Breaking News

Daily Archives: ಡಿಸೆಂಬರ್ 1, 2020

ಕಬಡ್ಡಿ ಕ್ರೀಡೆಯನ್ನ ಉಳಿಸುವ ಜವಾಬ್ದಾರಿ ಗ್ರಾಮೀಣ ಪ್ರದೇಶದ ಯುವಕರ ಮೇಲಿದೆ : ಯುವ ನಾಯಕ ರಾಹುಲ್ ಜಾರಕಿಹೊಳಿ

ಸವದತ್ತಿ: ‘ ನಶಿಸಿ ಹೋಗುತ್ತಿರುವ ಕಬಡ್ಡಿ ಕ್ರೀಡೆಯನ್ನ ಮತ್ತೆ ಜನಪ್ರಿಯಗೊಳಿಸುವ ಜವಾಬ್ದಾರಿ ಗ್ರಾಮೀಣ ಪ್ರದೇಶ ಯುವಕರ ಮೇಲಿದೆ’ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಸಿಂದೋಗಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ, ಮಾತನಾಡಿದರು. ‘ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಬೇಕು. ಇದರಿಂದ ನಶಿಸಿ ಹೊಗುತ್ತಿರುವ ಕಬಡ್ಡಿ ಪುನಃ ಜನಪ್ರಿಯತೆ ಪಡೆಯಲಿದೆ. ಈ ಜವಾಬ್ದಾರಿ ಗ್ರಾಮೀಣ ಪ್ರದೇಶದ ಯುವಕರ …

Read More »

ರೈತರಿಂದ 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ತೀರ್ಮಾನ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಬೆಂಗಳೂರಿನಲ್ಲಿ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ರೈತರ ಅನುಕೂಲಕ್ಕಾಗಿ ಈ ತೀರ್ಮಾನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆದೇಶದ ಮೇರೆಗೆ ಪ್ರತಿ ಟನ್ ಮೆಕ್ಕೆಜೋಳ ಖರೀದಿಗೆ 15,000 ರೂ.ಗಳು ನಿಗದಿ ಬೆಂಗಳೂರು : ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಗೆ ಮುಂದಾಗಿರುವ ಕೆಎಂಎಫ್, ಪ್ರತಿ ಟನ್‍ಗೆ 15 ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ಇಲ್ಲಿನ ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ಜರುಗಿದ ಆಡಳಿತ …

Read More »

ನೆಲಸಮಗೊಳಿಸಿರುವ ಬಡವರ ಮನೆಗಳನ್ನು ಶೀಘ್ರದಲ್ಲಿ ಮರು ನಿರ್ಮಾಣ ಮಾಡಬೇಕು : ಅಶೋಕ ಪೂಜಾರಿ

ಗೋಕಾಕ : ತಾಲ್ಲೂಕಿನ ಧುಪದಾಳ ಗ್ರಾಮದಲ್ಲಿ ನೆಲಸಮ ಮಾಡಿದ ಬಡವರ ಮನೆಗಳನ್ನು ಸರ್ಕಾರದಿಂದ ಶೀಘ್ರದಲ್ಲಿ ಮರು ನಿರ್ಮಾಣ ಮಾಡಬೇಕು ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧುಪದಾಳ( ನವಿಲಮಾಳ) ಸಮೀಪದಲ್ಲಿರುವ ಸರ್ವೆ ನಂ.173/1ರಲ್ಲಿ 140 ಎಕರೆ ಜಮೀನು ಪಾಳು ಬಿದ್ದಿದೆ. ಈ ಜಾಗದಲ್ಲಿ ವಸತಿ ರಹಿತ ಬಡವರು, ಕೂಲಿ ಕಾರ್ಮಿಕರು , ಗೋಕಾಕ್ ಮಿಲ್ ಕಾರ್ಮಿಕರು ಸುಮಾರು 8 ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದಾರೆ. ಇಲ್ಲಿ …

Read More »

ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಸಚಿವ ರಮೇಶ್ ಜಾರಕಿಹೊಳಿ.

ಗೋಕಾಕ : ವಿಕಲಚೇತನ ಫಲಾನುಭವಿಗಳಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಂಗಳವಾರ ತಮ್ಮ ಕಾರ್ಯಾಲಯದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಜಿ.ಪಂ ಸದಸ್ಯ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಅರೆನ್ನವರ, ಪೌರಾಯುಕ್ತ ಶಿವಾನಂದ ಹಿರೇಮಠ, ಸದಸ್ಯರುಗಳಾದ ಅಬ್ಬಾಸ ದೇಸಾಯಿ, ಪ್ರಕಾಶ ಮುರಾರಿ, ಸಂತೋಷ ಮಂತ್ರಣವರ , ಸಿದ್ದಪ್ಪ ಹುಚ್ಚರಾಯಪ್ಪಗೋಳ, ಶ್ರೀಶೈಲ ಯಕ್ಕುಂಡಿ, ಮುಖಂಡರುಗಳಾದ ಅಬ್ದುಲವಹಾಬ ಜಮಾದಾರ, ದಾದಾಪೀರ ಶಾಬಾಶಖಾನ, ದುರ್ಗಪ್ಪ ಶಾಸ್ತ್ರಿಗೋಲ್ಲರ, ಬಸವರಾಜ ದೇಶನೂರ, …

Read More »