ಬೆಂಗಳೂರು: ರಾಜ್ಯ ಸರ್ಕಾರದಿಂದ ರಂಜಾನ್ ರಜೆಯನ್ನು ದಿನಾಂಕ 03-05-2022ರಂದು ನಿಗದಿ ಪಡಿಸಿ ಘೋಷಣೆ ಮಾಡಿತ್ತು. ಆದ್ರೇ.. ಮೂನ್ ಕಮಿಟಿ ತೀರ್ಮಾನದಿಂದಾಗಿ ಇದೀಗ ದಿನಾಂಕ 02-05-2022ರಂದು ಬದಲಾವಣೆ ಮಾಡಿ ಮರು ನಿಗದಿಪಡಿಸಿ, ಸಾರ್ವತ್ರಿಕ ರಜೆಯಾಗಿ ಘೋಷಿಸಿದೆ.ಕುರಿತಂತೆ ರಾಜ್ಯ ಸರ್ಕಾರದ ಶಿಷ್ಟಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ 03-05-2022ರಂದು ಖುತುಬ್ ಎ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು. …
Read More »Monthly Archives: ಏಪ್ರಿಲ್ 2022
ಮೃತ ರಿಯಾನಾ ಮಕಾಂದಾರ ಮನೆಗೆ ಸತೀಶ್ ಜಾರಕಿಹೊಳಿ ಭೇಟಿ-ಸಾಂತ್ವಾನ
ಬೆಳಗಾವಿ: ಆಪ್ತ ಸಹಾಯಕ ಫಜಲ್ ಮಕಾಂದಾರ ಅವರ ತಾಯಿ ರಿಯಾನಾ ಶೌಕತ್ ಮಕಾಂದಾರ ನಿಧನರಾದ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪಾಶ್ಚಾಪೂರ ಗ್ರಾಮಕ್ಕೆ ಭೇಟಿ ನೀಡಿ, ಮೃತ ರಿಯಾನಾ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಲವು ಮುಖಂಡರು ಇದ್ದರು.
Read More »ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ವತಿಯಿಂದ ಅಪ್ಪು ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಹಾಗೂ ಪುಷ್ಪಾರ್ಚನೆ!
ಗೋಕಾಕ : ಮೊನ್ನೆಯ ದಿನ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಹತ್ತಿರ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿವಿ ರಾಘವೇಂದ್ರ ಅವರು ಹೋದಾಗ ಅಲ್ಲಿ ಅಲ್ಲಿಯ ಕೆಲ ಭದ್ರತಾ ಸಿಬ್ಬಂದಿಗಳು ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಾಹನದ ಮೇಲೆ ಇರುವ ಸ್ಪೀಕರನ್ನು ತೆಗೆದುಹಾಕಿದರೆ ಮಾತ್ರ ನಿಮ್ಮ ವಾಹನವನ್ನು ಮೇಲೆ ಹೋಗಲು ಬಿಡುತ್ತೇವೆ ಇಲ್ಲವಾದರೆ ಬಿಡುವುದಿಲ್ಲ ಎಂದು ಹಾಗೂ ಕನ್ನಡ ಶಲ್ಯ ಡೆಪಾಸಿಟ್ ಮಾಡಿದರೆ ಮಾತ್ರ ವಾಹನ ಬಿಡುತ್ತೇವೆ ಎಂದು ಪವರ್ …
Read More »ಎಲ್ಲರೂ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಿ : ಪಿಎಸ್ಐ ಕೆ ವಾಲಿಕಾರ
