Breaking News

Daily Archives: ಮೇ 22, 2022

ಝಣ ಝಣ ಕಾಂಚಾಣ… ಉಪತಹಸೀಲ್ದಾರ್ ಎಸಿಬಿ ಬಲೆಗೆ!

ಬೆಂಗಳೂರು : ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸಿಬಿ ಲಂಚಬಾಕ ಅಧಿಕಾರಿಯನ್ನು ಬಲೆಗೆ ಕೆಡವಿದೆ. ಜಿಲ್ಲಾಧಿಕಾರಿ ಮಂಜುನಾಥ್ ಜೊತೆಯಲ್ಲಿ ಕರ್ತ್ಯವ್ಯವನ್ನು ನಿರ್ವಹಿಸುತ್ತಿದ್ದ ಉಪ ತಹಸೀಲ್ದಾರ್ ಮಹೇಶ್ ಮತ್ತು ಕ್ಲರ್ಕ್ ಚೇತನ್ ಕುಮಾರ್ ಅಲಿಯಾಸ್ ಚಂದ್ರು ಐದು ಲಕ್ಷ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಇಬ್ಬರು ಆರೋಪಿಗಳನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಎಸಿಬಿಯ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ಟ್ರ್ಯಾಪ್ ಎಸಿಬಿಯ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ. ಆಜಾಂ ಪಾಷ …

Read More »

ವಾಮಾಚಾರಕ್ಕೆ ದೇವರ ಮೂರ್ತಿ ಕಳ್ಳತನ ಮಾಡಿದ ಖದೀಮರು!

ಬೆಳಗಾವಿ: ದೇವಸ್ಥಾನದ ಗರ್ಭಗುಡಿಯಲ್ಲಿದ್ದ ದೇವರ ಮೂರ್ತಿಯನ್ನೇ ಕಳ್ಳತನ ಮಾಡಿರುವ ಘಟನೆ ಅಥಣಿ ತಾಲೂಕಿನ ಕೋಕಟನೂರು ಗ್ರಾಮದಲ್ಲಿ ನಡೆದಿದೆ. ಐತಿಹಾಸಿಕ ಪರಂಪರೆಯುಳ್ಳ ಕೋಕಟನೂರು ಗ್ರಾಮದ ಬೀರೇಶ್ವರ ದೇವರ ಮೂರ್ತಿಯನ್ನು ಖದೀಮರು ಕದ್ದೊಯ್ದಿದ್ದಾರೆ.ವಾಮಾಚಾರ ಅಥವಾ ನಿಧಿಗಳ್ಳತನಕ್ಕೆ ದೇವರ ಮೂರ್ತಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ತಡರಾತ್ರಿ ಖಳ್ಳತನ ನಡೆದಿದ್ದು, ಇಂದು ಮುಂಜಾನೆ ಅರ್ಚಕರು ಪೂಜೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಐಗಳಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Read More »

ಎಲ್ಲಾ ಧರ್ಮಗಳು ಒಗ್ಗೂಡಿಕೊಂಡಾಗ ಮಾತ್ರ ಸಮಾಜದ ಶ್ರೇಯೋಭಿವೃದ್ದಿ ಸಾಧ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ

ಕುಂದಗೋಳದಲ್ಲಿ 31 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬಾಗಿಯಾದ ಸತೀಶ ಜಾರಕಿಹೊಳಿ ಕುಂದಗೋಳ: “ಭಾರತೀಯ ಸಂಸ್ಕೃತಿಗೆ ತನ್ನದೇಯಾದ ಇತಿಹಾಸವಿದೆ. ವಿವಾಹಗಳು ಆ ಸಂಪ್ರದಾಯದಂತೆ ನಡೆಯುವುದು ಇಂದಿಗೂ ರೂಡಿಯಲ್ಲಿದೆ. ಎಲ್ಲಾ ಧರ್ಮಗಳು ಒಗ್ಗೂಡಿಕೊಂಡಾಗ ಮಾತ್ರ ಸಂಪ್ರದಾಯ, ಸಂಸ್ಕೃತಿಗೆ ಮೆರಗು ಬರುತ್ತದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು. ದಿ. ಶ್ರೀ ಗೋವಿಂದಪ್ಪ ಹ. ಜುಟ್ಟಲ ಇವರ ಸ್ಮರಣಾರ್ಥ ನಿಮಿತ್ತವಾಗಿ ಭಾನುವಾರ ಕುಂದಗೋಳದಲ್ಲಿ ಜುಟ್ಟಲ ಪ್ರತಿಷ್ಠಾನ ಮತ್ತು ಮಾನವ …

Read More »

ವಾಹನಗಳ ನೋಂದಣಿ ಫಲಕಗಳ ಮೇಲೆ ಯಾವುದೇ ಹೆಸರು, ಚಿನ್ನೆ, ಲಾಂಛನ ಹಾಕುವಂತಿಲ್ಲ.

