ಕಲಬುರ್ಗಿ: ಇಲ್ಲಿನ ಅನ್ನಪೂರ್ಣೇಶ್ವರಿ, ಭಾಗ್ಯ ನಗರ ಕಾಲೊನಿಗಳಲ್ಲಿ ಮನೆ ಕಳವು ಮಾಡಿದ್ದ ಮಹಾರಾಷ್ಟ್ರದ ಯುವಕನನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪರಬಾನಿ ಜಿಲ್ಲೆಯ ತುರುತ್ತರಿ ಖಯ್ಯುಮ ಅಲಿಯಾಸ್ ನಯ್ಯುಮ್ ಬೇಗ್ ಬಂಧಿತ ಆರೋಪಿ. ಆತನಿಂದ ₹ 3.10 ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ನೃಪತುಂಗ ಕಾಲೊನಿಯಲ್ಲಿ ಸಂಶಯಾಸ್ಪದವಾಗಿ ಕೈಯಲ್ಲಿ ರಾಡು ಹಿಡಿದು ತಿರುಗಾಡುತ್ತಿದ್ದಾಗ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ. …
Read More »Monthly Archives: ಜುಲೈ 2021
ಪೋಷಕರೆ ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಎಚ್ಚರ! ಈ ಘಟನೆ ನೋಡಿ.
ಹಾವೇರಿ: ಪೋಷಕರೆ ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಎಚ್ಚರ ವಹಿಸಿ. ಯಾವಾಗಲೂ ಮೊಬೈಲ್ ನಲ್ಲಿ ಗೇಮ್ ಆಡುವ ಹುಚ್ಚಿಗೆ ಬಿದ್ದ ಬಾಲಕನೊಬ್ಬ ಮೂರು ಬೆರಳನ್ನೇ ಕಳೆದುಕೊಂಡಿದ್ದಾನೆ. ಮೊಬೈಲ್ ಬ್ಲಾಸ್ಟ್ ಆಗಿದ್ದರಿಂದ ಬಾಲಕನ ಬಲಗೈಯಲ್ಲಿನ ಮೂರು ಬೆರಳುಗಳೇ ಕಟ್ ಆಗಿವೆ. ಬ್ಲಾಸ್ಟ್ ಆಗಿದ್ದ ಹೊಡೆತಕ್ಕೆ ಬಾಲಕನ ಮೈಮೇಲೆ ಗಾಯಗಳಾಗಿದ್ದು, ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಮನೆಯಲ್ಲಿ ಚಾರ್ಜ್ ಹಾಕಿದ್ದ ಮೊಬೈಲ್ ನಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕಾರ್ತಿಕ …
Read More »ನೀವು ಗಂಡಸೇ ಆಗಿದ್ದರೇ ಆಡಿಯೋ ಬಿಡುಗಡೆ ಮಾಡಿ ಲಂಕೇಶಗೆ ನಟ ದರ್ಶನ್ ಸವಾಲ್
ಮೈಸೂರು : ಇಲ್ಲಿಂದಲೇ ಆರಂಭವಾದಂತ ಪ್ರಕರಣ, ಇದೀಗ ದೊಡ್ಮನೆವರೆಗೆ ಬಂದಿದೆ. ನನ್ನ ಬಗ್ಗೆ ಅನ್ ಎಜುಕೇಟೆಡ್ ಅಂತ ಹೇಳ್ತಾರೆ. ಸಂದೇಶ್ ಹಾಗೂ ಇಂದ್ರಜಿತ್ ಲಂಕೇಶ್ ಮಾಡಿರೋ ಆಡಿಯೋ ನನ್ನದಲ್ಲ ಅಂತ ಸಂದೇಶ್ ಹೇಳಿದ್ದಾರೆ. ಆದ್ರೇ ನಾನು ಬಹಿರಂಗವಾಗೇ ಸವಾಲ್ ಹಾಕುವೆ. ನನ್ನದೂ ಒಂದು ಆಡಿಯೋ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಳಿ ಇದೆ. ನೀವು ಗಂಡಸೇ ಆಗಿದ್ದರೇ, ನಿಮ್ಮ ಅಪ್ಪನಿಗೇ ಹುಟ್ಟಿದ್ದರೇ ನನ್ನದು ಒಂದು ಆಡಿಯೋ ಇದೆ. ಅದನ್ನು ಇಂದು …
Read More »ವಾಯುಭಾರ ಕುಸಿತ, ಇಂದು ನಾಳೆ ಕರ್ನಾಟಕದಲ್ಲಿ ಹಲವೆಡೆ ಬಾರಿ ಮಳೆ. ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ನೋಡಿ?
