Breaking News

Monthly Archives: ಮೇ 2022

ವಾಹನಗಳ ನೋಂದಣಿ ಫಲಕಗಳ ಮೇಲೆ ಯಾವುದೇ ಹೆಸರು, ಚಿನ್ನೆ, ಲಾಂಛನ ಹಾಕುವಂತಿಲ್ಲ.

ಬೆಂಗಳೂರು: ರಾಜ್ಯದ ಯಾವುದೇ ವಾಹನಗಳ ನೋಂದಣಿ ಫಲಕಗಳ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುತ್ತಿರುವ ಸಂಘ, ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ತೆರವುಗೊಳಿಸುವಂತ ಗೆಜೆಟ್ ಅಧಿಸೂಚನೆಯಲ್ಲಿ ಖಡಕ್ ಆದೇಶ ಹೊರಡಿಸಿದೆ.ಈ ಕುರಿತಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು, ಕರ್ನಾಟಕ ರಾಜ್ಯಪತ್ರದಲ್ಲಿ ಸುತ್ತೋಲೆ ಹೊರಡಿಸಿದ್ದು, ವಾಹನಗಳ ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮದ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.ಖಾಸಗಿ ವಾಹನಗಳು ಸರ್ಕಾರದ …

Read More »

ಗೋವಾದಲ್ಲಿ ಭೀಕರ ಕಾರ್ ಅಪಘಾತ; ಬೆಳಗಾವಿಯ ಮೂವರು ಸಾವು!

ಪಣಜಿ: ಗೋವಾದ ಮಾಪ್ಸಾದಲ್ಲಿ ಭಾನುವಾರ ಮುಂಜಾನೆ ಸ್ವಿಫ್ಟ್‌ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಚಲಿಸುತ್ತಿದ್ದ ಬೆಳಗಾವಿ ಮೂಲದ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಅನಗೋಳಕರ್ (28), ರೋಹನ್ ಗದಗ (26), ಸನ್ನಿ ಅಣವೇಕರ್ (31) ಮೃತಪಟ್ಟ ದುರ್ದೈವಿಗಳು.ಕಾರಿನಲ್ಲಿದ್ದ ವಿಶಾಲ ಕಾರೇಕರ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೆಳಗಿನ ಜಾವ ಸುಮಾರು 4 ಗಂಟೆಯ ವೇಳೆ ಮಾಪ್ಸಾದ ಕುಚೇಲಿಯಲ್ಲಿ ಕಾರು ರಸ್ತೆ …

Read More »

ಗೋಕಾಕ ನಗರದಲ್ಲಿ ಹೆರಾಯಿನ್, ಗಾಂಜಾ ವಶ ; ನಾಲ್ವರ ಆರೆಸ್ಟ್

ಬೆಳಗಾವಿ – ನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬೆಳಗಾವಿಯ ಮೂವರು ಮತ್ತು ಖರೀದಿಗೆ ಮುಂದಾಗಿದ್ದ ಗೋಕಾಕದ ಒಬ್ಬನನ್ನು ಗೋಕಾಕ್ ನಗರದಲ್ಲಿ ಬಂಧಿಸಿರುವ ಪೊಲೀಸರು ಭಾರಿ ಪ್ರಮಾಣದಲ್ಲಿ ಪೆನ್ನಿಯನ್ನು ವಶಪಡಿಸಿಕೊಂಡಿದ್ದಾರೆ. ಗೋಕಾಕ ಪಿಡಬ್ಲೂಡಿ ಐಬಿಯ ಹತ್ತಿರ ಬೆಳಗಾವಿಯ ಅಬ್ದುಲ್‌ಖಾದಿರ @ ಜಿಯಾ ನಾಯಿಕ, ಮೋಸಿನ್ ಜಮಾದಾರ ಮತ್ತು ಸಲ್ಮಾನ ಮುಲ್ಲಾ ಇವರು ತಮ್ಮ ಕಾರ್ (ನಂಬರ ಕೆಎ-5l-ಎಮ್ ಸಿ0787 ನೇದ್ದರಲ್ಲಿ) ನಲ್ಲಿ ನಿಷೇಧಿತ ಹೇರಾಯಿನ್ (ಪೆನ್ನಿ) ಮಾದಕ ವಸ್ತು ಮತ್ತು ಗಾಂಜಾ …

Read More »

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಾಗಲಿದೆ?

