Breaking News

Monthly Archives: ಜುಲೈ 2021

ಪ್ರವಾಹ ಭೀತಿ; ನದಿ ಪಾತ್ರದ ಜನರ ಸಮಸ್ಯೆ ಕೇಳಲು ಬಂದ ಯುವ ನಾಯಕ ರಾಹುಲ್ ಜಾರಕಿಹೊಳಿ.

ಮಾರ್ಕಂಡೇಯ ನದಿ ನೀರಿನ ಹರಿವು ವೀಕ್ಷಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ ಹುಕ್ಕೇರಿ: ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ತಾಲೂಕಿನ ಪಾಶ್ಚಾಪುರ ಪಟ್ಟಣದ ಪಕ್ಕದಲ್ಲಿ ಹರಿಯುವ ಮಾರ್ಕಂಡೇಯ ನದಿಯ ನೀರಿನ ಹರಿವನ್ನು ವೀಕ್ಷಿಸಿದರು. ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯ ನಡುವೆ, ತಾವೇ ಛತ್ರಿ ಹಿಡಿದುಕೊಂಡು ಬಂದ ರಾಹುಲ್ ಅವರು, ನದಿಯ ನೀರಿನ ಮಟ್ಟವನ್ನು ಪರಿಶೀಲನೆ ಮಾಡಿದರು. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಹೊಲ-ಗದ್ದೆಗಳಿಗೆ ತೆರಳುವ …

Read More »

ಮಳೆ ನೀರಿನ ರಭಸಕ್ಕೆ ತೇಲುತ್ತಿರುವ ಕಾರು!

ಬೆಳಗಾವಿ: ರಾಜ್ಯಾದ್ಯಂತ ಕಳೆದ ಎರಡು ದಿನದಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.ಇದರ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಜನರ ಪಾಡು ಹೇಳತೀರದ್ದಾಗಿದೆ. ಕಳೆದ ಎರಡು ದಿನದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ, ಬೆಳಗಾವಿಯ ಕಂಗ್ರಾಳ ಗ್ರಾಮ, ನಂದಗಡದಲ್ಲಿ ಮನೆ ಕುಸಿತಗೊಂಡಿದೆ. ಗ್ರಾಮದಲ್ಲಿ ತಲಾ ಒಂದೊಂದು ಮನೆ ಕುಸಿದಿದೆ. ಖಡೇ ಬಜಾರ್ ನಲ್ಲೂ ಮನೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇನ್ನು ಈಗಾಗಲೇ ಶಿಥಿಲಗೊಂಡಿರವ ಕಟ್ಟಡಗಳು ಸುರಿಯುತ್ತಿರೋ …

Read More »

ಬಿಎಸ್ ವೈ ರಾಜೀನಾಮೆ ಕೊಟ್ರೇ ಮುಂದಿನ ಸಿಎಂ ಯಾರೂ?

ಕರ್ನಾಟಕದಲ್ಲಿ ಇಂದು ರಾಜಕೀಯವಾಗಿ ಸಂಚಲನ ಸೃಷ್ಟಿಯಾಗಿದೆ. ಸಿಎಂ ಯಡಿಯೂರಪ್ಪ ಜುಲೈ 25 ರಂದು ಹೈಕಮಾಂಡನಿಂದ ಸಂದೇಶ ಬರುತ್ತೆ. ಸಂದೇಶದಂತೆ ಜುಲೈ 26 ರಂದು ನಾನು ನಡೆದುಕೊಳ್ಳುವೆ ಎಂದು ಹೇಳುವ ಮೂಲಕ ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಮಹತ್ವದ ಸುಳಿವು ನೀಡಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆಗೆ ಸಿದ್ದವಾಗಿರುವುದು ಸ್ಪಷ್ಟವಾಗಿದೆ. ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆಗೆ ಕಾರಣವೇನು? ಬಿಜೆಪಿ ಹೈಕಮಾಂಡ್ ಆರು ತಿಂಗಳ ಹಿಂದೆ ಉತ್ತರಾಖಂಡ ಸಿಎಂ …

Read More »

ಬೆಳಗಾವಿ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ,ಜನಜೀವನ ಅಸ್ತವ್ಯಸ್ತ.