ಬೆಂಗಳೂರು: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಇಂದು (ಜುಲೈ 17) ಮತ್ತು ನಾಳೆ (ಜುಲೈ 18) ಸಹ ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ (Monsoon 2021). ಕಾವೇರಿ ನದಿಯ ಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ನದಿ ತೀರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಭಾರೀ ಮಳೆಯ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವು …
Read More »ಪ್ರಾದೇಶಿಕ ಆಯುಕ್ತರ ಕಚೇರಿ ರದ್ದುಗೊಳಿಸದಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ.
ಬೆಳಗಾವಿ: ಪ್ರಾದೇಶಿಕ ಆಯುಕ್ತರ ಕಚೇರಿ ಗಳನ್ನು ರದ್ದುಗೊಳಿಸದಂತೆ ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕನ್ನಡ ಹೋರಾಟಗಾರರು ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ‘ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಆಡಳಿತ ಸುಧಾರಣೆ ಸಮಿತಿಯು, ರಾಜ್ಯದ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸಿ ರಾಜ್ಯ ಮಟ್ಟದಲ್ಲಿ ಕಂದಾಯ ಸಚಿವಾಲಯ ರಚಿಸಬೇಕೆಂಬ ಶಿಫಾರಸು ಸಂವಿಧಾನದ ಮೂಲ ತತ್ವವಾದ ಅಧಿಕಾರ ವಿಕೇಂದ್ರೀಕರಣದ ವಿರೋಧಿಯಾಗಿದೆ. ಇಂತಹ …
Read More »ನೂತನ ಆಂಬ್ಯುಲೆನ್ಸ್ ಗಳಿಗೆ ಚಾಲನೆ ನೀಡಿದ ಶಾಸಕ ಸತೀಶ್ ಜಾರಕಿಹೊಳಿ
ಗೋಕಾಕ : ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಶನಿವಾರ ಜನ ಸೇವೆಗೆ ಸಿದ್ಧವಾಗಿರುವ ಹೊಸ ಆಂಬ್ಯುಲೆನ್ಸ್ ವಾಹನಗಳಿಗೆ ಚಾಲನೆ ನೀಡಿದರು. 2020-2021 ನೇ ಸಾಲಿನ ಪರಿಶಿಷ್ಟ ಪಂಗಡದ (ಎಸ್.ಟಿ.ಪಿ) ಅಡಿಯ ಅನುವಾನದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಇಸ್ಲಾಂಪೂರ, ಬಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ವೈದ್ಯಾಧಿಕಾರಿ ಡಾ.ಉದಯ ಕುಡಚಿ, ಜಿ.ಪಂಚಾಯ್ತಿ ಸದಸ್ಯ ಮಂಜುನಾಥ್ ಪಾಟೀಲ್, ಸೊಮನಗೌಡಾ ಪಾಟೀಲ್, ಪಜಲ್ ಮಕಾಂದರ, …
Read More »ಅಭಿವೃದ್ಧಿ ಕಾಮಗಾರಿಗಳು ಕಳಪೆ ಎಂದು ಕಂಡುಬಂದಲ್ಲಿ ಸಾರ್ವಜನಿಕರು ತಡೆ ನೀಡಬೇಕು.
