Breaking News

Monthly Archives: ಆಗಷ್ಟ್ 2022

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ದೇಶಪ್ರೇಮ ಮೊಳಗಿಸಿದ ಸಾವಿರಾರು ಕಾರ್ಯಕರ್ತರು

*ಮೂಡಲಗಿ*: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅರಭಾಂವಿ ಬಿಜೆಪಿ ಮಂಡಲ ಗುರುವಾರದಂದು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸಮಾರೋಪಗೊಂಡಿತು. ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಕಲ್ಮೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು. ಗೋಕಾಕ ಎನ್‍ಎಸ್‍ಎಫ್ ಅತಿಥಿ ಗೃಹದಿಂದ ಆರಂಭಗೊಂಡ ಬಿಜೆಪಿ ಕಾರ್ಯಕರ್ತರ ಬೈಕ್ ರ್ಯಾಲಿ ಲೋಳಸೂರು, ಕಲ್ಲೋಳಿ, ನಾಗನೂರ ಮೂಲಕ ಮೂಡಲಗಿ ಪಟ್ಟಣಕ್ಕೆ ಸುಮಾರು 2 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗಿಯಾಗಿದ್ದರು. ಕೆಎಮ್‍ಎಫ್ ಅಧ್ಯಕ್ಷ …

Read More »

ಹಿಂದೂ ಕ್ಷತ್ರೀಯ ಸಂಘದ ವಿದ್ಯಾರ್ಥಿ ನಿಲಯದ ಹಾಗೂ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿದ ಯುವ ನಾಯಕರು!

ಗೋಕಾಕ : 2020-21 ರ ರಾಜ್ಯ ಬಜೆಟ್‌ನಲ್ಲಿ ಕೆ.ಎಮ್.ಎಫ್ ನ ಅಧ್ಯಕ್ಷರು ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಯವರ ಪ್ರಯತ್ನದಿಂದ ರಾಜ್ಯದ ವಿವಿಧ ಜಿಲ್ಲೆಗಳ ಧಾರ್ಮಿಕ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿಯ ಅನುದಾನದಲ್ಲಿ ಗೋಕಾಕ ನಗರದ ಹೊರ ವಲಯದಲ್ಲಿ ಕರ್ನಾಟಕ ಹಿಂದೂ ಕ್ಷತ್ರೀಯ ಸಂಘದ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನದ ಭೂಮಿ ಪೂಜೆಯನ್ನು ಯುವ ನಾಯಕರುಗಳಾದ ರಾಹುಲ್ ಜಾರಕಿಹೊಳಿ ಸರ್ವೋತ್ತಮ ಜಾರಕಿಹೊಳಿ ಮತ್ತು ಶಾಸಕರ ಆಪ್ತ ಸಹಾಯಕರಾದ ದಾಸಪ್ಪ …

Read More »

ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ಅಪಾರ : ಯುವ ನಾಯಕ ರಾಹುಲ್‌ ಜಾರಕಿಹೊಳಿ

ಯಮಕನಮರಡಿ ಕ್ಷೇತ್ರದಲ್ಲಿ ರಾಹುಲ್‌ ಜಾರಕಿಹೊಳಿ ಅವರು ಪಾದಯಾತ್ರೆ: ಜಿ.ಪಂ ಕ್ಷೇತ್ರಗಳಾದ ಹೆಬ್ಬಾಳ, ಕೊಚ್ಚರಿ, ಅರ್ಜುನವಾಡ, ಕುರಣಿವಾಡಿ, ಚಿಕ್ಕಾಲಗುಡ್ಡ, ಉ. ಖಾನಾಪೂರ, ಹಂಚಿನಾಳ ಮಾರ್ಗದ ಉದ್ದಕ್ಕೂ ರಾಹುಲ್‌ ಜಾರಕಿಹೊಳಿ ಪಾದಯಾತ್ರೆ ನಡೆಸಿ, ಮಾಜಿ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ. ಯಮಕನಮರಡಿ: ” ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್‌ ಪಕ್ಷ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದು, ದೇಶವನ್ನು ಕಟ್ಟಲು ಕಾಂಗ್ರೆಸ್‌ ಹಿರಿಜೀವಗಳು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು” ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು …

Read More »

ಗೋಕಾಕ ಬ್ರೇಕಿಂಗ್ ; ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮ ಓರ್ವ ಪರೀಕ್ಷಾರ್ಥಿ ಬಂಧನ !

