ಬೆಂಗಳೂರು: ಕರ್ನಾಟಕ ವಾಲ್ಮೀಕಿ ಯುವ ವೇದಿಕೆಗೆ ನೇಮಿಸಲಾದ ರಾಜ್ಯಮಟ್ಟದ ನೂತನ ಪದಾಧಿಕಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಇಂದು ಆದೇಶ ಪತ್ರಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ನೂತನ ಪದಾಧಿಕಾರಿಗಳು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಬೇಕು. ಸಂಘಟನೆಯ ಮೂಲಕ ಎಲ್ಲ ವರ್ಗದ ಜನರ ನೆರವಿಗೂ ಧಾವಿಸಬೇಕು ಎಂದು ಸಲಹೆ ನೀಡಿದರು. ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ವೇದಿಕೆಯ ಉಪಾಧ್ಯಕ್ಷರಾದ ಮಧು ಮದಕರೆ, ಕಾರ್ಯದರ್ಶಿ …
Read More »Daily Archives: ಆಗಷ್ಟ್ 2, 2021
ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ
ಯಮಕನಮರಡಿ: ಮತಕ್ಷೇತ್ರದ ಚಿಕ್ಕಲದಿನ್ನಿ, ಗುಟಗುದ್ದಿ ಹಾಗೂ ಶಾಬಾಂದರ್ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 80 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಭೂಮಿಪೂಜೆ ನೆರವೇರಿಸಿದರು. ನಂತರ ಇಸ್ಲಾಂಪುರ ಗ್ರಾಮದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರ ಅನುದಾನದಡಿ ನೂತನವಾಗಿ ನಿರ್ಮಿಸಿದ ಮಸೀದಿ ಹಾಗೂ ಶಾಲಾ ಕೊಠಡಿಯನ್ನು ರಾಹುಲ್ ಉದ್ಘಾಟನೆ ಮಾಡಿದರು. ಸಮಾಜದ ಮುಖಂಡರಾದ ಮೌಲಾಸಾಬ ದೇಸಾಯಿ ಸೇರಿ ಇನ್ನಿತರರು ಹಾಜರಿದ್ದರು. ಗ್ರಾಮದಲ್ಲಿ …
Read More »ಡ್ರಗ್ಸ್ ಪ್ರಕರಣ; ಆಫ್ರೀಕನ್ ಪ್ರಜೆಗಳ ಗುಂಡಾ ವರ್ತನೆ: ಲಾಠಿ ಚಾರ್ಜ್.
ಬೆಂಗಳೂರು : ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದಂತ ಆಫ್ರೀಕನ್ ಪ್ರಜೆಯೊಬ್ಬ ಸಾವನ್ನಪ್ಪಿದ್ದನು. ಈ ಪ್ರಕರಣ ಸಂಬಂಧ ಠಾಣೆಯ ಮುಂದೆ ಅನೇಕ ಆಫ್ರೀಕನ್ ಪ್ರಜೆಗಳು ಪೊಲೀಸರ ಹಲ್ಲೆಯಿಂದ ಸಾವನ್ನಪ್ಪಿರೋದಾಗಿ ಪ್ರತಿಫಟನೆ ನಡೆಸುತ್ತಿದ್ದರು. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದಾಗಿ, ಸ್ಥಳದಲ್ಲಿ ಬಿಗುವಿನ ವಾತಾವರಣ ಕೂಡ ಉಂಟಾಗಿತ್ತು. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮೂಲಕ, ಪ್ರತಿಭಟನಾ ನಿರತರನ್ನು ಚದುರಿಸಿದ ಘಟನೆ ನಡೆದಿದೆ. 5 ಗ್ರಾಂ ಎಂಡಿಎಂ …
Read More »ದಡ್ಡಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯಿಂದಾನ ಹಾನಿ ಪರಿಶೀಲಿಸಿದ ಪ್ರಿಯಾಂಕಾ ಜಾರಕಿಹೊಳಿ
ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದ ದಡ್ಡಿ ಜಿಪಂ ವ್ಯಾಪ್ತಿಯ ದಡ್ಡಿ, ಮೋದಗಾ, ಶೆಟ್ಟಿಹಳ್ಳಿ, ಧೋಂಡಗಟ್ಟಿ, ಕೋಟ ಹಾಗೂ ಸಲಾಮವಾಡಿ ಗ್ರಾಮಗಳಿಗೆ ತೆರಳಿ ಮಳೆ ಹಾಗೂ ಪ್ರವಾಹದಿಂದ ಹಾನಿಯನ್ನು ಪರಿಶೀಲಿಸಿದರು. ಈ ಗ್ರಾಮಗಳಲ್ಲಿ ಮಳೆಯಿಂದಾಗಿ ಹಾನಿಗೀಡಾದ ಮನೆಗಳನ್ನು ಪರಿಶೀಲನೆ ಮಾಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಹೊಲ-ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವುದನ್ನು ವೀಕ್ಷಿಸಿ, ರೈತರಿಗೆ ಧೈರ್ಯ ತುಂಬಿದರು. ಹದಗೆಟ್ಟಿರುವ ರಸ್ತೆ ಹಾಗೂ ಸೇತುವೆಗಳನ್ನು ಪರಿಶೀಲನೆ …
Read More »ಸಚಿವ ಸಂಪುಟ ರಚನೆ ಕಸರತ್ತು; ಹೊರಬಿತ್ತು ಸಂಭಾವ್ಯ ಪಟ್ಟಿ
ಬೆಂಗಳೂರು : ಸಚಿವ ಸಂಪುಟ ರಚನೆಗೆ ಸಂಬಂಧಿಸಿ ಪಕ್ಷದ ವರಿಷ್ಠರ ಭೇಟಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ತೆರಳಿರುವ ಬೆನ್ನಲ್ಲೆ ಸಚಿವರ ಸಂಭಾವ್ಯ ಪಟ್ಟಿಯೊಂದು ಹರಿದಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು -ಗೃಹ ಖಾತೆಯನ್ನು ತನ್ನಲ್ಲೆ ಉಳಿಸಿಕೊಳ್ಳಲಿದ್ದರೆ ಎನ್ನಲಾಗುತ್ತಿದ್ದು, ಉಪ ಮುಖ್ಯಮಂತ್ರಿಗಳಾಗಿ ಆರ್.ಅಶೋಕ್, ಬಿ.ಶ್ರೀರಾಮುಲು ಸ್ಥಾನ ಪಡೆಯಲಿದ್ದಾರೆ. ಗೋವಿಂದ ಕಾರಜೋಳ ಡಿಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅದೇರೀತಿ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ ಸಚಿವ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ರೇಣುಕಾಚಾರ್ಯ, ಎಸ್.ರಾಮದಾಸ್ …
Read More »3ನೇ ಅಲೆ ಆತಂಕ; ಬೆಳಗಾವಿ ಗಡಿಯಲ್ಲಿ ಕಟ್ಟು ನಿಟ್ಟಿನ ತಪಾಸಣೆ.
ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಮತ್ತು ಡೆಲ್ಟಾ ಪ್ಲಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಅಲ್ಲಿಂದ ಬರುವವರಿಂದ ಕೋವಿಡ್ ನೆಗೆಟಿವ್ ಪ್ರಮಾಣಪತ್ರ (ಆರ್‌ಟಿಪಿಸಿಆರ್) ಕೇಳಲಾಗುತ್ತಿದೆ. ಅದು ಇಲ್ಲದಿದ್ದರೆ ಕೋವಿಡ್ ಡೋಸ್ ಪಡೆದಿರುವ ಬಗ್ಗೆ ಪ್ರಮಾಣಪತ್ರ ಪ್ರಸ್ತುತಪಡಿಸಬೇಕು. ಇವೆರಡೂ ಇಲ್ಲದಿದ್ದರೆ ಪ್ರವೇಶ ನೀಡುತ್ತಿಲ್ಲ. ಅಲ್ಲಿಂದಲೇ ವಾಪಸ್ ಕಳುಹಿಸಲಾಗುತ್ತಿದೆ. ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಗಡಿಯ ವಿವಿಧೆಡೆ 22 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಪುಣೆ-ಬೆಂಗಳೂರು ಹೆದ್ದಾರಿಯಲ್ಲಿರುವ ಕೊಗನೊಳ್ಳಿ ಟೋಲ್‌ನಾಕಾ ಬಳಿಯ ಚೆಕ್‌ಪೋಸ್ಟ್‌ನಲ್ಲಿ …
Read More »