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರವೂ ಜಿಟಿಜಿಟಿ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಚಿಕ್ಕೋಡಿ ತಾಲ್ಲೂಕಿನ ನದಿ ಜಲಾನಯನ ಪ್ರದೇಶಗಳಲ್ಲಿ 24 ಗಂಟೆಗಳಲ್ಲಿ ಮಳೆಯ ಆರ್ಭಟ ಹೆಚ್ಚಿದೆ. ಕೃಷ್ಣಾ ಮತ್ತು ಉಪನದಿಗಳ ಹರಿವಿನಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದೆ. ರಾಜಾ‍ಪುರ ಬ್ಯಾರೇಜ್‌ನಿಂದ 58ಸಾವಿರ ಕ್ಯುಸೆಕ್ ಮತ್ತು ದೂಧ್‌ಗಂಗಾ ನದಿಯಿಂದ 19,768 ಕ್ಯುಸೆಕ್ ಸೇರಿ 77,768 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ …

Read More »

ರಾಜೀನಾಮೆ ಬಗ್ಗೆ ಬಹಿರಂಗ ಸುಳಿವು ಕೊಟ್ರಾ ಸಿಎಂ ಬಿ.ಎಸ್. ಯಡಿಯೂರಪ್ಪ.

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಹುತೇಕ ಪಕ್ಕಾ ಆಗಿದ್ದು, ಇದೇ ಮೊದಲ ಬಾರಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಬಗ್ಗೆ ಬಹಿರಂಗ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ಕೊಟ್ಟಿಲ್ಲ. ಆದ್ರೆ ನನ್ನ ಕೆಲಸವನ್ನು ಮೆಚ್ಚಿ ಅಧಿಕಾರ ಕೊಟ್ಟಿದ್ದಾರೆ. ರಾಷ್ಟ್ರೀಯ ನಾಯಕರು ಕೊಡುವ ಸೂಚನೆಯಂತೆ ನಾನು ಕೆಲಸಗಳನ್ನು ಮಾಡುತ್ತೇನೆ. ಜುಲೈ 25ರಂದು ವರಿಷ್ಠರು ಸ್ಪಷ್ಟ ಸಂದೇಶ ನೀಡುತ್ತಾರೆ. ಅವರು ನೀಡುವ ಸೂಚನೆಗೆ …

Read More »

ಕೃಷ್ಣಾ ತೀರದಲ್ಲಿ ವರುಣನ ಆರ್ಭಟ ,8 ಸೇತುವೆ ಮುಳುಗಡೆ

ಬೆಳಗಾವಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕೃಷ್ಣಾ, ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಏರಿಕೆ ಕಂಡಿದೆ. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ 8 ಸೇತುವೆಗಳು ಜಲಾವೃತಗೊಂಡಿದ್ದು, ನದಿ ತೀರದಲ್ಲಿ ಹೈಅಲರ್ಟ್​ ಘೋಷಿಸಲಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು-ಕಲ್ಲೋಳ ಸೇತುವೆ ಮುಳಗಡೆಯಾಗಿದೆ. ಕೃಷ್ಣಾ ನದಿಗೆ 70 ಸಾವಿರ ಕ್ಯೂಸೆಕ್​​ಗೂ ಹೆಚ್ಚಿನ ಪ್ರಮಾಣದ ಒಳ ಹರಿವು ಬಂದಿದೆ. ದೂದಗಂಗಾ, ವೇದಗಂಗಾ ಹಾಗೂ …

Read More »

ನಾಯಕತ್ವ ಬದಲಾವಣೆ ವಿಚಾರ;ಸಿಎಂ ಮೌನ ಮುರಿದು ಟ್ವೀಟ ಮಾಡಿದ್ದೇನು?

