*ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ನೀತೇಶ ಪಾಟೀಲ್, ಎಸಿ ಬಗಲಿ ಭಾಗಿ* *ಮೂಡಲಗಿ:* ಮೂಡಲಗಿ ತಾಲೂಕಿನ ರೈತರ ಮತ್ತು ಜನಸಾಮಾನ್ಯರ ಅನುಕೂಲಕ್ಕಾಗಿ ಮೂಡಲಗಿಯಲ್ಲಿ ಹೊಸದಾಗಿ ಭೂಮಿ ಶಾಖೆಯನ್ನು ಆರಂಭಿಸಲಾಗಿದೆ ಎಂದು ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರದಂದು ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ನೂತನವಾಗಿ ಮೂಡಲಗಿ ತಾಲೂಕಿನ ಭೂಮಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋಕಾಕ ತಾಲೂಕಿನಲ್ಲಿದ್ದ ಭೂಮಿ ಶಾಖೆಯನ್ನು ಬೇರ್ಪಡಿಸಿ ಮೂಡಲಗಿ …
Read More »Monthly Archives: ಜೂನ್ 2022
ದಿ 17 ರಂದು ವಿಕಾಸ್ ತೀರ್ಥ ಬೈಕ್ ರ್ಯಾಲಿ ಮತ್ತು ಕಾರ್ಯಕಾರಿಣಿ ಸಭೆ : ಮಂಜುನಾಥ ಪ್ರಭುನಟ್ಟಿ
ಗೋಕಾಕ ಜೂ 16 :ಬಿಜೆಪಿ ನಗರ ಹಾಗೂ ಗ್ರಾಮೀಣ ಯುವ ಮೋರ್ಚಾ ವತಿಯಿಂದ ವಿಕಾಸ್ ತೀರ್ಥ ಬೈಕ್ ರ್ಯಾಲಿ ಮತ್ತು ಜಿಲ್ಲಾ ಕಾರ್ಯಕಾರಿಣಿ ಸಭೆ ಶುಕ್ರವಾರ ದಿ.17 ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದ ಕೇಂದ್ರ ಸರಕಾರ 8.ವರ್ಷಗಳ ಆಡಳಿತ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಬೆಳಿಗ್ಗೆ 09.ಗಂಟೆಗೆ ನಗರದ ಕೊಳವಿ ಹನುಮಂತ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಾಸಕ ರಮೇಶ ಜಾರಕಿಹೊಳಿ ಅವರ ಕಾರ್ಯಲಯದ ವರೆಗೆ ವಿಕಾಸ್ ತೀರ್ಥ …
Read More »ಪ್ರಕಾಶ್ ಹುಕ್ಕೇರಿ ಗೆಲುವು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹರ್ಷ
ಬೆಳಗಾವಿ: ವಿಧಾನ ಪರಿಷತ್ನ ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ, ಹಿರಿಯರಾದ ಪ್ರಕಾಶ್ ಹುಕ್ಕೇರಿ ಅವರ ಗೆಲುವು ಸಂತಸ ತಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಕಳೆದ ಎರಡು ಭಾರಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಗೆಲುವು ಸಾಧಿಸಿದ್ದು, ಮೂರನೇ ಭಾರೀ ಅವರ ಗೆಲುವಿಗೆ ಪ್ರಕಾಶ್ ಹುಕ್ಕೇರಿ ಅವರು ಬ್ರೇಕ್ ಹಾಕಿದ್ದಾರೆ. ಬೆಳಗಾವಿ, ಬಾಗಲಕೋಟ, ವಿಜಯಪುರ ಜಿಲ್ಲೆಯ ಎಲ್ಲಾ …
Read More »ನೂತನ ಭೂ ನ್ಯಾಯ ಮಂಡಳಿ ಸದಸ್ಯರಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ.!
