 2022

ಪುಸ್ತಕದಷ್ಟೆ ಜ್ಞಾನ ಪ್ರವಾಸ ಮಾಡುವದರಿಂದ ಲಭಿಸುತ್ತದೆ:ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ

ಗೋಕಾಕ : ಪ್ರವಾಸದಿಂದ ಜನರ ಮನೊಉಲ್ಲಾಸ ದೊಂದಿಗೆ ಜ್ಞಾನವೃದ್ಧಿ ಆಗುವುದು ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು ಮಂಗಳವಾರದಂದು ಸಮೀಪದ ಗೋಕಾಕ ಫಾಲ್ಸ್ ನ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಮತ್ತು ಪ್ರವಾಸೋದ್ಯಮ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು ಪುಸ್ತಕದಷ್ಟೆ ಜ್ಞಾನ ಪ್ರವಾಸ ಮಾಡುವದರಿಂದ ಲಭಿಸುತ್ತದೆ. ಪ್ರವಾಸೋದ್ಯಮ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ನಾವೆಲ್ಲರೂ …

Read More »

೪.೮೦ ಕೋಟಿ ರೂ ಅನುದಾನದಲ್ಲಿ ಸುಣಧೋಳಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ

ಮೂಡಲಗಿ: ಸುಣಧೋಳಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಕಹಾಮಾ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ನಾನಾ ಯೋಜನೆಗಳಲ್ಲಿ ಅನುದಾನ ನೀಡಿ ಅಭಿವೃಧಿ ಪಡಿಸುತ್ತಿದ್ದಾರೆ. ಈಂತಹ ಶಾಸಕರು ಪಡೆದಿರುವುದು ಪುಣ್ಯ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಸ್ವಾಮೀಜಿಗಳು ಹೇಳಿದರು. ಅವರು ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸುಣಧೋಳಿಕ್ರಾಸ್‌ದಿಂದ ಸುಣಧೋಳಿ ಗ್ರಾಮದವರಿಗೆ ಸುಮಾರು ಮೂರು ಕಿ.ಮಿ ರಸ್ತೆಯನ್ನು ಲೋಕೊಪಯೋಗಿ ಇಲಾಖೆಯ ೪.೮೦ ಕೋಟಿ ರೂಪಾಯಿ ಅನುದಾನದಲ್ಲಿ …

Read More »

ಹಲ್ಲೆ ನಡೆಸಿ ನಗನಾಣ್ಯ ದೋಚಿದ್ದವರ ಹೆಡೆ ಮುರಿ ಕಟ್ಟಿದ ಪೊಲೀಸರು*

ಬೆಳಗಾವಿ :ಬಂಗಾರದ ವ್ಯಾಪಾರಿಗಳನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಬಂಗಾರ ಹಾಗೂ ಹಣ ದೋಚಿದ್ದ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಸಪ್ಟಂಬರ್ ೧೬ ರ ರಾತ್ರಿ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಿಂದ ತಮ್ಮ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದ ಶಿಂಧಿಕುರಬೇಟ ಗ್ರಾಮಕ್ಕೆ ವಾಪಸ್ ಆಗುವ ಸಂದರ್ಭದಲ್ಲಿ ಗೋಕಾಕ ನಗರದ ಹೊರವಲಯದ ಕರೆಮ್ಮ ದೇವಿ ದೇವಸ್ಥಾನದ ಬಳಿ ಸಂಜೀವ್ ಹಾಗೂ ರವೀಂದ್ರ ಎನ್ನುವವರ ಮೇಲೆ ಹಲ್ಲೆ ನಡೆಸಿ ಅವರಲ್ಲಿದ್ದ ಅರ್ಧ ಕೆಜಿ ಬಂಗಾರ ಹಾಗೂ …

Read More »

ಘಟಪ್ರಭಾದಲ್ಲಿ ರೈಲು ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ಸಾವು!

ಘಟಪ್ರಭಾ: ರೈಲ್ವೆ ಹಳಿ  ದಾಟುವಾಗ  ವ್ಯಕ್ತಿಗೆ ರೈಲು ಡಿಕ್ಕಿ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ  ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ  ನಿನ್ನೆ ಸಾಯಂಕಾಲ ನಡೆದಿದೆ. ಚನ್ನಪ್ಪ ಅವಪ್ಪ ನಿಡಸೋಶಿ(35) ಮೃತ ವ್ಯಕ್ತಿ. ಚನ್ನಪ್ಪನ ಕಿವಿ ಮಂದಗತ್ತಿ ಇರುವುದರಿಂದ , ಅವಘಡ ಸಂಭವಿಸಿದೆ ಎಂದು ನಿವಾಸಿಗಳು ಮಾಹಿತಿ ನೀಡಿದ್ದಾರೆ. ಮಾರ್ಕೇಟ್‌ ಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿಬಂದಿದ್ದರು. ಮಾರ್ಕೇಟ್‌ ನಲ್ಲಿ ಖದೀರಿ  ಮುಗಿಸಿ  ವಾಪಸ್‌ ಮನೆಗೆ ತೆರಳುವ ಸನ್ನಿವೇಶಲ್ಲಿ   ಘಟಪ್ರಭಾ ನಿಲ್ದಾಣದಿಂದ  ಮಿರಜ್ …

Read More »

ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ : ಪಿಎಸ್ಐ ಎಂ ಡಿ ಘೋರಿ

ಗೋಕಾಕ: ವಾಹನ ಮಾಲೀಕರು ಹಾಗೂ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಎಂದು ಗೋಕಾಕ ನಗರ ಠಾಣೆಯ ಪಿಎಸ್ಐ ಎಂ ಡಿ ಘೋರಿ ಸಲಹೆ ನೀಡಿದರು. ನಗರದ ಆಟೋ ನಿಲ್ದಾಣಗಳಲ್ಲಿ ಹಾಗೂ ಖಾಸಗಿ ಮಿನಿ ಬಸ್ ನಿಲ್ದಾಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಮಾಡುವ ಮೂಲಕ ವಾಹನ ಚಾಲಕರಿಗೆ ರಸ್ತೆ ನಿಯಮಗಳ ಬಗ್ಗೆ ತಿಳಿಸಿದರು. ಅತಿ ವೇಗದ ಚಾಲನೆ, ವಾಹನ ಚಾಲನೆಯ ವೇಳೆ ಮದ್ಯ ಸೇವನೆಯೇ ಮೊದಲಾಗಿ ರಸ್ತೆ …

Read More »