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿ ಎದ್ದಿದ್ದು, ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯಲಿದ್ದಾರೆ, ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುವ ವಿಚಾರ ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೇ ಬಿಎಸ್ವೈ ಪರ ಮಠಾಧೀಶರು, ರಾಜಕೀಯ ನಾಯಕರು ಹೇಳಿಕೆ ನೀಡುತ್ತಿದ್ದು, ಪ್ರತಿಭಟನೆಗೆ ಕೂಡ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಕೊನೆಗೂ ‘ಸಿಎಂ ಮೌನ ಮುರಿದಿದ್ದು, ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ, ಈ ವಿಚಾರದಲ್ಲಿ ಯಾರೂ ಕೂಡ ಅಭಿಮಾನ ಶಿಸ್ತಿನ ವ್ಯಾಪ್ತಿ …

Read More »

ಪ್ರವಾಹ ಎದುರಿಸಲು ಮುನ್ನೆಚ್ಚರ ಕ್ರಮ ವಹಿಸಿ : ಬಿ ಎಸ್ ಯಡಿಯೂರಪ್ಪ.

ಬೆಂಗಳೂರು : ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮಳೆಯಿಂದ ಆಗುತ್ತಿರುವ ಹಾನಿ ಹಾಗೂ ಕೈಗೊಳ್ಳಲಾಗಿರುವ ಪರಿಹಾರ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವೀಡಿಯೊ ಸಂವಾದ ನಡೆಸಿದರು. ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂಡಿಗೆ ಮಳೆಯಿಂದ ಆಗುತ್ತಿರುವ ಹಾನಿ ಹಾಗೂ ಕೈಗೊಳ್ಳಲಾಗಿರುವ ಪರಿಹಾರ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವೀಡಿಯೊ ಸಂವಾದ ನಡೆಸಿದರು. ಸಭೆಯ ಮುಖ್ಯಾಂಶಗಳು: 1. ಕೊಡಗು, …

Read More »

KSRTC ಟ್ರಾಫಿಕ್ ಕಂಟ್ರೋಲರ್​ನ ಎಸಿಬಿ ಬಲೆಗೆ.

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಡಿಪೋದ ಕೆಎಸ್‌ಆರ್​ಟಿಸಿ ಟ್ರಾಫಿಕ್ ಕಂಟ್ರೋಲರ್​ನ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಟ್ರಾಫಿಕ್ ಕಂಟ್ರೋಲರ್ ಬಿ.ಎಸ್.ವೆಂಕಟಾಚಲಪತಿ ಸ್ವಯಂ ನಿವೃತ್ತಿ ಪ್ರಮಾಣ ಪತ್ರ ನೀಡಲು ಸುಮಾರು 50.000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಡ್ರೈವರ್ ಕಂ ಕಂಡಕ್ಟರ್ ಜಿ.ಎನ್.ವೆಂಕಟಾಚಲಪತಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 50.000 ರೂ. ನಲ್ಲಿ ಇಂದು (ಜುಲೈ 21) 40,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಿ.ಎಸ್.ವೆಂಕಟಾಚಲಪತಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೋಲಾರದ ಎಸಿಬಿ ಅಧಿಕಾರಿಗಳು ಬಿ.ಎಸ್.ವೆಂಕಟಾಚಲಪತಿಯನ್ನು …

Read More »

ಗೋವುಗಳನ್ನು ರಕ್ಷಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು.

ಘಟಪ್ರಭಾ : ಹಬ್ಬಕಾಗಿ ಬಲಿ ಕೊಡಲು ತಂದಿದ್ದ ಹಸುಗಳನ್ನು ಸಾರ್ವಜನಿಕರ ಸಹಕಾರದಿಂದ ಮೂರು ಗೋವುಗಳನ್ನು ರಕ್ಷಿಸಿದ ಘಟನೆ ಬುಧವಾರ ಮುಂಜಾನೆ ಗೋಕಾಕ ತಾಲೂಕಿನ ಶಿಂಗಳಾಪೂರ ಗ್ರಾಮದಲ್ಲಿ ನಡೆದಿದೆ. ಹಬ್ಬಕ್ಕಾಗಿ ಬಲಿ ಕೊಡಲು ಸುಮಾರು ಏಳೆಂಟು ಹಸುಗಳನ್ನು ಅಕ್ರಮವಾಗಿ ತಂದಿಟ್ಟಿರುವ ಖಚಿತ ಮಾಹಿತಿ ಪಡೆದ ಘಟಪ್ರಭಾ ಪೊಲೀಸರು, ಗೋಕಾಕದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಮೂರು ಹಸುಗಳನ್ನು ರಕ್ಷಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುವ …

Read More »