ಬೆಂಗಳೂರು, ಮೇ 21: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಂಜೆ ಘೋಷಿಸಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರದ ಈ ಘೋಷಣೆಯಿಂದ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಾಗಲಿದೆ ಎಂಬ ವಿಷಯ ರಾಜ್ಯದ ವಾಹನ ಸವಾರರನ್ನು ಕಾಡುತ್ತಿದೆ.ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳನ್ನು ಇಳಿಕೆ ಮಾಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ 8 ರೂ, …

Read More »

ನಾಳೆ ಗೋಕಾಕ ತಾಲೂಕು ಗಾಣಿಗೇರ ಸಮಾವೇಶ!

ಗೋಕಾಕ ಮೇ 21 : ಗೋಕಾಕ ನಗರ ಗಾಣಿಗೇರ ಅಭಿವೃದ್ಧಿ ಸಂಘ ವತಿಯಿಂದ ಗೋಕಾಕ ಗಾಣಿಗೇರ ಸಮಾವೇಶದ ಉದ್ಘಾಟನೆ ಸಮಾರಂಭವು ರವಿವಾರ ದಿನಾಂಕ 22 ರಂದು ಮುಂಜಾನೆ 10 ಘಂಟೆಗೆ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಲೌಕಿಕ ಜ್ಞಾನ ಮಂದಿರ ನಿಲಜಿ ಬೆಳಗಾವಿ ಶ್ರೀ ಶಿವಾನಂದ ಗುರುಜಿ ಮತ್ತು ಗೋಕಾಕ ಮುಪ್ಪಯ್ಯನ ಮಠದ ಷಟಸ್ಥಳ ಬ್ರಹ್ಮ ಶ್ರೀ ಪೂಜ್ಯ ರಾಚೋಟಿ ದೇವರು ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ರಮೇಶ ಜಾರಕಿಹೊಳಿ …

Read More »

ಯಾವುದೇ ಅಧಿಕಾರಿಗಳಿಗೆ ಮುಂದಿನ 15 ದಿನ ರಜೆ ಇಲ್ಲ: ಸಿಎಂ ಬೊಮ್ಮಾಯಿ ಖಡಕ್ ಆದೇಶ!

ಬೆಂಗಳೂರು: ಮಳೆ ಹಾನಿ ಪರಿಹಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದು ಅಧಿಕಾರಿಗಳಿಗೆ ಮಳೆಯಿಂದ ಉಂಟಾದ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ಕೆಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. 728 ಕೋಟಿ ಹಣ ತುರ್ತು ಸಂದರ್ಭದಲ್ಲಿ ಹಣ ಬಳಕೆಗೆ ಎಂದೇ ಜಿಲ್ಲಾಧಿಕಾರಿಗಳ ಜವಾಬ್ದಾರಿಯಲ್ಲಿದೆ.ಅಗತ್ಯ ತುರ್ತು ಸಂದರ್ಭಗಳಲ್ಲಿ ಹಣ ಬಳಕೆ (Emergency Fund) ಮಾಡಬಹುದಾಗಿದೆ. ಜಿಲ್ಲಾಧಿಕಾರಿಗಳು ಮಳೆಯಿಂದ ಹಾನಿ‌ (Karnataka Rain Updates) ಉಂಟಾದ ಪ್ರದೇಶಗಳಿಗೆ ಭೇಟಿ ನೀಡಬೇಕು. ಮೂರು ದಿನದಲ್ಲಿ ಸರ್ಕಾರಕ್ಕೆ …

Read More »