ಶಿವ-ಬಸವ ಜಯಂತಿ ಹಾಗೂ ರಮಜಾನ ಹಬ್ಬದ ಶಾಂತಿ ಪಾಲನಾ ಸಭೆ. ಗೋಕಾಕ : ಗೋಕಾಕ ನಗರ ಪೊಲೀಸ ಠಾಣೆಯಲ್ಲಿ ಶಿವ-ಬಸವ ಜಯಂತಿ ಹಾಗೂ ರಮಜಾನ ಹಬ್ಬದ ನಿಮಿತ್ಯ ಪೂರ್ವಭಾವಿ ಸಭೆಯನ್ನು ಪಿಎಸ್ಐ ಕೆ ವಾಲಿಕಾರ ಅವರು ನಡೆಸಿದರು. ಶಿವ-ಬಸವ ಜಯಂತಿ ಹಾಗೂ ರಮಜಾನ ಹಬ್ಬಗಳ ಆಚರಣೆ ವೇಳೆಯಲ್ಲಿ ಸಮಾಜದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ನಾಗರಿಕರ ಮೇಲಿದೆ, ಎಲ್ಲರೂ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಿ ಎಂದು ಪಿಎಸ್ಐ ಕೆ ವಾಲಿಕಾರ ಅವರು ಹೇಳಿದರು. …
Read More »ಗೋಕಾಕದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಯೋಜನೆಯನ್ನು ಶಾಸಕ ರಮೇಶ ಜಾರಕಿಹೊಳಿ ಹೊಂದಿದ್ದಾರೆ : ವಿಪ ಸದಸ್ಯ ಲಖನ್ ಜಾರಕಿಹೊಳಿ
ಗೋಕಾಕ : ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಉತ್ತಮ ಕಾರ್ಯಮಾಡುತ್ತಿದ್ದು, ಆಯುಷ್ಯಮಾನ ಇಲಾಖೆಯಲ್ಲಿ ಗೋಕಾಕ ಸರಕಾರಿ ಆಸ್ಪತ್ರೆ ರಾಜ್ಯಕ್ಕೆ 2 ನೇ ಸ್ಥಾನ ಪಡೆದಿದೆ. ಸರಕಾರಿ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಲು ಶಾಸಕ ರಮೇಶ ಜಾರಕಿಹೊಳಿ ಅವರು ಮುತುವರ್ಜಿ ವಹಿಸಿ ಕಾರ್ಯ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು . ಶುಕ್ರವಾರದಂದು ನಗರದ ಸರಕಾರಿ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ …
Read More »ಉಚಿತ ಆರೋಗ್ಯ ಮೇಳ” ಕಾರ್ಯಕ್ರಮಕ್ಕೆ ಜಾರಕಿಹೊಳಿ, ಕಡಾಡಿ ಚಾಲನೆ!
ಗೋಕಾಕ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳವನ್ನು ವಿಧಾನ ಪರಿಷತ್ತ ಸದಸ್ಯರಾದ ಲಖನ್ ಜಾರಕಿಹೊಳಿ ಹಾಗೂ ರಾಜ್ಯ ಸಭಾ ಸದಸ್ಯರಾದ ಈರಣ್ಣಾ ಕಡಾಡಿ ಅವರು ಚಾಲನೆ ನೀಡಿದರು. ದೇಶ ಹಾಗೂ ಸಮಾಜ ಸುಭದ್ರವಾಗಿರಲು ಆರೋಗ್ಯ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಸಮಾಜದ ಕಟ್ಟ ಕಡೆ ಮನುಷ್ಯನಿಗೂ ಸುಲಭವಾಗಿ ಆರೋಗ್ಯ ಸೇವೆ ನೀಡಲು ಮುಂದೆ ಬಂದಿದೆ. ಆಯುಷ್ಮಾನ ಭಾರತ ಸೇರಿದಂತೆ ಅನೇಕ ಕಾರ್ಯಕ್ರಮದ ಮೂಲಕ ಜನರಿಗೆ …
Read More »PSI ನೇಮಕಾತಿ ಅಕ್ರಮ; ಪರೀಕ್ಷೆ ರದ್ದು. ಮರು ಪರೀಕ್ಷೆಗೆ ನಿರ್ಧಾರ.
