ಗೋಕಾಕ : ತಾಲ್ಲೂಕಿನ ತಳಕಟ್ಟನಾಳ ಗ್ರಾಮದಲ್ಲಿ ಕನಕದಾಸರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಚಾಲನೆ ನೀಡಿದರು. ದಾಸ ಶ್ರೇಷ್ಠ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಗ್ರಾಮದ ಮುಖಂಡರು, ಮಕ್ಕಳು ಭಾಗವಹಿಸಿದ್ದರು. ಬಳಿಕ ರಾಹುಲ್ ಜಾರಕಿಹೊಳಿ ಮಾತನಾಡಿ, ಕನಕದಾಸರ ತ್ರಿಪದಿಗಳು, ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡುವ ದಿನವಿದು ತಿಳಿಸಿದರು. …
Read More »Monthly Archives: ನವೆಂಬರ್ 2021
ನಾಳೆ ಬೆಳಗಾವಿಯಲ್ಲಿ ಸಾಹುಕಾರ್ ಬೆಂಬಲಿಗರಿಂದ ಶಕ್ತಿ ಪ್ರದರ್ಶನ!
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಎರತೊಡಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಶಕ್ತಿಪ್ರದರ್ಶನ ತೋರಿಸಲು ಸಿದ್ಧತೆ ನಡೆಸಿದ್ದಾರೆ. ಮಂಗಳವಾರ 23ರಂದು ಅಪಾರ ಸಂಖ್ಯೆಯಲ್ಲಿ ಗೋಕಾಕದ ಕಿಂಗ್ ಮೇಕರ್ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಗೋಕಾಕ, ಅರಭಾಂವಿ, ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ, ಚಿಕ್ಕೋಡಿ, ಖಾನಾಪುರ, ಯಮಕನಮರಡಿ, ಬೈಲಹೊಂಗಲ, ರಾಮದುರ್ಗ ಕ್ಷೇತ್ರ ಸೇರಿ ಎಲ್ಲ ಕಡೆಗಳಿಂದಲೂ ಸಾಹುಕಾರ ಬೆಂಬಲಿಗರು ನಾಮಪತ್ರ ಸಲ್ಲಿಸಲು …
Read More »ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕನಕದಾಸರ ಜಯಂತಿ ಆಚರಣೆ
ಗೋಕಾಕ : ಕನಕದಾಸ ಜಯಂತಿಯ ಅಂಗವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇಂದು ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ದಾಸ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ 534ನೇ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ ಎನ್ನುವ ಮೂಲಕ ನಾಡಿನ ಜನತೆಗೆ ದಾಸ ಶ್ರೇಷ್ಠರಾದ, ಸಂತ ಕನಕದಾಸರ ಜಯಂತಿಯ ಶುಭಾಶಯ ಕೋರಿದರು. ಕನಕದಾಸರು ಸಮಾಜದ ಮೇಲು, ಕೀಳು, ಜಾತಿ, ಮತ ಸಿದ್ಧಾಂತದ ವಿರುದ್ಧ ಪ್ರತಿಭಟನಾ ನೆಲೆಗಟ್ಟಿನಲ್ಲಿ …
Read More »ವಡಗಾಂವ ನೇಕಾರ ಸಮಾಜದ ಮೂವರು ಆತ್ಮಹತ್ಯೆ: ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಳಗಾವಿ: ಸಾಲದ ಬಾದೆ ತಾಳಲಾದರೆ ಆತ್ಮಹತ್ಯೆಗೆ ಶರಣಾದ ದಕ್ಷಿಣ ಮತಕ್ಷೇತ್ರದ ವಡಗಾಂವ ನೇಕಾರ ಸಮಾಜ ಮೂವರು ಮೃತ ಕುಟುಂಬಸ್ಥರ ಮನೆಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿ, ನೊಂದ ಕುಟುಂಬಕ್ಕೆ ಸ್ವಾಂತನ ಹೇಳಿದರು. ಇತ್ತೀಚೆಗೆ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದ ಬೆಳಗಾವಿ ದಕ್ಷಿಣ ಮತಕೇತ್ರ ವ್ಯಾಪ್ತಿಯ ವಡಗಾಂವ ನೇಕಾರ ಸಮಾಜ ಪಾಂಡು ಉಪರಿ , ಗಣಪತಿ ಬುಚಡಿ ಸಾವನಪ್ಪಿಸಿದ್ದರು . ಈ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ …
Read More »ವಿಧಾನ ಪರಿಷತ್ ಚುನಾವಣೆ ಕದನ; ಎದುರಾಳಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾದ ಸಾಹುಕಾರ್!