ಗೋಕಾಕ: ನೂತನವಾಗಿ ಆಯ್ಕೆಗೊಂಡಿರುವ ಭೂ ನ್ಯಾಯ ಮಂಡಳಿ ಸದಸ್ಯರು ರೈತರ, ಸಾಮಾನ್ಯ ವರ್ಗದ ಜನರ ಏಳ್ಗೆಗೆ ಶ್ರಮಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಕರೆ ನೀಡಿದರು. ಅವರು, ನಗರದ ತಮ್ಮ ಗೃಹ ಕಚೇರಿಯಲ್ಲಿ ನೂತನ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ವಿಠ್ಠಲ ಮೆಳವಂಕಿ, ಬಾಳಪ್ಪ ಓಬಿ ಈರಪ್ಪಾ ಕಮತ, ಶ್ರೀಮತಿ ಗೀತಾ ತಳ್ಳಳ್ಳಿ ಅವರನ್ನು ಅಭಿನಂಧಿಸಿ ಮಾತನಾಡಿ, ರೈತರ ಜಮೀನು ವಾಜ್ಯಗಳ ವಿಷಯದಲ್ಲಿ ನಿಸ್ಪಕ್ಷಪಾತ ಹಾಗೂ ನ್ಯಾಯಯುತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. …
Read More »ಕಡು ಬಡವನಿಗೆ ಉಚಿತವಾಗಿ ಮೂಳೆ ಶಸ್ತ್ರಚಿಕಿತ್ಸೆ ಮಾಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತ
ಗೋಕಾಕ: ಕಡು ಬಡತನದಲ್ಲಿರುವ ಓರ್ವ ವ್ಯಕ್ತಿಯೊಬ್ಬನಿಗೆ ಉಚಿತವಾಗಿ ಮೂಳೆ ಶಸ್ತ್ರಚಿಕಿತ್ಸೆ ಮಾಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೌದು.. ಕಡು ಬಡತನದಲ್ಲಿರುವ ಗೋಕಾಕ ತಾಲೂಕಿನ ಕುಂದರಿಗಿ ಗ್ರಾಮದ ಲಕ್ಷ್ಮಣ ಪೂಜೇರಿ ಅವರ ಮೂಳೆ ಮುರಿತದಿಂದ ತಮ್ಮ ಜೀವನದ ಬಂಡಿ ಮುಂದುಡಲು ಸಾಧ್ಯವಾಗದೇ ತೆರಳುತ್ತಾ ಸಾಗುವಂತಾಗಿತ್ತು. ಅವರ ಸಮಸ್ಯೆಗೆ ಸ್ಪಂದಿಸುವಂತೆ ಅನೇಕ ನಾಯಕರಿಗೆ ಮಾಹಿತಿ ತಿಳಿಸಿದರೂ ಯಾರು ಇವರತ್ತ ನೋಡಲಿಲ್ಲ. ಕೊನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ …
Read More »ಶ್ರೀ ಭಗೀರಥ ಮಹರ್ಷಿಯ ಮೂರ್ತಿಯನ್ನು ಲೋಕಾರ್ಪಣೆ ಮಾಡಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ!
ಗೋಕಾಕ: ಪ್ರಯತ್ನವಾದಿಗಳ ವಂಶದಲ್ಲಿ ಹುಟ್ಟಿರುವ ನಾವುಗಳು ಪ್ರಯತ್ನದೊಂದಿಗೆ ಧಾರ್ಮಿಕವಾಗಿ, ಶೈಕ್ಷಣ ಕವಾಗಿ, ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಬೇಕಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಟಿ.ಆರ್.ಕಾಗಲ ಹೇಳಿದರು. ಸೋಮವಾರದಂದು ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ರಾಜಋಷಿ ಶ್ರೀ ಭಗೀರಥ ಮಹರ್ಷಿಯ ಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಯತ್ನಕ್ಕೆ ಮತ್ತೊಂದು ಹೆಸರು ಭಗೀರಥ. ಸಂಘಟಿತರಾಗಿ ಕಠಿಣ ಪರಿಶ್ರಮ ವಹಿಸಿದಾಗ ಮಾತ್ರ ಸಮಾಜ ಏಳ್ಗೆಯಾಗಲು ಸಾಧ್ಯವಿದೆ ಎಂದು ತಿಳಿಸಿದರು. ಶ್ರೀ ಭಗೀರಥ …
Read More »ಮಹಾದೇವಿ ಮೆಮೋರಿಯಲ್ ಆಸ್ಪತ್ರೆ ಗುಣಮಟ್ಟದ ಸೇವೆ ಸಲ್ಲಿಸಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಹುಕ್ಕೇರಿ: ಬಸವಣ್ಣವರ ಕ್ರಾಂತಿಯಿಂದ 12ನೇ ಶತಮಾನದಲ್ಲೇ ಮಹಿಳೆಯರ ಜೀವನದಲ್ಲಿ ಕೆಲ ಬದಲಾವಣೆಗಳಾದವು, ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿ ತರುವ ಮೂಲಕ ಮಹಿಳೆಯರ ಪ್ರಗತಿಗಾಗಿ ಅನೇಕ ಕಾನೂನುಗಳನ್ನು ತಂದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಪಾಚ್ಛಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಾದೇವಿ ಮೆಮೋರಿಯಲ್ ನೂತನ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. ಭಾರತ ದೇಶದಲ್ಲಿ …
Read More »ಸತೀಶ್ ಜಾರಕಿಹೊಳಿ ಫೌಂಡೇಶನದಿಂದ ಉಚಿತ ಕರಾಟೆ ತರಬೇತಿ; ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಶಿವಾ ಫೌಂಡೇಶನ್ ಮಕ್ಕಳು!