ಬೆಂಗಳೂರು: ರಾಜ್ಯದ ಯಾವುದೇ ವಾಹನಗಳ ನೋಂದಣಿ ಫಲಕಗಳ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುತ್ತಿರುವ ಸಂಘ, ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ತೆರವುಗೊಳಿಸುವಂತ ಗೆಜೆಟ್ ಅಧಿಸೂಚನೆಯಲ್ಲಿ ಖಡಕ್ ಆದೇಶ ಹೊರಡಿಸಿದೆ.ಈ ಕುರಿತಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು, ಕರ್ನಾಟಕ ರಾಜ್ಯಪತ್ರದಲ್ಲಿ ಸುತ್ತೋಲೆ ಹೊರಡಿಸಿದ್ದು, ವಾಹನಗಳ ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮದ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.ಖಾಸಗಿ ವಾಹನಗಳು ಸರ್ಕಾರದ …

Read More »

ಗೋವಾದಲ್ಲಿ ಭೀಕರ ಕಾರ್ ಅಪಘಾತ; ಬೆಳಗಾವಿಯ ಮೂವರು ಸಾವು!

ಪಣಜಿ: ಗೋವಾದ ಮಾಪ್ಸಾದಲ್ಲಿ ಭಾನುವಾರ ಮುಂಜಾನೆ ಸ್ವಿಫ್ಟ್‌ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಚಲಿಸುತ್ತಿದ್ದ ಬೆಳಗಾವಿ ಮೂಲದ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಅನಗೋಳಕರ್ (28), ರೋಹನ್ ಗದಗ (26), ಸನ್ನಿ ಅಣವೇಕರ್ (31) ಮೃತಪಟ್ಟ ದುರ್ದೈವಿಗಳು.ಕಾರಿನಲ್ಲಿದ್ದ ವಿಶಾಲ ಕಾರೇಕರ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೆಳಗಿನ ಜಾವ ಸುಮಾರು 4 ಗಂಟೆಯ ವೇಳೆ ಮಾಪ್ಸಾದ ಕುಚೇಲಿಯಲ್ಲಿ ಕಾರು ರಸ್ತೆ …

Read More »

ಗೋಕಾಕ ನಗರದಲ್ಲಿ ಹೆರಾಯಿನ್, ಗಾಂಜಾ ವಶ ; ನಾಲ್ವರ ಆರೆಸ್ಟ್

ಬೆಳಗಾವಿ – ನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬೆಳಗಾವಿಯ ಮೂವರು ಮತ್ತು ಖರೀದಿಗೆ ಮುಂದಾಗಿದ್ದ ಗೋಕಾಕದ ಒಬ್ಬನನ್ನು ಗೋಕಾಕ್ ನಗರದಲ್ಲಿ ಬಂಧಿಸಿರುವ ಪೊಲೀಸರು ಭಾರಿ ಪ್ರಮಾಣದಲ್ಲಿ ಪೆನ್ನಿಯನ್ನು ವಶಪಡಿಸಿಕೊಂಡಿದ್ದಾರೆ. ಗೋಕಾಕ ಪಿಡಬ್ಲೂಡಿ ಐಬಿಯ ಹತ್ತಿರ ಬೆಳಗಾವಿಯ ಅಬ್ದುಲ್‌ಖಾದಿರ @ ಜಿಯಾ ನಾಯಿಕ, ಮೋಸಿನ್ ಜಮಾದಾರ ಮತ್ತು ಸಲ್ಮಾನ ಮುಲ್ಲಾ ಇವರು ತಮ್ಮ ಕಾರ್ (ನಂಬರ ಕೆಎ-5l-ಎಮ್ ಸಿ0787 ನೇದ್ದರಲ್ಲಿ) ನಲ್ಲಿ ನಿಷೇಧಿತ ಹೇರಾಯಿನ್ (ಪೆನ್ನಿ) ಮಾದಕ ವಸ್ತು ಮತ್ತು ಗಾಂಜಾ …

Read More »