Breaking News

Monthly Archives: ಏಪ್ರಿಲ್ 2022

ರಿಯಾನಾ ಶೌಕತ್ ಮಕಾಂದಾರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಂತಾಪ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಫಜಲ್ ಮಕಾಂದಾರ ಅವರ ತಾಯಿ ರಿಯಾನಾ ಶೌಕತ್ ಮಕಾಂದಾರ(48) ಬುಧವಾರ ಸಂಜೆ ನಿಧನರಾದರು. ಮೃತರು ಪಾಶ್ಚಾಪೂರ ಗ್ರಾಮದ ನಿವಾಸಿಯಾಗಿದ್ದು, ನಾಳೆ ಬೆಳಗ್ಗೆ 9:00 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಮೃತರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.

Read More »

ಮಂಜು ಕೊಲೆ ಪ್ರಕರಣ ದಿನಕ್ಕೊಂದು ತಿರುವು, ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಮುರಕಿಬಾಂವಿ ಕುಟುಂಬ!

ಬೆಳಗಾವಿ : ಗೋಕಾಕನಲ್ಲಿ ಕಳೆದ ವರ್ಷ ಮಂಜು ಮುರಕಿಬಾಂವಿ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದಾರೆ. ಸಿದ್ಧಪ್ಪ ಬಬಲಿ ಜಾಮೀನು ಮೇಲೆ‌ ಬಿಡುಗಡೆಯಾಗಿದ್ದು ಅವನಿಂದ ನಮ್ಮ ಕುಟುಂಬಕ್ಕೆ ಜೀವ ಬೇದರಿಕೆ ಇದೆ. ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ಸಹೋದರ ವಿಠ್ಠಲ ಮುರಕಿಬಾಂವಿ ತಿಳಿಸಿದರು. ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದಪ್ಪ ಬಬಲಿ ಮಗಳು ಹಾಗೂ ನನ್ನ ಸಹೋದರ ಪರಸ್ಪರ ಪ್ರೀತಿಸುತ್ತಿದ್ದರು. ಮಂಜುಗೆ ನಿಮ್ಮ ಮಗಳು ಕೊಡುವಂತೆ …

Read More »

ಯಮಕನಮರಡಿ ಕ್ಷೇತ್ರದಲ್ಲಿ ಕತ್ತಲೆಯನ್ನು ಹೊಗಲಾಡಿಸಿದ ಧೀಮಂತ ನಾಯಕ, ಸಮಸ್ಯೆಗಳಿಗೆ ಸ್ಪಂದಿಸಿದ ಸಹಕಾರ ಜೀವಿ ಸಾಹುಕಾರ್‌

ಯಮಕನಮರಡಿ ಮತಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕ ಸತೀಶ ಜಾರಕಿಹೊಳಿರನ್ನುಕೊಂಡಾಡಿರುವ ಮಾಜಿ ಜಿಪಂ ಸದಸ್ಯರ ಮನದಾಳದ ಮಾತುಗಳು ಇಲ್ಲಿವೆ. ಯಮಕನಮರಡಿ: ವಿದ್ಯಾರ್ಥಿಗಳ ಹಾಗೂ ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ಪಾಶ್ಚಾಪೂರದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಮಾರ್ಕೇಂಡೆಯ ನದಿ ಅಡ್ಡಲಾಗಿ ಬೃಹತ್‌ ಸೇತುವೆ ನಿರ್ಮಾಣ ಮಾಡಿದ್ದಾರೆ. ಈ ಭಾಗದ ಬಹುದಿನಗಳ ಕನಸನ್ನು ಶಾಸಕ ಸತೀಶ ಜಾರಕಿಹೊಳಿ ಅವರು ನನಸು ಮಾಡಿದ್ದಾರೆ ಎಂದು ಮಾಜಿ ಜಿಪಂ ಸದಸ್ಯ ಮಂಜುನಾಥ ಪಾಟೀಲ ಹೇಳಿದರು.   ಯಮಕನಮರಡಿ …

Read More »

ಕಮೀಷನ್ ಭ್ರಷ್ಟಾಚಾರ, ಹಗರಣಗಳ ಆರೋಪ! ಅನುಮಾನ ಮೂಡಿಸಿದ ಖಾಲಿ ಇರುವ ಲೋಕಾಯುಕ್ತ ಹುದ್ದೆ?