ಗೋಕಾಕ : ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಪರೀಕ್ಷೆಗೆ ಹಾಜರಾಗಿದ್ದ ಪರೀಕ್ಷಾರ್ಥಿ ಮೂಡಲಗಿ ತಾಲೂಕಿನ ಸಿದ್ದಪ್ಪ ಮದಿಹಳ್ಳಿ ಎಂಬಾತನನ್ನು ಬೆಳಗಾವಿಯ ವಿಶೇಷ ದಳದ ಪೊಲೀಸರು ಬುಧವಾರದಂದು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಮದಿಹಳ್ಳಿ(21) ಬಂಧಿತನಾಗಿದ್ದು, ರವಿವಾರ ದಿನಾಂಕ 7 ರಂದು ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ನಗರದ ಜೆಎಸ್ಎಸ್ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಸಿದ್ದಪ್ಪ …

Read More »

ಕಳಪೆ ಕಾಮಗಾರಿಯಾದರೆ ಸಂಬಂಧಿಸಿದವರೆ ಹೊಣೆಗಾರರು, ಹುಕ್ಕೇರಿ ಕೆಡಿಪಿ ಸಭೆಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಖಡಕ್ ಎಚ್ಚರಿಕೆ

ಹುಕ್ಕೇರಿ : ತಾಲೂಕಿನ ಯಮಕನಮರಡಿ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಸತೀಶ ಜಾರಕಿಹೊಳಿ ಖಡಕ್ ಎಚ್ಚರಿಕೆ ನೀಡಿದರು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸರ್ಕಾರಿ ಕಾಮಗಾರಿಗಳಲ್ಲಿ ಕಳಪೆ ಮಟ್ಟದ ಕಾಮಗಾರಿ ಕಂಡು ಬಂದಲ್ಲಿ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ಮಾಡಿದರು. ತಾಪಂ, …

Read More »

ಶತಾಯಷಿ ಭೀಮವ್ವ ರಂಗಪ್ಪ ಬಿ.ಪಾಟೀಲ್ ನಿಧನ; ಬಾಲಚಂದ್ರ ಜಾರಕಿಹೊಳಿ ಸಂತಾಪ!

ಮೂಡಲಗಿ :* ತಾಲ್ಲೂಕಿನ ತಿಗಡಿ ಗ್ರಾಮದ ಉಪ್ಪಾರ ಸಮಾಜದ ಹಿರಿಯ ಜೀವ, ಶತಾಯುಷಿ ಭೀಮವ್ವ‌ ರಂಗಪ್ಪ. ಬಿ.ಪಾಟೀಲ್ (೧೦೧) ಅವರು ಸೋಮವಾರದಂದು ನಿಧನರಾದರು. ಮೃತರಿಗೆ ಗುತ್ತಿಗೆದಾರ ವಾಯ್. ಆರ್. ಬಿ.ಪಾಟೀಲ್ ಸೇರಿ ಐದು ಜನ ಮಕ್ಕಳು, ಮೂವರು ಪುತ್ರಿಯರು, ೭೬ ಜನ ಮೊಮ್ಮಕ್ಕಳು, ಮರಿ ಮಕ್ಕಳು, ಗಿರಿ ಮಕ್ಕಳು ಸೇರಿದಂತೆ ಅಪಾರ ಬಂಧು- ಬಳಗವಿದೆ. ಮೃತರ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯರು …

Read More »

ಅತಿವೃಷ್ಟಿ ಹಾನಿ ಪರಿಶೀಲನೆ- 24 ಗಂಟೆಗಳಲ್ಲಿ ಪರಿಹಾರ ವಿತರಣೆಗೆ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ: ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಳೆಯ ನಡುವೆಯೂ ನಗರದ ವಿವಿಧ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ಕೈಗೊಂಡು ಹಾನಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನೀರು ನುಗ್ಗಿದ ಮನೆಗಳಿಗೆ 24 ಗಂಟೆಗಳಲ್ಲಿ ತಲಾ ಹತ್ತು ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಯಳ್ಳೂರ ರಸ್ತೆಯ ಕೇಶವ ನಗರ, ಭಾರತ ನಗರ, ಅನಗೋಳದ ರಘುನಾಥ ಪೇಟ ಮತ್ತಿತರ ಕಡೆಗಳಲ್ಲಿ ಸಂಚರಿಸಿದ ಅವರು, ಯಾವುದೇ ಕಾರಕ್ಕೂ …

