ಗೋಕಾಕ ಆ 29 :ರಾಜ್ಯೋತ್ಸವ ಪ್ರಶಸ್ತಿ ಪಡೆಯವ ಮುಖೇನ ಸಣ್ಣಾಟ ಬಯಲಾಟ ಕಲಾವಿದೆ ಶ್ರೀಮತಿ ಕೆಂಪವ್ವ ಹರಿಜನ ಇವರು ಗೋಕಾಕ ನಾಡಿನ ಕೀರ್ತಿಯನ್ನು ಉತ್ತಂಗಕ್ಕೆ ಏರಿಸಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಗುರುವಾರದಂದು ಸಮಿಪದ ಅರಬಾಂವಿ ಗ್ರಾಮದ ಕೆಂಪವ್ವ ಹರಿಜನ ಅವರ ಮನೆಯಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತೆ ಹಿನ್ನೆಲೆಯಲ್ಲಿ ಕರವೇ ವತಿಯಿಂದ ಅವರನ್ನು ಸತ್ಕರಿಸಿ ಅವರು ಮತನಾಡುತ್ತಿದ್ಧರು
ಕಳೆದ ನಾಲ್ಕು ದಶಕಗಳಿಂದ ಸಣ್ಣಾಟ (ಬಯಲಾಟ) ಕಲಾವಿದೆಯಾಗಿ ಕರ್ನಾಟಕ ,ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಬಯಲಾಟದ ಕಲೆಯನ್ನು ಜೀವಂತ ವಿಟ್ಟು ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಿ ಬಯಲಾಟ ಕಲೆಯನ್ನು ಕಲೆಯಲು ಮಾರ್ಗದರ್ಶನ ಮಾಡಿ ನಶಿಸಿ ಹೋಗುತ್ತಿರುವ ಕಲೆಯನ್ನು ಉಳಿಸಿ ಬೆಳೆಯಸುತ್ತಿರುವ ಕೆಂಪವ್ವ ಹರಿಜನ ಅವರು ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಗೋಕಾಕ ನಾಡಿನ ಕಲೆಗೆ ಸಂದ ಗೌರವವಾಗಿದೆ ಇವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿ ,ಪುರಸ್ಕಾರಗಳು ಒದಗಿ ಬರಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾದಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ , ಅಶೋಕ ಬಂಡಿವಡ್ಡರ , ನಿಜಾಮ ನಧಾಪ , ಲಕ್ಷ್ಮೀ ಅರಭಾಂವಿ , ಮಂಜವ್ವಾ ಅರಭಾಂವಿ , ಹೊಳೆವ್ವಾ ಅರಭಾಂವಿ , ಭಾರತಿ ಹರಿಜನ , ರಾಜು ಬಂಡಿವಡ್ಡರ , ನಾಗಪ್ಪಾ ಬಂಡಿವಡ್ಡರ , ಸಿದ್ರಾಂ ಬಂಡಿವಡ್ಡರ , ಸಂತೋಷ ಬಂಡಿವಡ್ಡರ , ಸುರೇಶ ಬಂಡಿವಡ್ಡರ ಇದ್ದರು .