ಬೆಂಗಳೂರು: ಭ್ರಷ್ಟಾಚಾರ, ಹಗರಣಗಳ ಆರೋಪಗಳ ನಡುವೆಯೂ ಕರ್ನಾಟಕದಲ್ಲಿ ಲೋಕಾಯುಕ್ತ ಹುದ್ದೆ ಭರ್ತಿ ಮಾಡುವ ಮನಸನ್ನು ರಾಜ್ಯ ಸರ್ಕಾರ ಮಾಡಿದಂತೆ ಕಾಣುತ್ತಿಲ್ಲ…   ಹೌದು.. ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರ ಅವಧಿ ಜನವರಿ 27, 2022 ರಂದು ಕೊನೆಗೊಂಡಾಗಿನಿಂದ ಕರ್ನಾಟಕ ಲೋಕಾಯುಕ್ತ ಹುದ್ದೆ ಖಾಲಿ ಬಿದ್ದಿದೆ. ಸುಮಾರು ಮೂರು ತಿಂಗಳಿನಿಂದ ಖಾಲಿ ಇರುವ ಲೋಕಾಯುಕ್ತ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ತನ್ನ ವ್ಯಾಪ್ತಿಯಲ್ಲಿನ ಕಲಾಪವನ್ನು ಸ್ಥಗಿತಗೊಳಿಸಿದ್ದಲ್ಲದೆ, ನೇಮಕಾತಿ …

Read More »

ಲೋಳಸೂರ ಗ್ರಾಮದಲ್ಲಿ “ರಾಹುಲ್ ಕಪ್” ಕಬಡ್ಡಿ ಪಂದ್ಯಾವಳಿ

ಗೋಕಾಕ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಲೋಳಸೂರ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿ ನಿಮಿತ್ತವಾಗಿ ರಾಹುಲ್ ಕಪ್ ಕಬಡ್ಡಿ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದ್ಯಸರಾದ ಜುಬೇರ್ ಮಿರ್ಜಾಬಾಯಿ ಅವರನ್ನು ಕಬ್ಬಡ್ಡಿ ಆಯೋಜಕರು ಸತ್ಕಾರ ಮಾಡಿದರು.ನಂತರ ಗೆಲುವು ಸಾಧಿಸಿದ ತಂಡಕ್ಕೆ ಜುಬೇರ್ ಮಿರ್ಜಾಬಾಯಿ ಅವರು “ರಾಹುಲ್ ಕಪ್” ವಿತರಿಸಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ನಾಗರಾಜ ಗಡಾದ, ಶಿವು ಬಾಗಾಯಿ, ಶ್ರೀಶೈಲ ಗಡಾದ, ಯಲ್ಲಪ್ಪಾ ರಕ್ಷಿ, …

Read More »

ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಆರ್ಥಿಕ ಪ್ರಗತಿ ಹೊಂದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಡಾ.ಬಿ.ಆರ್. ಅಂಬೇಡ್ಕರ್‌ ಅವರ 131ನೇ ಜಯಂತಿ ಕಾರ್ಯಕ್ರಮ   ಹುಕ್ಕೇರಿ: ಬಸವಣ್ಣ, ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಕೂಡ ಮೂಢನಂಬಿಕೆ ವಿರೋಧ ಮಾಡುತ್ತಿದ್ದರು, ಹೀಗಾಗಿ ನೀವು ಮೂಢನಂಬಿಕೆಗಳನ್ನು ವಿರೋಧಿಸಿ, ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಆರ್ಥಿಕ ಪ್ರಗತಿ ಹೊಂದಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಕರೆ ನೀಡಿದರು.   ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ 131ನೇ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ …

