Breaking News

Monthly Archives: ನವೆಂಬರ್ 2020

ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸತೀಶ್ ಜಾರಕಿಹೊಳಿ

ಬೆಳಗಾವಿ : ಕೋವಿಡ್ ಸೋಂಕಿನಿಂದ ಇತ್ತಿಚೇಗೆ ನಿಧನರಾದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದರು. ಅಹ್ಮದ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಮೌನಾಚರಣೆ ಮಾಡಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಮಾಡಿದ ಕಾರ್ಯಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರಾಧ್ಯಕ್ಷ ರಾಜು ಸೇಠ್, ಮುಂಚೂಣಿ ಘಟಕ ಅಧ್ಯಕ್ಷರು, ಕಾಂಗ್ರೆಸ್ …

Read More »

ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯ ದತ್ತಿ ಸಮೀಕ್ಷಾ ಅಧಿಕಾರಿ ಕೆ. ಜಯಪ್ರಕಾಶ್‌ ಭೇಟಿ

ಸವದತ್ತಿ: ಮುಜರಾಯಿ ಇಲಾಖೆಯ ದತ್ತಿ ಸಮೀಕ್ಷಾ ಅಧಿಕಾರಿ ಕೆ. ಜಯಪ್ರಕಾಶ್‌ ಅವರು ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದರು. ದೇವಸ್ಥಾನದ ಜಮೀನು, ಜಮೀನಿನ ದಾಖಲೆಗಳ ನಿರ್ವಹಣೆ, ಸಮಚ್ಚಯಗಳ ಪ್ರಾಂಗಣದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಹಾಗೂ ಭಕ್ತರ ಧಾರ್ಮಿಕ ಕೈಂಕರ್ಯಗಳಿಗೆ ಅನುಕೂಲವಾಗುವಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸೂಚಿಸಿದರು. ದೇವಸ್ಥಾನಕ್ಕೆ ಸೇರಿದ ಒಟ್ಟು ‌1,146 ಎಕರೆ 25 ಗುಂಟೆ ಜಾಗವಿದೆ. ಇದರಲ್ಲಿ ಕಂದಾಯ ಹಾಗೂ ಭೂಮಾಪನಾ ಇಲಾಖೆ ದಾಖಲೆಗಳಲ್ಲಿ …

Read More »

ಉತ್ತರ ಪ್ರದೇಶದಲ್ಲಿ ಮುಷ್ಕರ ಮಾಡುವಂತಿಲ್ಲ.

ಲಖನೌ: ಬಹುತೇಕ ನಿಯಂತ್ರಣಕ್ಕೆ ಬಂದಿದ್ದ ಕರೊನಾ ಸೋಂಕು ದೀಪಾವಳಿ ಹಬ್ಬದ ನಂತರ ಕೊಂಚ ಏರಿಕೆ ಕಾಣಲಾರಂಭಿಸಿದೆ. ಕೆಲವು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿನ ನಿಯಂತ್ರಣಕ್ಕೆಂದು ಉತ್ತರ ಪ್ರದೇಶ ಸರ್ಕಾರ ಕಠಿಣ ನಿಯಮವನ್ನು ಜಾರಿಗೊಳಿಸಿದೆ. ಉತ್ತರ ಪ್ರದೇಶದಲ್ಲಿ ಬುಧವಾರದಿಂದ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ)ಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಅನುಸಾರ ಇನ್ನು ಆರು ತಿಂಗಳ ಕಾಲ ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ನಿಗಮಗಳಲ್ಲಿ ಯಾವುದೇ ರೀತಿಯ ಮುಷ್ಕರ …

Read More »