ಸಂಭಾವ್ಯ ಪ್ರವಾಹ ಮತ್ತು ಅತೀವೃಷ್ಟಿ ನಿಯಂತ್ರಣ ಸಲುವಾಗಿ ಗೋಕಾಕದಲ್ಲಿ ಪೂರ್ವಭಾವಿ ಸಭೆ

ಗೋಕಾಕ: ನಿರಂತರ ಮಳೆ ಹಾಗೂ ಮುಂದೆ ಬರಬಹುದಾದ ಪ್ರವಾಹ ಭೀತಿಯನ್ನು ಎದುರಿಸುವ ಸಲುವಾಗಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿಗಳಾದ ಬಸವರಾಜ ಕುರಿಹುಲಿ ಅವರು ತಾಲೂಕಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ತಹಶೀಲ್ದಾರ ಕಛೇರಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ನಿಯಂತ್ರಣದ ಬಗ್ಗೆ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಪಂಚಾಯತ ಮಟ್ಟದ ನೋಡಲ್ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳನ್ನು ಉದ್ದೇಶಿಸಿ …

Read More »

ಟಿಸಿ ಅಳವಡಿಸುವಾಗ ಕೆಎಬಿ ಉರಬನಟ್ಟಿ ಲೈನ್ ಮ್ಯಾನ್ ಸಾವು!

ಗೋಕಾಕ : ತಾಲೂಕಿನ ಉರಬನಟ್ಟಿ ಗ್ರಾಮದಲ್ಲಿ ನೂತನ ಟ್ರಾನ್ಸ್​ಫಾರ್ಮ್ (ಟಿಸಿ) ಅಳವಡಿಸುವ ಸಂದರ್ಭದಲ್ಲಿ ರಮೇಶ್ ಹೊಳ್ಳಪ್ಪಗೋಳ (32) ಎಂಬ ಕೆ ಎಬಿ ಸಹಾಯಕ ಸ್ಥಳದಲ್ಲಿ ಮೃತ ಪಟ್ಟಿದ್ದು, ಕೆಎಬಿ ಲೈನ್ ಮ್ಯಾನ್ ದರೀಗೌಡ ವಡೇರ ಎಂಬ ಗಾಯಗೊಂಡ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಂಕಲಗಿ ಪಿಎಸ್ಐ ಪ್ರಕಾಶ್ ರಾತೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮಯೂರ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಲಖನ್ ಜಾರಕಿಹೊಳಿ ಅವರು ಸತ್ಕಾರ!

ಗೋಕಾಕ: ಮಯೂರ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಲಖನ್ ಜಾರಕಿಹೊಳಿ ಅವರು ಸತ್ಕಾರ ಮಾಡಿದರು. ಎಸ್ ಎಸ್ ಎಲ್ ಸಿ ಪರೀಕ್ಷೆಯ ಮಯೂರ ಶಾಲೆಯ ಫಲಿತಾಂಶದಲ್ಲಿ ಸಂಜನಾ ಆರ್ ತುಬಚಿ 623 ( 99.68 ) ಅಂಕ ಪಡೆದು ರಾಜ್ಯಕ್ಕೆ ಮೂರನೆಯ ಸ್ಥಾನ . ಬೀಬಿ ಆಯಿಷಾ ಅಂಡಗಿ 621 ( ಶೇ 99.36 ) ಅಂಕ ಪಡೆದು ರಾಜ್ಯಕ್ಕೆ ಐದನೆಯ ಸ್ಥಾನ ಪಡೆದು, ಅಶ್ವಿನಿ …

Read More »

ಕಾಂಗ್ರೆಸ್‌ನಿಂದ ಮಾತ್ರ ದಲಿತ ಸಿಎಂ ಮಾಡಲು ಸಾಧ್ಯ: ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್‌ ಜಾರಕಿಹೊಳಿ

ರಾಯಚೂರು: ಬಿಜೆಪಿ, ಜೆಡಿಎಸ್‌ನಿಂದ ದಲಿತರು ಮುಖ್ಯಮಂತ್ರಿ ಆಗುವುದಿಲ್ಲ. ದಲಿತರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ, ಅದಕ್ಕೆ ಕಾಲಾವಕಾಶ ಬೇಕು ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಬಿಜೆಪಿ ಸರಕಾರ, ದಲಿತ ಸಮುದಾಯಗಳ ಅಭಿವೃದ್ಧಿಯ ಅನುದಾನ ಕಡಿತ ಮಾಡಿದೆ. ನಾರಾಯಣಪುರ ಬಲದಂಡೆ ನಾಲೆಯ ಸಮಗ್ರ ಆಧುನೀಕರಣದ ಹೆಸರಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ದೊಡ್ಡ …

Read More »