ಬೆಂಗಳೂರು: 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ( PSI Recruitment Scam ) ಅಕ್ರಮ ನೆಡೆದಿರೋ ಬಗ್ಗೆ ದಿನಕ್ಕೊಂದು ಟ್ವಿಸ್ಟ್ ಸಿಕ್ಕ ಹಿನ್ನಲೆಯಲ್ಲಿ, ಇದೀಗ ರಾಜ್ಯ ಸರ್ಕಾರದಿಂದ ಪಿಎಸ್‌ಐ ನೇಮಕಾತಿಯನ್ನೇ ರದ್ದು ಮಾಡಲಾಗಿದೆ.ಜೊತೆಗೆ ಮರು ಪರೀಕ್ಷೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Jnanendra ) ಮಾಹಿತಿ ನೀಡಿದ್ದು, ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರೋದು ಸಾಭೀತಾಗಿದೆ. ಬೆಂಗಳೂರು …
Read More »ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ; ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ!
ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಕೊನೆಗೂ ಬಂಧಿಸಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಹಾಗರಗಿಯನ್ನು ಸಿಐಡಿ ತಂಡ ಬಂಧಿಸಿದೆ. ದಿವ್ಯಾ ಹಾಗರಗಿ ಒಡೆತನಕ್ಕೆ ಸೇರಿದ ಜ್ಞಾನ ಜ್ಯೋತಿ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಮೂಲಕ ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ಕಳೆದ ಏ.ರಂದು ಎಫ್ ಐಆರ್ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ದಿವ್ಯಾಳನ್ನು ಕೊನೆಗೂ ಬಂಧಿಸಲಾಗಿದೆ. ಕಳೆದ ಎರಡುವರೆ …
Read More »ಬಿಲ್ ಮಂಜೂರಿಗಾಗಿ ಗುತ್ತಿಗೆದಾರನಿಂದ ಲಂಚ ಪಡೆದ ಎಇ!
ಕಲಬುರಗಿ: ಅಧಿಕಾರಿಯೊಬ್ಬರು ರಾಜಾರೋಷವಾಗಿ ಲಂಚ ಪಡೆಯುತ್ತಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗಗೊಂಡಿದೆ. ಗುತ್ತಿಗೆದಾರನಿಂದ ಪಿಡಬ್ಲ್ಯೂಡಿ ಎಇ ಲಂಚ ಪಡೆಯುತ್ತಿರುವ ದೃಶ್ಯ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಅಧಿಕಾರಿ ಲಂಚ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿಂಚೋಳಿ ತಾಲೂಕಿನ ಪೋತಂಗಲ ಗ್ರಾಮದಲ್ಲಿ ನಡೆದ ಒಂದು ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗೆ ಲಂಚ ನೀಡುವಂತೆ ಅಧಿಕಾರಿ ಬೇಡಿಕೆ ಇಟ್ಟಿದ್ದರಂತೆ. ಅದರಂತೆ, ಇಂದು ಬೈಕ್ ಮೇಲೆ ಕಲಬುರಗಿ …
Read More »ತಹಶೀಲದಾರ ನೇತ್ರತ್ವದಲ್ಲಿ ಶ್ರೀ ಭಗೀರಥ, ಹೆಮರೆಡ್ಡಿ ಮಲ್ಲಮ್ಮ ಜಯಂತಿ ಪೂರ್ವಭಾವಿ ಸಭೆ.!
ಗೋಕಾಕ: ಕೊರೋನಾ ಮತ್ತು ಪ್ರವಾಹದ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಎಲ್ಲ ಮಹನೀಯರ ಜಯಂತಿ ಉತ್ಸವಗಳನ್ನು ಸರಕಾರ ಆದೇಶದ ಮೇರೆಗೆ ಸರಳವಾಗಿ ಆಚರಿಸಲಾಗುತ್ತಿತು. ಈ ಬಾರಿ ಎಲ್ಲ ಜಯಂತಿಗಳನ್ನು ಅತಿ ಉತ್ಸಾಹದಿಂದ ಆಚರಿಸಲು ಅನುಕೂಲವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು. ಅವರು, ರಾಜಋಷಿ ಶ್ರೀ ಭಗೀರಥ ಮಹಾರಾಜರ ಜಯಂತಿ, ತಾಯಿ ಹೆಮರೆಡ್ಡಿ ಮಲ್ಲಮ್ಮ ಜಯಂತಿ ಮತ್ತು ಶ್ರೀ ಶಂಕರಾಚಾರ್ಯ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ …
Read More »