ಕೊರೋನಾ ಲಸಿಕೆ : ಔಷಧಿ ಸಂಸ್ಥೆಗೆ ಮೋದಿ ಭೇಟಿ ಸಾಧ್ಯತೆ

ಪುಣೆ, ನವೆಂಬರ್ 26: ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಅಂತಿಮಗೊಂಡು ಮಾರುಕಟ್ಟೆಗೆ ಬರುವ ಆಶಯ ವ್ಯಕ್ತವಾಗಿದ್ದು, ಕೋವಿಡ್ 19 ಲಸಿಕೆ ಉತ್ಪಾದನೆ ಮತ್ತು ಹಂಚಿಕೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಜೆನ್ನೋವಾ ಬಯೋಫಾರ್ಮಸಿಟಿಕಲ್ಸ್ ಸಂಸ್ಥೆಗಳಿಗೆ ಶನಿವಾರ ಅಥವಾ ಭಾನುವಾರ ಭೇಟಿ ನೀಡುವ ಸಾಧ್ಯತೆ ಇದೆ. ಈ ಎರಡೂ ಸಂಸ್ಥೆಗಳು ಮಹಾರಾಷ್ಟ್ರದ ಪುಣೆಯಲ್ಲಿದ್ದು, ಲಸಿಕೆ ಉತ್ಪಾದನೆ ಮತ್ತು ಪರೀಕ್ಷೆಯ ವಿವಿಧ …

Read More »

ಸಚಿವ ಸಂಪುಟ ಸರ್ಕಸ್: ಮುಖ್ಯಮಂತ್ರಿ ಯಡಿಯೂರಪ್ಪ ಸಭೆ

ಬೆಂಗಳೂರು,ನ.26-ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಾಳೆ ಬೆಳಗ್ಗೆ ಸಚಿವ ಸಂಪುಟ ಸಭೆ ನಡೆಯಲಿದೆ. ನಾಳೆ ಬೆಳಗ್ಗೆ 10.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸಚಿವಸಂಪುಟ ವಿಸ್ತರಣೆ ತೂಗುಯ್ಯಾಲೆಯಲ್ಲಿರುವಾಗಲೇ ಸಿಎಂ ನಾಳೆ ಕರೆದಿರುವ ಸಂಪುಟ ಸಭೆ ರಾಜಕೀಯ ವಲದಯಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ಕಳೆದ ಬಾರಿ ನಡೆದ ಸಂಪುಟ ಸಭೆಯಲ್ಲಿ ಸಂಪುಟದಿಂದ ಕೈಬಿಡುವ ಕೆಲ ಸಚಿವರ ಹೆಸರುಗಳ ಸುಳಿವು ನೀಡಿದ್ದರು …

Read More »

ದೇಶದಲ್ಲಿ ಸತತ ಎರಡು ವಾರದಿಂದ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

ನವದೆಹಲಿ, ನವೆಂಬರ್ 26: ದೇಶದಲ್ಲಿ ಸತತ ಎರಡು ವಾರದಿಂದ ದೈನಂದಿನ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ಇದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಕಳವಳ ಮೂಡಿಸಿದೆ. ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರದ ಆಸುಪಾಸಿನಲ್ಲಿರುತ್ತಿದ್ದು, ಚೇತರಿಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 44,489 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 92,66,706ಕ್ಕೆ …

Read More »

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಅಧ್ಯಕ್ಷ ಡಿ.ಕೆ.ಶಿವಕುಮಾರಗೆ ವಿಚಾರಣೆ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಚಾರಣೆಗಾಗಿ ಬುಧವಾರ ಸಿಬಿಐ ಮುಂದೆ ಹಾಜರಾದರು. ಆದರೆ, ಅಗಲಿದ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅನುಮತಿ ಕೋರಿದ ಹಿನ್ನೆಲೆಯಲ್ಲಿ ಕೇವಲ 1 ಗಂಟೆ ಕಾಲ ಮಾತ್ರ ವಿಚಾರಣೆ ನಡೆಸಲಾಯಿತು. ಮೊದಲೇ ನೋಟಿಸ್ ನೀಡಿದ್ದರಿಂದ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಸಿಬಿಐ ಕಚೇರಿಗೆ ಡಿಕೆ ಶಿವಕುಮಾರ್ ತೆರಳಿ ವಿಚಾರಣೆಗೆ …

Read More »

ನಿವಾರ್ ಚಂಡಮಾರುತ ಕುರಿತು ಗೃಹ ಅಮಿತ್ ಶಾ ತಮಿಳುನಾಡು, ಪುದುಚೇರಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ

ಚೆನ್ನೈ : ನಿವಾರ್ ಚಂಡಮಾರುತವು ಮತ್ತಷ್ಟು ಬಲವನ್ನು ಕಡಿಮೆ ಮಾಡುತ್ತದೆ ಮತ್ತು ಮುಂದಿನ ಮೂರು ಗಂಟೆಗಳಲ್ಲಿ ಚಂಡಮಾರುತದ ಬಿಳುಗಾಳಿಯನ್ನು ಸೃಷ್ಟಿ ಮಾಡಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಬೆಳಿಗ್ಗೆ ಪ್ರಕಟಿಸಿದೆ. ಗುರುವಾರ ಮುಂಜಾನೆ ಪುದುಚೇರಿ ಬಳಿ ನಿವಾರ್ಚಂಡಮಾರುತದಿಂದಾಗಿ ಭೂಕುಸಿತದ ಸಂಭವಿಸಿತ್ತು. ಪುದುಚೇರಿ ಮತ್ತು ತಮಿಳುನಾಡು ಎರಡೂ ಕಡೆ ಭಾರೀ ಮಳೆಯಾಗಿದೆ. ಐಎಂಡಿ ಪ್ರಕಾರ, ನಿವಾರ್ ಕೇಂದ್ರಾಡಳಿತ ಭೂಪ್ರದೇಶವನ್ನು ದಾಟಿದ ನಂತರ ತೀವ್ರವಾದ ಬಿರುಗಾಳಿಯಿಂದ ತೀವ್ರ ಚಂಡಮಾರುತಕ್ಕೆ ದುರ್ಬಲಗೊಂಡಿತು. …

Read More »

ವಿವಿಧ ಇಲಾಖೆಗಳ ನಿಗಮ-ಮಂಡಳಿಗಳಿಗೆ ಅಧಿಕಾರೇತರ ಸದಸ್ಯರ ನೇಮಕ

ಬೆಂಗಳೂರು : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಿಗಮ-ಮಂಡಳಿಗಳಿಗೆ ಅಧಿಕಾರೇತರ ಸದಸ್ಯರು ಹಾಗೂ ನಿರ್ದೇಶಕರನ್ನು ನಾಮನಿರ್ದೇಶನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಮಂಗಳವಾರ 33 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮುಂದುವರಿದ ಭಾಗವಾಗಿ ನಿಗಮ-ಮಂಡಳಿಗಳಿಗೆ ಅಧಿಕಾರೇತರ ಸದಸ್ಯರು ಹಾಗೂ ನಿರ್ದೇಶಕರು ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ವ್ಯಾಪ್ತಿಯಲ್ಲಿ ಬರುವ 5 ನಿಗಮಗಳಿಗೆ ನಾಮನಿರ್ದೇಶನಗೊಂಡ ಸದಸ್ಯರನ್ನು ಗಮನಿಸುವುದಾದರೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕರ್ನಾಟಕ ದ್ರಾಕ್ಷಾರಸ …

Read More »

ಡಿ.31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಬಂದ್

ಕೊರೋನಾ ಹಾವಳಿಯಿಂದ ಬಂದ್ ಆಗಿರುವ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಡಿಸೆಂಬರ್ 31ರವೆಗೂ ಬಂದ್ ಆಗಿರಲಿದೆ ಅಂತ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಪ್ರಕಟಣೆ ಹೊರಡಿಸಿದೆ. ಇದರ ಪ್ರಕಾರ ಕಾರ್ಗೋ ಅಥವಾ ಸರಕು ವಿಮಾನ ಹೊರತುಪಡಿಸಿ, ಕೇಸ್​ ಟು ಕೇಸ್ ಬೇಸಿಸ್ ಮೇಲೆ ಡಿಜಿಸಿಎ ಅನುಮತಿ ನೀಡಿರುವ ವಿಮಾನಗಳನ್ನ ಹೊರತುಪಡಿಸಿ ಬೇರೆ ಯಾವುದೇ ವಿಮಾನ ಭಾರತದಿಂದ ವಿದೇಶಕ್ಕೆ ಹಾರಾಟ ನಡೆಸುವಂತಿಲ್ಲ ಮತ್ತು ವಿದೇಶದಿಂದ ಯಾವುದೇ ವಿಮಾನ ಭಾರತದಲ್ಲಿ ಲ್ಯಾಂಡ್ ಆಗುವಂತಿಲ್ಲ. ಡಿಸೆಂಬರ್ …

Read More »