Read More »

ಪ್ರತಿ ಲೀ.ಹಾಲಿಗೆ ೩ ರೂ. ಹೆಚ್ಚಳ ಮಾಡಲು ಸಿಎಂ ಬೊಮ್ಮಾಯಿ ಅವರನ್ನು ಕೋರಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಎರಡು ವರ್ಷದಲ್ಲಿ ೨೫೦೦೦ ಕೋಟಿ ರೂ ವಹೀವಾಟು ಮಾಡಲಿರುವ ಕೆಎಂಎಫ್- ಬಾಲಚಂದ್ರ ಜಾರಕಿಹೊಳಿ.* ಬೆಂಗಳೂರು : ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಬಹುತೇಕ ಎಲ್ಲ ವೆಚ್ಚಗಳು ಶೇ 30 ರಷ್ಟು ಹೆಚ್ಚಾಗಿರುವುದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.   …

Read More »

ಗೋಕಾಕದಲ್ಲಿ ದಿನಾಂಕ 29 ರಂದು ನಗರದಲ್ಲಿ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ!

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೋಡಿ,ತಾಲೂಕು ಆಡಳಿತ ಗೋಕಾಕ , ತಾಲೂಕು ಪಂಚಾಯಿತಿ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ದಿನಾಂಕ 29 ರಂದು ಮುಂಜಾನೆ 10 ಘಂಟೆಗೆ …

Read More »

ಕೊರೋನಾ 4 ನೇ ಅಲೆ ಆತಂಕ; ಸಿಎಂ ನೇತೃತ್ವದಲ್ಲಿ ಸಭೆ!

ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ಮಾಸ್ಕ್‌ ಕಡ್ಡಾಯ ಮಾಡಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಇಂದು ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಾಗಿದೆ.ಈ ಬಗ್ಗೆ ಸಭೆ ಬಳಿಕ ಸಚಿವ ಸುಧಾಕರ್‌ ಅವರು ಮಾಧ್ಯಮಗಳಿಗೆ ಮಾಹಿತಿ ನಿಡಿದರು.   ಇದೇ ವೇಳೆ ಅವರು ಮಾತನಾಡಿ, ಲಸಿಕೆ ಅಭಿಯಾನಕ್ಕೆ ಒತ್ತು ನೀಡಲಾಗುವುದು, ಇದಲ್ಲದೇ ಸೋಂಕು ಹೆಚ್ಚು ಇರುವ ದೇಶದಿಂದ ಬರೋರ ಮೇಲೆ ನಿಗ …

Read More »

ಮಂಜು ಮುರ್ಕೀಬಾವಿ ಕೊಲೆ ಪ್ರಕರಣ; ಮುರಕಿಭಾವಿ ಕುಟುಂಬಸ್ಥರಿಂದ ಸುದ್ದಿ ಗೋಷ್ಠಿ,

ಗೋಕಾಕ : 2021ರ ಜುಲೈ 17ರಂದು ನಗರ ಹೊರವಲಯದಲ್ಲಿ ನಡೆದ ಮಂಜು ಶಂಕರ ಮುರ್ಕೀಬಾಂವಿ ಎಂಬಾತದ ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ವಿಲ್ಲ ಎಂದು ಹೇಳಿರುವ ಬೆಳಗಲಿಯ ರಾಯವ್ವ ಖಾನಟ್ಟಿ ಎಂಬುವವರ ಪುತ್ರಿ ಸುಷ್ಮೀತಾ ಅವಳ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ ಎಂದು ಮೃತನ ಸಹೋದರಿ ಸಿದ್ದವ್ವ ಮುರ್ಕೀಬಾಂವಿ ಮತ್ತು ಸಹೋದರ ವಿಠಲ ಮುರ್ಕೀಬಾಂವಿ ಸ್ವಷ್ಟಪಡಿಸಿದರು. ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಂಜು ಮತ್ತು ಸುಷ್ಮೀತಾ ಪರಸ್ಪರ …

Read More »