ಗೋಕಾಕ: ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಶಿವಾ ಫೌಂಡೇಶನ್ ಮಕ್ಕಳಿಗೆ ಕರಾಟೆ ತರಬೇತಿ, ಪ್ರೋತ್ಸಾಹ ನೀಡಿದರು, ಮಕ್ಕಳಿಗೆ ಅವಕಾಶ ಕಲ್ಪಿಸುವ ಮೂಲಕ ಯೂತ್ ಗೇಮ್ಸ್ ನ್ಯಾಷನಲ್ ಗೋಲ್ಡನ್ ಕಪ್ 2022 ದಲ್ಲಿ ವಿಧ್ಯಾರ್ಥಿಗಳು ಸಾಧನೆ ಮಾಡಿದರು. ಹರಿಯಾಣದಲ್ಲಿ ನಡೆದ ಯೂತ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯೂತ್ ಗೇಮ್ಸ್ ನ್ಯಾಷನಲ್ ಗೋಲ್ಡನ್ ಕಪ್ 2022 ದಲ್ಲಿ ಶಿವಾ ಫೌಂಡೇಶನ್ ಮಕ್ಕಳು ವಿಜೇತರಾಗಿ ಸಾಧನೆ ಮಾಡಿದ್ದು …
Read More »ವಿವಿಧ ಸೇವಾ ಕಾರ್ಯಗಳ ಮೂಲಕ ಲಖನ್ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ!
ಗೋಕಾಕ: ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ಅಭಿಮಾನಿಗಳಿಂದ ಮಕ್ಕಳಿಗೆ ನೋಟ ಬುಕ್ ಹಾಗೂ ರೋಗಿಗಳಿಗೆ ಹಣ್ಣು ಹಂಪಲು, ಉಪಾಹರ ವಿತರಿಸುವ ಮೂಲಕ ವಿನೂತನವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಲಖನ್ ಜಾರಕಿಹೊಳಿ ಅಭಿಮಾನಿ ಬಳಗದ ಸದಾನಂದ ಕಲಾಲ, ಆಸೀಫ್ ಮುಲ್ಲಾ, ಅಶೋಕ ಸಾಯನ್ನವರ, ರಮೇಶ ಬಡೆಪ್ಪಗೋಳ, ಸಂಜು ಜಡೆನ್ನವರ, ಅರುಣ ಕಲಾಲ, ದೇವಾನಂದ ಕಂಬಾರ, ಖಾಲೀದ್ ಅತ್ತಾರ, ಮಹೇಶ ಪಾಟೀಲ, ಮಹಾದೇವ ಜಗನೂರ ಸೇರಿದಂತೆ …
Read More »ವಿಪ ಚುನಾವಣೆ: ಜೂನ್ 13 ರಂದು ಶಾಲಾ ಕಾಲೇಜುಗಳಿಗೆ ರಜೆ
ಬೆಂಗಳೂರು,ಜೂನ್ 10: ರಾಜ್ಯದ ನಾಲ್ಕು ಸ್ಥಾನಗಳ ವಿಧಾನ ಪರಿಷತ್ ಚುನಾವಣೆ ಜೂನ್ 13ರಂದು ನಡೆಯಲಿದ್ದು. ಎರಡು ಪದವೀಧರ ಕ್ಷೇತ್ರ ಮತ್ತು ಎರಡು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ನಡೆಯಲಿದ್ದು ಜೂನ್ 13ರಂದು ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.ಜೂನ್ 13 ಸೋಮವಾದಂದು ಕರ್ನಾಟಕ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯುತ್ತಿದ್ದು. ಶಿಕ್ಷಕರು ಮತ್ತು ಪಧವೀಧರರು ಮತದಾನವನ್ನು ಮಾಡುವ ಸಲುವಾಗಿ ವಿಶೇಷ ಸಾಂದರ್ಭಿಕ …
Read More »