ಬೆಳಗಾವಿ: ಜಿಲ್ಲೆಯ ಬೆಕ್ಕೇರಿ ಗ್ರಾಮದ ವಿವೇಕರಾವ್ ಪಾಟೀಲ್ ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದಾರೆ. ಕಾಂಗ್ರೇಸ್ ನಿಂದ ಪರಿಷತ್ ಟಿಕೇಟ್ ವಂಚಿತರಾಗಿರೋ ಒಂದು ಗಂಟೆಗೂ ಹೆಚ್ಚಿನ ಕಾಲ ವಿವೇಕ್ ಜೊತೆ ರಮೇಶ್ ಚರ್ಚೆ ಮಾಡಿದ್ದು, ಬಿಜೆಪಿಗೆ ಬರುವಂತೆ ವಿವೇಕ್ ಬಳಿ ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ 2ಸ್ಥಾನಗಳ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ವಿವೇಕರಾವ್ ಪಾಟೀಲ್ ರನ್ನ ಬಿಜೆಪಿಗೆ ಸೆಳೆಯುವಲ್ಲಿ ರಮೇಶ್ ಜಾರಕಿಹೋಳಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಡಿಸೆಂಬರ್ …
Read More »ವಿಧ್ಯೆಯಿಂದ ಮನುಷ್ಯನ ಭವಿಷ್ಯ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಮೈಸೂರು: ” ನೂತನ ಶಿಕ್ಷಣ ನೀತಿ ಜಾರಿಗೊಂಡರೆ ಹಿಂದುಳಿದವರು ವಾಪಸ್ ಕಾಡಿಗೆ ಹೋಗುವ ಅನಿರ್ವಾತೆ ಎದುರಾಗಿ, ಸಾವಿರಾರು ವರ್ಷಗಳಷ್ಟು ನಾವು..ನೀವು .. ಹಿಂದಕ್ಕೆ ಸರಿಯಬೇಕಾದ ಸ್ಥಿತಿ ನಿರ್ಮಾಣವಾಗುವಲ್ಲಿ ಯಾವ ಸಂದೇಹವಿಲ್ಲ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಎಚ್ಚರಿಕೆ ನೀಡಿದರು. ನಗರದ ಮಾನವ ಬಂಧುತ್ವ ವೇದಿಕೆ ವತಿಯಿಂದ ಇಂದು ಎಂಜಿನಿಯರುಗಳ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ‘ ಹೊಸ ಶಿಕ್ಷಣ ನೀತಿ ಮತ್ತು ಪಠ್ಯ ತಿರುಚುವಿಕೆಯ ರಾಜಕಾರಣ’ ವಿಚಾರ ಸಂಕಿರಣದಲ್ಲಿ ಅವರು …
Read More »ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಒಟ್ಟು 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯು ಶುಕ್ರವಾರ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ನವರಾತ್ರಿಯ ಹಬ್ಬದ ಶುಭ ಸಂದರ್ಭಕ್ಕೆ ಪಡೆಯಿರಿ ಅನೇಕ ಕೊಡುಗೆ! ಅಮೆಜಾನ್‌ನಲ್ಲಿ ಶೇ.70 ರಷ್ಟು ರಿಯಾಯಿತಿ! 25 ಸ್ಥಾನಗಳಿಗೆ …
Read More »3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ
ಹೊಸದಿಲ್ಲಿ, ನ.19: ದೇಶಾದ್ಯಂತ ರೈತರ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಇಂದು ಬೆಳಗ್ಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ಈ ಮೂರೂ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿರುವುದಾಗಿ ಘೋಷಿಸಿದ ಪ್ರಧಾನಿ, ರೈತರು ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ. ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುಮಾರು ಒಂದು ವರ್ಷದಿಂದ …
Read More »ಅಧಿಕಾರಕ್ಕೇ ಬಂದು 24 ಗಂಟೆಯಲ್ಲೇ ಮೀಸಲಾತಿ ನೀಡುತ್ತೇವೆಂದವರು ಇನ್ನೂ ಮೀಸಲಾತಿ ನೀಡಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಯಲಬುರ್ಗಾ: ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಎಸ್ಟಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಕೆಲವರು ಚುನಾವಣಾಪೂರ್ವದಲ್ಲಿಯೇ ಹೇಳಿದ್ದರು. ಆದರೆ, ಅಧಿಕಾರಕ್ಕೇರಿ 24 ತಿಂಗಳು ಕಳೆದರು ಕೂಡ ಇನ್ನೂ ಮೀಸಲಾತಿ ನೀಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ಸಮೀಪದ ವಜ್ಜರಬಂಡಿ ಗ್ರಾಮದಲ್ಲಿ ವಾಲ್ಮೀಕಿ-ನಾಯಕ ಮಹಾಸಭಾದ ವತಿಯಿಂದ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ …
Read More »