Read More »

*ಗೋಕಾಕ ಆರ್ ಟಿಓ ಕಛೇರಿ ಹತ್ತಿರ ಭೀಕರ ಅಪಘಾತ, ವೃದ್ಧ ಮಹಿಳೆ ಸ್ಥಳದಲ್ಲೇ ಸಾವು*

ಗೋಕಾಕ: ಆರ್ ಟಿಓ ಕಚೇರಿ ಎದುರಿನ ರಸ್ತೆಯ ಬಳಿ ಅಪಘಾತ ಸಂಭವಿಸಿದ್ದು 65 ವರ್ಷದ ವೃದ್ಧ ಮಹಿಳೆ ಮೃತಪಟ್ಟ ಘಟನೆ ನಡೆದಿದೆ .ಮೃತಪಟ್ಟ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಿಲ್ಲ . ವೃದ್ಧ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕರೆ ಗೋಕಾಕ ಶಹರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಗೋಕಾಕ ಪೊಲೀಸರು ಕೋರಿದ್ದಾರೆ .

Read More »

*ಜೂಜಾಡುತ್ತಿದ್ದ 12 ಜನರನ್ನು ವಶಕ್ಕೆ ಪಡೆದ ಪೊಲೀಸರು: ಬಂಧಿತರಿoದ 1 ಲಕ್ಷ 85 ಸಾವಿರ ಹಣ 11 ಮೊಬೈಲ್ 8 ಬೈಕ್ ವಶ*

ಗೋಕಾಕ : ಗ್ರಾಮೀಣ ಪೊಲೀಸ್ ಠಾಣಾ ಸರಹದ್ದಿನ ಕೊಣ್ಣೂರು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದ 12 ಜನರನ್ನು ವಶಕ್ಕೆ ಪಡೆಯುವಲ್ಲಿ ಜಿಲ್ಲಾ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಗೋಕಾಕ್ ಗ್ರಾಮೀಣ ಠಾಣಾ ವ್ಯಾಪ್ತಿಯ ಕೊಣ್ಣೂರು ಗ್ರಾಮದಲ್ಲಿ ಸಾರ್ವಜನಿಕವಾಗಿ ಇಸ್ಪೀಟ್ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ 12 ಜನರನ್ನು ವಶಕ್ಕೆ ಪಡೆಯುವಲ್ಲಿ ಬೆಳಗಾವಿಯ ಅಪರಾಧ ವಿಭಾಗ ಪೊಲೀಸ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಸಿಇಎನ್ ಅಪರಾಧ ಠಾಣೆಯ …

Read More »

ಪತ್ತೆಯಾಗದ ಚಿರತೆ; ಭಯದಲ್ಲಿ ಹೊರಗೆ ಬಾರದ ಜನ!

ಬೆಳಗಾವಿ: ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ನುಗ್ಗಿದ ಚಿರತೆ 24 ತಾಸುಗಳ ನಂತರವೂ ಸೆರೆ ಸಿಕ್ಕಿಲ್ಲ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ನಿರಂತರ ಶೋಧ ನಡೆಸಿದ್ದಾರೆ.   ಇನ್ನೊಂದೆಡೆ, ಚಿರತೆ ಭಯದಿಂದಾಗಿ ಈ ಪ್ರದೇಶದಲ್ಲಿ ಜನರು ಮನೆಯಿಂದ ಹೊರಬಂದಿಲ್ಲ.ಪ್ರತಿ ದಿನ ವಾಯು ವಿಹಾರಿಗಳಿಂದ ತುಂಬಿರುತ್ತಿದ್ದ ಇಲ್ಲಿನ ಜಾಧವ ನಗರ, ಹನುಮಾನ್ ನಗರ, ಸಹ್ಯಾದ್ರಿ ನಗರ, ಟಿ.ವಿ ಸೆಂಟರ್ ಮುಂತಾದ ಪ್ರದೇಶದ ರಸ್ತೆಗಳು ಶನಿವಾರ ಬೆಳಿಗ್ಗೆ ಬಿಕೋ ಎನ್ನುತ್ತಿದ್ದವು. …

Read More »