ಮುಗಳಖೋಡ : ‘ಪಟ್ಟಣದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ಕಳಪೆ ಎಂದು ಕಂಡುಬಂದಲ್ಲಿ ಸಾರ್ವಜನಿಕರು ತಡೆ ನೀಡಬೇಕು. ಎಲ್ಲ ಕೆಲಸಗಳಿಗೂ ಅಡ್ಡಿಪಡಿಸಬಾರದು’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ ಸಲಹೆ ನೀಡಿದರು. ‘ಪುರಸಭೆ ವತಿಯಿಂದ ಕೈಗೊಂಡಿರುವ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಂಡಿಲ್ಲ. ಗುಣಮಟ್ಟವೂ ಸರಿ ಇಲ್ಲ’ ಎಂಬ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು. ‘ಜನರ ಸಮಸ್ಯೆಗಳನ್ನು …
Read More »ಕಲೆಯನ್ನು ಉಳಿಸಿ ಬೆಳೆಸುವುದು ಪ್ರತಿಯೋಬ್ಬರ ಕರ್ತವ್ಯ: ಸತೀಶ್ ಜಾರಕಿಹೊಳಿ.
ಗೋಕಾಕ: ಕಲೆಯನ್ನು ಉಳಿಸಿ ಬೆಳೆಸುವುದು ಪ್ರತಿಯೋಬ್ಬರ ಕರ್ತವ್ಯವಾಗಿದೆ ಎಂದು ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು ಶನಿವಾರದಂದು ನಗರದ ಜ್ಞಾನ ಮಂದಿರದಲ್ಲಿ ಇಲ್ಲಿನ ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ಗೋಕಾವಿ ನಾಡಿನ ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾಗಿದ್ದ ದಿವಂಗತ ಬಿ.ಆರ್.ಅರಶಿನಗೋಡಿ ಹಾಗೂ ದಿವಂಗತ ಬಸವಣ್ಣೆಪ್ಪಾ ಹೋಸಮನಿ ಇವರ ರಂಗ ಸ್ಮರಣೋತ್ಸವ ನಿಮಿತ್ತ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು . …
Read More »ರಾಜೀನಾಮೆ ಬಗ್ಗೆ ಸಿಎಂ ಬಿ ಎಸ್ ಯಡಿಯೂರಪ್ಪ ಮಹತ್ವದ ಹೇಳಿಕೆ.
ನವ ದೆಹಲಿ, ಜು. 17: ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. “2023ರಲ್ಲಿ ನಡೆಯುವ ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ” ಎಂದು ನಡ್ಡಾ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಮಾಹಿತಿ ಕೊಟ್ಟಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ …
Read More »ನೆರೆ ಸಂತ್ರಸ್ತರನ್ನು ಏಕಾಏಕಿಯಾಗಿ ವಸತಿ ಗೃಹದಿಂದ ಹೊರ ಹಾಕಿದ ತಹಶೀಲ್ದಾರ.
ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ತಹಶೀಲ್ದಾರ್ ನೆರೆ ಸಂತ್ರಸ್ತರನ್ನು ಏಕಾಏಕಿಯಾಗಿ ವಸತಿ ಗೃಹದಿಂದ ಕಳುಹಿಸಿದ್ದಾರೆ. ರಾಮದುರ್ಗ ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿದ್ದು, ಜನರ ಬದುಕು ಬೀದಿಗೆ ಬಂದಂತಾಗಿದೆ. 2019ರಲ್ಲಿ ನೆರೆಯಿಂದ ರಾಮದುರ್ಗ ತಾಲೂಕಿನ ಹಿರೇಹಂಪಿಹೋಳಿ ಗ್ರಾಮ ಮುಳುಗಡೆಯಾಗಿತ್ತು. ಅಲ್ಲಿದ್ದ ಗ್ರಾಮಸ್ಥರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಆಗ ಸುರೇಬಾನ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ್ದ ವಸತಿ ಗೃಹದಲ್ಲಿ ನೆರೆ ಸಂತ್ರಸ್ತರಿಗೆ ಜಿಲ್ಲಾಡಳಿತ ತಾತ್ಕಾಲಿಕ ವ್ಯವಸ್ಥೆ ಮಾಡಿತ್ತು. ತಗಡಿನ ಶೆಡ್ ನಿರ್ಮಿಸಿ ಕೊಡುವವರೆಗೆ …
Read More »